Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಮರ ಬಿದ್ದು ಸಂಭವಿಸುವ ಹಾನಿಗಳು ವಿಮೆ ವ್ಯಾಪ್ತಿಗೆ ಒಳಪಡುತ್ತವೆಯೇ?

ಬೆಂಗಳೂರಿನಲ್ಲಿ ಮಳೆಗಾಲದಲ್ಲಿ ಯಾವುದೇ ಸಮಯದಲ್ಲಿ ಇಂತಹ ಘಟನೆಗಳು ಸಂಭವಿಸಬಹುದು. ಮುಂಗಾರು ಮಳೆಯ ಸಂದರ್ಭದಲ್ಲಿ ಈ ರೀತಿಯ ಘಟನೆಗಳನ್ನು ಸಂಪೂರ್ಣ ತಪ್ಪಿಸುವುದು ಅಸಾಧ್ಯ. ಹೀಗಾಗಿ ಇಂಥ ಸಂದರ್ಭಗಳಲ್ಲಿ ಪರಿಹಾರ ಪಡೆಯಲು ವಿಮೆ ಮಾಡಿಸಿಕೊಳ್ಳುವುದು ಉತ್ತಮ ಎನ್ನುತ್ತಾರೆ ತಜ್ಞರು.

ಬೆಂಗಳೂರಿನಲ್ಲಿ ಮರ ಬಿದ್ದು ಸಂಭವಿಸುವ ಹಾನಿಗಳು ವಿಮೆ ವ್ಯಾಪ್ತಿಗೆ ಒಳಪಡುತ್ತವೆಯೇ?
ಬೆಂಗಳೂರಿನಲ್ಲಿ ಉರುಳಿಬಿದ್ದ ಮರದ ಕೆಳಗೆ ಕಾರೊಂದು ಸಿಲುಕಿಕೊಂಡಿದೆImage Credit source: Twitter/ @Jointcptraffic
Follow us
TV9 Web
| Updated By: Ganapathi Sharma

Updated on:Jul 16, 2023 | 11:09 AM

ಬೆಂಗಳೂರು. ಜುಲೈ 16: ಬೆಂಗಳೂರು ನಗರದ (Bangalore) ಜನನಿಬಿಡ ರಸ್ತೆಯೊಂದರಲ್ಲಿ ಮರವೊಂದು ಬಿದ್ದ ಪರಿಣಾಮ ಕಾಲೇಜು ವಿದ್ಯಾರ್ಥಿಯೊಬ್ಬ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಈ ರೀತಿಯ ಘಟನೆ ಇದೇ ಮೊದಲು ಅಥವಾ ಕೊನೆಯದಲ್ಲ. ಮಳೆಗಾಲದ ಸಂದರ್ಭದಲ್ಲಿ ನಗರದಲ್ಲಿ ಇಂಥ ಘಟನೆಗಳು ಸಂಭವಿಸಿದ ಬಗ್ಗೆ ಆಗಾಗ್ಗೆ ಕೇಳುತ್ತಿರುತ್ತೇವೆ. ಇಂಥ ಸಂದರ್ಭಗಳಲ್ಲಿ ಹಾನಿಯಾಗಿರುವುದಕ್ಕೆ ವಿಮಾ ಪರಿಹಾರ ದೊರೆಯುತ್ತದೆಯೇ?

ಇಂಥ ಪ್ರಕರಣದಲ್ಲಿ, ಸಂತ್ರಸ್ತರಿಗೆ ಪರಿಹಾರವನ್ನು ಪಾವತಿಸಲು ನಿಗಮ ಅಥವಾ ಪುರಸಭೆ ನಿರ್ಧರಿಸಬಹುದು ಎಂದು ಸಾಮಾನ್ಯ ವಿಮಾ ಸಲಹೆಗಾರ ಮತ್ತು ತಜ್ಞ ಹರಿ ರಾಧಾಕೃಷ್ಣನ್ ಹೇಳಿರುವುದಾಗಿ ‘ನ್ಯೂಸ್ 9’ ವರದಿ ಮಾಡಿದೆ.

ಬೆಂಗಳೂರಿನಲ್ಲಿ ಮಳೆಗಾಲದಲ್ಲಿ ಯಾವುದೇ ಸಮಯದಲ್ಲಿ ಇಂತಹ ಘಟನೆಗಳು ಸಂಭವಿಸಬಹುದು. ಮುಂಗಾರು ಮಳೆಯ ಸಂದರ್ಭದಲ್ಲಿ ಈ ರೀತಿಯ ಘಟನೆಗಳನ್ನು ಸಂಪೂರ್ಣ ತಪ್ಪಿಸುವುದು ಅಸಾಧ್ಯ. ಹೀಗಾಗಿ ಇಂಥ ಸಂದರ್ಭಗಳಲ್ಲಿ ಪರಿಹಾರ ಪಡೆಯಲು ವಿಮೆ ಮಾಡಿಸಿಕೊಳ್ಳುವುದು ಉತ್ತಮ ಎನ್ನುತ್ತಾರೆ ತಜ್ಞರು.

