ಅನುಭವ ಇಲ್ಲದವರನ್ನು ಕೆಲಸಕ್ಕೆ ತೆಗೆದುಕೊಂಡಿದ್ದೇ ಮೆಟ್ರೋ ಪಿಲ್ಲರ್ ಕುಸಿತಕ್ಕೆ ಕಾರಣ; BMRCL ನೌಕರರ ಸಂಘದ ‌ಉಪಾಧ್ಯಕ್ಷ ಆರೋಪ

Metro pillar collapse: ನನ್ನ ದೂರನ್ನು ಸರಿಯಾಗಿ ಪರಿಶೀಲನೆ ಮಾಡಿದಿದ್ದರೆ ಪಿಲ್ಲರ್ ಕುಸಿತ ಘಟನೆ ನಡೆಯುತ್ತಿರಲಿಲ್ಲ. ಸರಿಯಾದ ವಿದ್ಯಾರ್ಹತೆ, ಮೆಟ್ರೋ ಬಗ್ಗೆ ಅನುಭವ ಇಲ್ಲದವರನ್ನು ಎಂಡಿ ನೇಮಕ ಮಾಡಿಕೊಂಡಿದ್ದಾರೆ ಎಂದು ಬಿಎಂಆರ್​ಸಿಎಲ್ ನೌಕರರ ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿ ಆರೋಪಿಸಿದ್ದಾರೆ.

ಅನುಭವ ಇಲ್ಲದವರನ್ನು ಕೆಲಸಕ್ಕೆ ತೆಗೆದುಕೊಂಡಿದ್ದೇ ಮೆಟ್ರೋ ಪಿಲ್ಲರ್ ಕುಸಿತಕ್ಕೆ ಕಾರಣ; BMRCL ನೌಕರರ ಸಂಘದ ‌ಉಪಾಧ್ಯಕ್ಷ ಆರೋಪ
BMRCL ನೌಕರರ ಸಂಘದ ‌ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿ ಮತ್ತು ಮೆಟ್ರೋ ಎಂಡಿ ಅಂಜುಂ ಫರ್ವೆಜ್
Follow us
TV9 Web
| Updated By: Rakesh Nayak Manchi

Updated on:Jan 12, 2023 | 3:09 PM

ಬೆಂಗಳೂರು: ನಿರ್ಮಾಣ ಹಂತದಲ್ಲಿದ್ದ ನಮ್ಮ ಮೆಟ್ರೋ ಪಿಲ್ಲರ್ ರಾಡ್​ಗಳು ಕುಸಿದು ಬೀಳಲು (Metro pillar collapse) ಮೆಟ್ರೋ ಎಂಡಿ ನೇರ ಹೊಣೆ ಎಂದು ಬಿಎಂಆರ್​ಸಿಎಲ್ ನೌಕರರ ಸಂಘದ (BMRCL employees association) ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿ ಅವರು ಗಂಭೀರ ಆರೋಪ ಮಾಡಿದ್ದಾರೆ. ಬಿಎಂಆರ್​ಸಿಎಲ್ ಎಂಡಿ (BMRCL MD) ಅಂಜುಂ ಫರ್ವೆಜ್ ಅವರನ್ನು ಇಲ್ಲಿಂದ ವರ್ಗಾವಣೆ ಮಾಡಬೇಕು. ಎಂಡಿಗೆ ಮೆಟ್ರೋ ಬಗ್ಗೆ ಯಾವುದೇ ಅನುಭವವಿಲ್ಲ. ಮೆಟ್ರೋ ಬಗ್ಗೆ ಜ್ಞಾನ, ಅನುಭವ, ವಿದ್ಯಾರ್ಹತೆ ಇಲ್ಲದವರನ್ನು ನೇಮಕ ಮಾಡಿಕೊಂಡಿದ್ದೇ ನಾಗವಾರ ಮೆಟ್ರೋ ಪಿಲ್ಲರ್ ರಾಡುಗಳು ಕುಸಿಯಲು ಕಾರಣ ಎಂಬ ಗಂಭೀರ ಆರೋಪವನ್ನು ಸೂರ್ಯನಾರಾಯಣ ಮೂರ್ತಿ ಮಾಡಿದ್ದಾರೆ.

ನನ್ನ ದೂರನ್ನು ಸರಿಯಾಗಿ ಪರಿಶೀಲನೆ ಮಾಡಿದ್ರೆ ಈ ಘಟನೆ ನಡೆಯುತ್ತಿರಲಿಲ್ಲ. ಸರಿಯಾದ ವಿದ್ಯಾರ್ಹತೆ, ಮೆಟ್ರೋ ಬಗ್ಗೆ ಅನುಭವ ಇಲ್ಲದವರನ್ನು ಎಂಡಿ ನೇಮಕ ಮಾಡಿಕೊಂಡಿದ್ದಾರೆ. ಅನಧಿಕೃತವಾಗಿ 500ಕ್ಕೂ ಹೆಚ್ಚು ಜನರನ್ನು ಬಿಎಂಆರ್​ಸಿಎಲ್​‌ನಲ್ಲಿ ಕೆಲಸಕ್ಕೆ ತೆಗೆದುಕೊಂಡಿದ್ದಾರೆ. 65 ರಿಂದ 70 ವರ್ಷ ವಯಸ್ಸಾಗಿ ನಿವೃತ್ತಿವೊಂದಿದವರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಸೂರ್ಯನಾರಾಯಣ ಮೂರ್ತಿ ಅವರು ಆರೋಪಿಸಿದರು.

