ನಂದಿಬೆಟ್ಟಕ್ಕೆ ಹರಿದು ಬಂದ ಪ್ರವಾಸಿಗರು; ಟಾಯ್ಲೆಟ್​ಗೆ ಸಮಸ್ಯೆ, ಗಂಟೆಗಟ್ಟಲೆ ಕ್ಯೂನಲ್ಲಿ ನಿಂತ ಲೇಡಿಸ್

ನಂದಿಬೆಟ್ಟಕ್ಕೆ ಹರಿದು ಬಂದ ಪ್ರವಾಸಿಗರು; ಟಾಯ್ಲೆಟ್​ಗೆ ಸಮಸ್ಯೆ, ಗಂಟೆಗಟ್ಟಲೆ ಕ್ಯೂನಲ್ಲಿ ನಿಂತ ಲೇಡಿಸ್

ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 16, 2023 | 1:00 PM

ವೀಕೆಂಡ್ ಹಿನ್ನೆಲೆ ಚಿಕ್ಕಬಳ್ಳಾಪುರದ ನಂದಿಬೆಟ್ಟಕ್ಕೆ ಪ್ರವಾಸಿಗರ ದಂಡೇ ಹರಿದು ಬಂದಿದ್ದು, ಪ್ರವಾಸಿಗರು ಹೆಚ್ಚಾದ ಹಿನ್ನೆಲೆ ಮಿರ್ಜಾ ಸರ್ಕಲ್​ನಿಂದ ಗಿರಿಧಾಮದ ತುತ್ತ ತುದಿಯವರೆಗೂ ಟ್ರಾಫಿಕ್ ಜಾಮ್ ಉಂಟಾಗಿದೆ.

ಚಿಕ್ಕಬಳ್ಳಾಪುರ: ವೀಕೆಂಡ್ ಹಿನ್ನೆಲೆ ಚಿಕ್ಕಬಳ್ಳಾಪುರದ ನಂದಿಬೆಟ್ಟ(Nandi Hills)ಕ್ಕೆ ಪ್ರವಾಸಿಗರ ದಂಡೇ ಹರಿದು ಬಂದಿದೆ. ಪ್ರವಾಸಿಗರು ಹೆಚ್ಚಾದ ಹಿನ್ನೆಲೆ ಮಿರ್ಜಾ ಸರ್ಕಲ್​ನಿಂದ ಗಿರಿಧಾಮದ ತುತ್ತ ತುದಿಯವರೆಗೂ ಟ್ರಾಫಿಕ್ ಜಾಮ್ ಉಂಟಾಗಿದ್ದು, ಕಾರು ಹಾಗೂ ಬೈಕ್​ಗಳನ್ನು ದಾರಿಯಲ್ಲೆ ಬಿಟ್ಟು ಕಾಲ್ನೇಡಿಗೆಯಲ್ಲಿ ಪ್ರವಾಸಿಗರು ಬೆಟ್ಟ ಹತ್ತಿದ್ದಾರೆ. ಇತ್ತ ಶೌಚಾಲಯಕ್ಕೆ ತೆರಳಲೂ ಮಹಿಳೆಯರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆ ಸೂಕ್ತ ವ್ಯವಸ್ಥೆ ಮಾಡಿಲ್ಲ ಎಂದು ಜಿಲ್ಲಾಡಳಿತದ ವಿರುದ್ಧ ಪ್ರವಾಸಿಗರು ಕಿಡಿ ಕಾರಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