AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೆಕ್ ಸಮಿಟ್​ನಲ್ಲಿ ಕರ್ನಾಟಕದ ಕಿಯೋ ಪಿಸಿ ಆಕರ್ಷಣೆ; ಅಗ್ಗದ ಬೆಲೆಗೆ ಎಐ ಕಂಪ್ಯೂಟರ್

Affordable AI ready KEO computer, among attractions in Bengaluru Tech Summit 2025: ಕಂಪ್ಯೂಟರ್ ಕ್ಷೇತ್ರದಲ್ಲಿ ಸಂಚಲನ ಮೂಡಿಸಬಲ್ಲ ಎಐ ಶಕ್ತ ಕಿಯೋ ಎನ್ನುವ ಮೈಕ್ರೋಪಿಸಿಯನ್ನು ಕರ್ನಾಟಕ ಸರ್ಕಾರ ಅಭಿವೃದ್ದಿಪಡಿಸಿದೆ. ಅಗ್ಗದ ಬೆಲೆಗೆ ಸಿಗುವ ಈ ಕಿಯೋ ಕಂಪ್ಯೂಟರ್ ಬೆಂಗಳೂರು ಟೆಕ್ ಸಮಿಟ್​ನ ಪ್ರಮುಖ ಆಕರ್ಷಣೆ ಎನಿಸಿದೆ. ಕರ್ನಾಟಕ ಸರ್ಕಾರದ ಐಟಿ ಇಲಾಖೆ ಹಾಗೂ ಕಿಯೋನಿಕ್ಸ್ ಸಂಸ್ಥೆ ಜಂಟಿಯಾಗಿ ಈ ಪಿಸಿ ಅಭಿವೃದ್ಧಿಪಡಿಸಿದೆ.

ಟೆಕ್ ಸಮಿಟ್​ನಲ್ಲಿ ಕರ್ನಾಟಕದ ಕಿಯೋ ಪಿಸಿ ಆಕರ್ಷಣೆ; ಅಗ್ಗದ ಬೆಲೆಗೆ ಎಐ ಕಂಪ್ಯೂಟರ್
ಸಾಂದರ್ಭಿಕ ಚಿತ್ರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Nov 18, 2025 | 3:00 PM

Share

ಬೆಂಗಳೂರು, ನವೆಂಬರ್ 18: ಕರ್ನಾಟಕ ಸರ್ಕಾರದ ವತಿಯಿಂದ ಅಗ್ಗದ ಬೆಲೆಗೆ ಎಐ ಶಕ್ತ ಕಂಪ್ಯೂಟರ್​ವೊಂದನ್ನು (AI ready computer) ಅಭಿವೃದ್ಧಿಪಡಿಸಲಾಗಿದೆ. ಇವತ್ತು ಚಾಲನೆಗೊಂಡ ಬೆಂಗಳೂರು ಟೆಕ್ ಸಮಿಟ್ 2025ನಲ್ಲಿ (Bengaluru Tech Summit- 2025) ಈ ವಿಶೇಷ ಪಿಸಿಯನ್ನು ಅನಾವರಣಗೊಳಿಸಲಾಗಿದೆ. ಕರ್ನಾಟಕ ಸರ್ಕಾರೀ ಸ್ವಾಮ್ಯದ ಕಿಯೋನಿಕ್ಸ್ ಸಂಸ್ಥೆ ಹಾಗೂ ಐಟಿ ಬಿಟಿ ಇಲಾಖೆ ಜಂಟಿಯಾಗಿ ಸೇರಿ ಈ ಪರ್ಸನಲ್ ಕಂಪ್ಯೂಟರ್ (Micro PC) ಅನ್ನು ಅಭಿವೃದ್ದಿಪಡಿಸಿವೆ. ಈ 28ನೇ ಆವೃತ್ತಿಯ ಟೆಕ್ ಸಮಿಟ್​ನಲ್ಲಿ ಈ ಕಿಯೋ ಕಂಪ್ಯೂಟರ್ (KEO computer) ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.

ಏನಿದು ಕಿಯೋ ಕಂಪ್ಯೂಟರ್?

ಕಿಯೋ (KEO) ಎಂಬುದು ಒಂದು ಸಣ್ಣ ಪರ್ಸನಲ್ ಕಂಪ್ಯೂಟರ್ ಅಥವಾ ಪಿಸಿ. ಇದು ಜ್ಞಾನ ಆಧಾರಿತವಾದ, ಅಗ್ಗವಾಗಿರುವ ಮತ್ತು ಮುಕ್ತ ಕಂಪ್ಯೂಟಿಂಗ್ ಇರುವ ಕಂಪ್ಯೂಟರ್ (KEO- Knowledge based, Economical and Open computing). ದುಬಾರಿ ಬೆಲೆಯ ಕಂಪ್ಯೂಟರ್, ಲ್ಯಾಪ್​ಟಾಪ್ ಖರೀದಿಸಲು ಶಕ್ತರಲ್ಲದ ಕೆಳ ಮಧ್ಯಮ ವರ್ಗದ ಜನರ ಕೈಗೆ ಕಡಿಮೆ ಬೆಲೆ ಪ್ರಬಲ ಕಂಪ್ಯೂಟರ್ ಒದಗಿಸುವ ಉದ್ದೇಶದಿಂದ ರೂಪಿಸಲಾದ ಪಿಸಿ ಇದು.