ನೀವು ವಿಮೆ ಮಾಡಿದ್ದೀರಾ?

ಮೇಲೆ ತಿಳಿಸಿದ ಘಟನೆಗೆ ಕಾರಣವಾದ ಮರವು ಸಾರ್ವಜನಿಕ ಆಸ್ತಿಯಾಗಿದೆ (ರಸ್ತೆ). ಮನೆ ಅಥವಾ ಆಸ್ತಿಯ ಮಾಲೀಕರಿಗೆ ಮರ ಬೀಳುವಿಕೆ / ತೆಂಗಿನಕಾಯಿ ಬೀಳುವಿಕೆ ಇತ್ಯಾದಿಗಳಿಂದ ಉಂಟಾಗುವ ಸಮಸ್ಯೆಗೆ ಪರಿಹಾರ ಪಡೆಯಲು ವಿಮೆ ಒಂದು ಉತ್ತಮ ಮಾರ್ಗವಾಗಿದೆ ಎಂದು ರಾಧಾಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.

ಮರವು ಖಾಸಗಿ ಆಸ್ತಿ ಅಥವಾ ಮನೆಯಿಂದ ಆವರಣದಲ್ಲಿದ್ದು ಅದು ಬಿದ್ದಿದ್ದರೆ ಆಸ್ತಿ ಅಥವಾ ಮನೆಯ ಮಾಲೀಕರು ಜವಾಬ್ದಾರರಾಗುತ್ತಾರೆ. ಇಂಥ ಸಂದರ್ಭಗಳಲ್ಲಿ ಆಸ್ತಿ ಅಥವಾ ಮನೆ ಮಾಲೀಕರು ಗೃಹ ವಿಮಾ ರಕ್ಷಣೆಯನ್ನು ಹೊಂದಿರಬೇಕು.

ದುರದೃಷ್ಟವಶಾತ್ ಭಾರತದಲ್ಲಿ ಆಸ್ತಿ ಅಥವಾ ಮನೆ ಮಾಲೀಕರು ಅಂತಹ ಗೃಹ ವಿಮಾ ರಕ್ಷಣೆಯನ್ನು ಹೊಂದಿಲ್ಲ ಮತ್ತು ಇವುಗಳ ಬಗ್ಗೆ ಮಾಹಿತಿ ಇರುವವರು ಕಡಿಮೆ ಎಂದು ರಾಧಾಕೃಷ್ಣನ್ ವಿಷಾದ ವ್ಯಕ್ತಡಿಸಿದ್ದಾರೆ.

ಇದನ್ನೂ ಓದಿ:  ಪ್ರಯಾಣಿಕರ ಗಮನಕ್ಕೆ: ಜು.18 ರಿಂದ ಪ್ಲಾಟ್‌ಫಾರ್ಮ್ 1 ರ ಮೂಲಕ ಯಶವಂತಪುರ ರೈಲು ನಿಲ್ದಾಣದ ಪ್ರವೇಶಕ್ಕೆ ನಿಷೇಧ

ಆಸ್ತಿ ಹಾಗೂ ಮನೆ ಮಾಲೀಕರು ಮಾಡಿಸುವ ಗೃಹ ವಿಮಾ ರಕ್ಷಣೆಯಲ್ಲಿ ಸಾರ್ವಜನಿಕ ಹೊಣೆಗಾರಿಕೆಯ ಷರತ್ತನ್ನು ಸಹ ಸೇರಿಸಬೇಕು ಎನ್ನುತ್ತಾರೆ ರಾಧಾಕೃಷ್ಣನ್.

ಖಾಸಗಿ ಆಸ್ತಿಯಿಂದ ರಸ್ತೆಗೆ ಮರ ಬೀಳುವ ಸಂದರ್ಭದಲ್ಲಿ ಆಸ್ತಿಗೆ (ಕಾರುಗಳು / ವಾಹನಗಳು) ಆಗುವ ಹಾನಿಗೆ ಖಾಸಗಿ ಆಸ್ತಿದಾರರನ್ನೇ ಹೊಣೆಗಾರಿಕೆ ಮಾಡಿ ಸಾರ್ವಜನಿಕ ಹೊಣೆಗಾರಿಕೆ ಷರತ್ತು ವಿಧಿಸಬೇಕು ಎಂದು ಅವರು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:51 am, Sun, 16 July 23