ಅರ್ಹತೆ ಇಲ್ಲದ ಇಂಜಿನಿಯರ್​ಗಳಿಂದ ಏನನ್ನು ಅಪೇಕ್ಷಿಕ್ಷಸಲು ಸಾಧ್ಯ ಎಂದು ಪ್ರಶ್ನಿಸಿದ ಸೂರ್ಯನಾರಾಯಣ ಮೂರ್ತಿ, ಮೆಟ್ರೋ ಬಗ್ಗೆ ಅಧ್ಯಯನ ಮಾಡಿದ ಯುವಕರಿಗೆ ಕೆಲಸ ನೀಡಿದಿದ್ದರೆ ಮೊನ್ನೆಯ ಅವಘಡ ತಪ್ಪುತ್ತಿತ್ತು. ನಾನು ಈಗಾಗಲೇ ರೈಲ್ವೆ ಸಚಿವರಿಗೆ, ಅರ್ಬನ್ ಡೆವಲಪ್ಮೆಂಟ್ ಡಿಪಾರ್ಟ್ಮೆಂಟ್ ಹಾಗೂ ರಾಜ್ಯದ ಮುಖ್ಯಮಂತ್ರಿಯವರಿಗೆ ಸರಿಯಾದ ಅನುಭವ ಇಲ್ಲದವರನ್ನು ಕೆಲಸಕ್ಕೆ ತೆಗೆದುಕೊಂಡಿದ್ದಾರೆ ಎಂದು ದೂರು ನೀಡಿದ್ದೇನೆ. ಸುಮಾರು 500 ಜನರನ್ನು ಯಾವುದೇ ನೋಟಿಫಿಕೇಷನ್ ಮಾಡದೆ ಕೆಲಸ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ: ಮೆಟ್ರೋ ಪಿಲ್ಲರ್ ರಾಡ್​ಗಳು ಬಿದ್ದು ತಾಯಿ ಮಗನ ಸಾವು ಪ್ರಕರಣ; ಮುಖ್ಯ ಎಂಜಿನಿಯರ್ ಮೊರೆ ಹೋದ ಖಾಕಿ

ಗುತ್ತಿಗೆದಾರ ಕೆಲಸ ಮಾಡುವ ವೇಳೆ ಬಿಎಂಆರ್​ಸಿಎಲ್ ಅಧಿಕಾರಿಗಳು ಪರಿಶೀಲನೆ ಮಾಡುವುದು ಅವರ ಕರ್ತವ್ಯವಾಗಿದೆ. ಆದರೆ ಟನೆ ನಡೆದು ನಾಲ್ಕು ಗಂಟೆ ಆದ ಮೇಲೆ ಎಂಡಿ ಸ್ಥಳಕ್ಕೆ ಹೋಗಿದ್ದಾರೆ. ಇವರಿಗೆ ಎಷ್ಟರ ಮಟ್ಟಿಗೆ ಜನರ ಬಗ್ಗೆ ಕಾಳಜಿ ಇದೆ ಎಂದು ಇದರಲ್ಲೇ ಗೊತ್ತಾಗುತ್ತದೆ. ಬಿಎಂಆರ್​ಸಿಎಲ್ ಇ‌ಂಜಿನಿಯರ್​​ಗಳು ಪ್ರತಿದಿನ ಸಿವಿಲ್ ಕಾಮಗಾರಿಗಳನ್ನು ತಪಾಸಣೆ ಮಾಡಿಲ್ಲ. ಎಂಡಿಗೂ ಅಷ್ಟೊಂದು ಅನುಭವವಿಲ್ಲ, ನಾನು ಸಿಎಂಗೆ ಈ ಘಟನೆ ಬಗ್ಗೆ ಪತ್ರ ಬರೆಯುತ್ತೆನೆ ಎಂದರು.

ನಾನು ಕೊಟ್ಟ ದೂರನ್ನು ‌ಸರಿಯಾಗಿ ಪರಿಶೀಲಿಸಿದರೆ ಈ ಘಟನೆ ನಡೆಯುತ್ತಿರಲಿಲ್ಲ. ಮೊದಲು ಎಂಡಿ ಅಂಜುಂ ಫರ್ವೆಜ್ ಅನ್ನು ಇಲ್ಲಿಂದ ವರ್ಗಾವಣೆ ಮಾಡಬೇಕು. ಮೆಟ್ರೋ ಬಗ್ಗೆ ಅನುಭವ ಇಲ್ಲದ, ವಿದ್ಯಾರ್ಹತೆ ಇಲ್ಲದೇ ನೇಮಕಗೊಂಡಿರುವವರನ್ನು ಕೆಲಸದಿಂದ ವಜಾ ಮಾಡಬೇಕೆಂದು ಮನವಿ ಮಾಡುತ್ತೇನೆ. ಮೆಟ್ರೋ ಬಗ್ಗೆ ಅನುಭವ ಇರುವ ಯುವಕರನ್ನು ಹೊಸದಾಗಿ ನೇಮಕ‌ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:09 pm, Thu, 12 January 23

ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