ಇದನ್ನೂ ಓದಿ: ಬೆಂಗಳೂರು ಟೆಕ್ ಸಮಿಟ್ 2025ಗೆ ಚಾಲನೆ; ಸ್ಟಾರ್ಟಪ್ ನಗರಿಯಲ್ಲಿ 3 ದಿನ ತಂತ್ರಜ್ಞಾನ ಶಕ್ತಿ ಅನಾವರಣ

ಕಿಯೋ ಪಿಸಿಯಲ್ಲಿ ಏನಿದೆ ವಿಶೇಷತೆ?

ಇದು ಎಐ ಶಕ್ತ ಪಿಸಿಯಾಗಿದೆ. 4ಜಿ, ವೈಫೈ, ಈತರ್​ನೆಟ್, ಯುಎಸ್​ಬಿ ಎ, ಯುಎಸ್​ಬಿ ಸಿ ಪೋರ್ಟ್​ಗಳು, ಎಚ್​ಡಿಎಂಐ, ಆಡಿಯೋ ಜ್ಯಾಕ್​ಗಳನ್ನು ಇದು ಹೊಂದಿದೆ. ಇಂಟರ್ನೆಟ್ ಇಲ್ಲದಿದ್ದರೂ ಕೆಲಸ ಮಾಡಬಲ್ಲಂತೆ ಎಐ ಅನ್ನು ಶಕ್ತಗೊಳಿಸಲಾಗಿದೆ. ಕಲಿಕೆ, ಪ್ರೋಗ್ರಾಮಿಂಗ್ ಮತ್ತು ಪ್ರೊಡಕ್ಟಿವಿಟಿ ಸಾಧನಗಳನ್ನು ಪ್ರೀ ಇನ್​ಸ್ಟಾಲ್ ಮಾಡಲಾಗಿರುತ್ತದೆ.

ವಿದ್ಯಾರ್ಥಿಗಳಿಗೆ ಬುದ್ಧ ಏಜೆಂಟ್

ಈ ಕಂಪ್ಯೂಟರ್​ನಲ್ಲಿ ಮತ್ತೊಂದು ವಿಶೇಷತೆ ಎಂದರೆ ಬುದ್ಧ್ (BUDDH) ಎನ್ನುವ ಎಐ ಏಜೆಂಟ್. ಕರ್ನಾಟಕ ರಾಜ್ಯದ ಡಿಎಸ್​ಇಆರ್​ಟಿ ಸಿಲಾಬಸ್​ನಲ್ಲಿ ಟ್ರೈನ್ ಆಗಿರುವ ಎಐ ಏಜೆಂಟ್ ಇದು. ಕಿಯೋ ಕಂಪ್ಯೂಟರ್​​ನಲ್ಲಿ ಈ ಎಐ ಏಜೆಂಟ್ ಪ್ರೀಲೋಡೆಡ್ ಆಗಿ ಬಂದಿರುತ್ತದೆ. ಇಂಟರ್ನೆಟ್ ಇಲ್ಲದೆಯೂ ಆಫ್​ಲೈನ್​ನಲ್ಲೇ ಈ ಎಐ ಏಜೆಂಟ್ ಕೆಲಸ ಮಾಡಬಲ್ಲುದು.

ಇದನ್ನೂ ಓದಿ: ವಾರಕ್ಕೆ 72 ಗಂಟೆ ಕೆಲಸ: ಚೀನಾದ ನಿದರ್ಶನ ನೀಡಿದ ನಾರಾಯಣಮೂರ್ತಿ

ಶಾಸಕ ಶರತ್ ಬಚ್ಚೇಗೌಡ ಅಧ್ಯಕ್ಷರಾಗಿರುವ ಕಿಯೋನಿಕ್ಸ್ ಸಂಸ್ಥೆ (Keonics) ಅಭಿವೃದ್ದಿಪಡಿಸಿರುವ ಕಿಯೋ ಪಿಸಿಗೆ ಓಪನ್ ಸೋರ್ಸ್ ಆರ್​ಐಎಸ್​ಸಿ-ವಿ ಪ್ರೋಸಸರ್ (RISC-V Processor) ಅಳವಡಿಸಲಾಗಿದೆ. ವಿಂಡೋಸ್ ಬದಲು ಲೈನಕ್ಸ್ ಆಧಾರಿತವಾದ ಆಪರೇಟಿಂಗ್ ಸಿಸ್ಟಂ ಸ್ಥಾಪಿಸಲಾಗಿದೆ. ಮೊನ್ನೆ ಬೆಂಗಳೂರು ಟೆಕ್ ಸಮಿಟ್​ನ ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಕಿಯೋ ಕಂಪ್ಯೂಟರ್ ಅಭಿವೃದ್ಧಿಯನ್ನು ಬಹಳ ಮಹತ್ವದ ಬೆಳವಣಿಗೆ ಎಂದು ಬಣ್ಣಿಸಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:57 pm, Tue, 18 November 25

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More