
ಬೆಂಗಳೂರು, ನವೆಂಬರ್ 18: ನಗರದಲ್ಲಿ ಐದನೇ ಬಾರಿ ಮೆಟ್ರೋ (Namma Metro) ರೈಲಿನ ಮೂಲಕ ಮಾನವನ ಜೀವಂತ ಹೃದಯವನ್ನು ಸುರಕ್ಷಿತವಾಗಿ ರವಾನೆ ಮಾಡುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಕೇವಲ 7 ನಿಮಿಷಗಳಲ್ಲಿ ಯೆಲ್ಲೋ ಲೈನಿನ ಮೆಟ್ರೋದಲ್ಲಿ ಹೃದಯವನ್ನು ರವಾನಿಸಲಾಗಿಸಲಾಗಿದ್ದು, ಸುರಕ್ಷಿತವಾಗಿ ಹಸ್ತಾಂತರಿಸಲಾಗಿದೆ.
ಕೇವಲ 7 ನಿಮಿಷಗಳಲ್ಲಿ ಹೃದಯ ರವಾನೆ
ಅಸ್ಟರ್ ಆರ್.ವಿ. ಆಸ್ಪತ್ರೆಯಲ್ಲಿ ಸಂಗ್ರಹಿಸಲ್ಪಟ್ಟ ಹೃದಯವನ್ನು, ನಾರಾಯಣ ಹೃದಯಾಲಯದ ರೋಗಿಗೆ ತುರ್ತು ಅವಶ್ಯಕತೆಯ ಹಿನ್ನೆಲೆಯಲ್ಲಿ, ನಿನ್ನೆ ಸಂಜೆ 7.26ಕ್ಕೆ ವೈದ್ಯಕೀಯ ತಂಡವು ರಾಗಿಗುಡ್ಡ ಮೆಟ್ರೋ ನಿಲ್ದಾಣಕ್ಕೆ ತಂದಿತ್ತು. ಯೆಲ್ಲೋ ಲೈನಿನ ರಾಗಿಗುಡ್ಡ ಮೆಟ್ರೋ ಸ್ಟೇಷನ್‌ನಿಂದ ಬೊಮ್ಮಸಂದ್ರ ಮೆಟ್ರೋ ಸ್ಟೇಷನ್‌ವರೆಗೆ ಕೇವಲ 7 ನಿಮಿಷಗಳಲ್ಲಿ, ಒಟ್ಟು 15 ಮೆಟ್ರೋ ನಿಲ್ದಾಣಗಳನ್ನು ದಾಟಿ ಹೃದಯವನ್ನು ಸಾಗಿಸಲಾಯಿತು.
ಹೃದಯ ಸಾಗಾಣೆಯ ವೀಡಿಯೋ ಇಲ್ಲಿದೆ
ಇದನ್ನೂ ಓದಿ ಬೆಂಗಳೂರು: ಮೆಟ್ರೋ ನಿಲ್ದಾಣಕ್ಕೆ ಬಾಂಬ್ ಬೆದರಿಕೆ; ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎಫ್ಐಆರ್
ಆರು ಜನರ ವೈದ್ಯಕೀಯ ತಂಡವು ಭದ್ರತಾ ಪರಿಶೀಲನೆ ಮುಗಿಸಿ 7.29ಕ್ಕೆ ಮೆಟ್ರೋ ಪ್ಲಾಟ್‌ಫಾರ್ಮ್ ತಲುಪಿದ್ದು, 7.32ಕ್ಕೆ ವಿಶೇಷ ಸೌಲಭ್ಯ ಒದಗಿಸಿದ ತರಬೇತಿ ಪಡೆದ ಸಿಬ್ಬಂದಿಗಳೊಂದಿಗೆ ರೈಲನ್ನು ಹತ್ತಿದ್ದರು. ರೈಲು 7.39ಕ್ಕೆ ಬೊಮ್ಮಸಂದ್ರ ಮೆಟ್ರೋ ನಿಲ್ದಾಣ ತಲುಪಿದ ನಂತರ, ಹೃದಯವನ್ನು ತಕ್ಷಣ ಆಂಬ್ಯುಲೆನ್ಸ್‌ಗೆ ಸ್ಥಳಾಂತರಿಸಲಾಯಿತು. ನಂತರ ಆಂಬ್ಯುಲೆನ್ಸ್ 8.12ಕ್ಕೆ ನಾರಾಯಣ ಹೃದಯಾಲಯ ತಲುಪಿ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಿತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:12 pm, Tue, 18 November 25