
ಬೆಂಗಳೂರು, ಅಕ್ಟೋಬರ್ 30: ನಮ್ಮ ಮೆಟ್ರೋ (Namma Metro) ಸಿಲಿಕಾನ್ ಸಿಟಿ ಜನರ ನೆಚ್ಚಿನ ಸಾರಿಗೆ ವ್ಯವಸ್ಥೆ ಮಾತ್ರ ಅಲ್ಲದೇ, ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವ ರೋಗಿಗಳ ಪಾಲಿಗೂ ವರದಾನವಾಗಿದೆ. ಏಕೆಂದರೆ ಇಂದು ಒಂದೇ ದಿನ ಹೃದಯ ಮತ್ತು ಶ್ವಾಸಕೋಶವನ್ನು ಯಶಸ್ವಿಯಾಗಿ ಸಾಗಾಟ ಮಾಡಲಾಗಿದೆ. ಆ ಮೂಲಕ ಜೀವ ರಕ್ಷಣೆಗೆ ನಮ್ಮ ಮೆಟ್ರೋದಿಂದ ಮತ್ತೊಂದು ಮಾನವೀಯ ಸೇವೆ ಒದಗಿಸಲಾಗಿದೆ.
ನಮ್ಮ ಮೆಟ್ರೋ ರೈಲಿನಲ್ಲಿ ಈಗಾಗಲೇ ಯಶಸ್ವಿಯಾಗಿ ಮಾನವ ಅಂಗಾಂಗ ಸಾಗಾಟ ಮಾಡಲಾಗಿದೆ. ಸದ್ಯ ಒಂದೇ ದಿನ ಹೃದಯ ಮತ್ತು ಶ್ವಾಸಕೋಶವನ್ನು ಸಾಗಾಟ ಮಾಡಲಾಗಿದೆ. ಸದ್ಯ ವೈದ್ಯರ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಟ್ರಾಫಿಕ್ ಸಮಸ್ಯೆ ಹಿನ್ನೆಲೆ ನಮ್ಮ ಮೆಟ್ರೋ ಆಯ್ಕೆ ಮಾಡಿಕೊಂಡ ವೈದ್ಯರ ತಂಡ, ಯಶವಂತಪುರದಿಂದ ನಾರಾಯಣ ಹೆಲ್ತ್ ಸಿಟಿಗೆ ಕೇವಲ 61 ನಿಮಿಷದಲ್ಲಿ ವೈದ್ಯರ ತಂಡ ಶ್ವಾಸಕೋಶವನ್ನು ಆಸ್ಪತ್ರೆ ತಲುಪಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಮೆಟ್ರೋ ರೈಲಿನ ಮೂಲಕ ಯಶಸ್ವಿಯಾಗಿ ಹೃದಯ ಸಾಗಾಟ!
ಯಶವಂತಪುರ ಟು ಆರ್.ವಿ ರೋಡ್ವರೆಗೆ ಗ್ರೀನ್ ಲೈನ್ನಲ್ಲಿ ಸಂಚರಿಸಿ, ಬಳಿಕ ಆರ್.ವಿ ರೋಡ್ ಟು ಬೊಮ್ಮಸಂದ್ರವರೆಗೆ ಹಳದಿ ಲೈನ್ನಲ್ಲಿ ಸಂಚಾರ ಮಾಡಿದ್ದಾರೆ. ಕೇವಲ 61 ನಿಮಿಷದಲ್ಲಿ ಶ್ವಾಸಕೋಶವನ್ನು ವೈದ್ಯರ ತಂಡ ನಾರಾಯಣ ಹೆಲ್ತ್ ಸಿಟಿಗೆ ರವಾನಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಸ್ಪರ್ಶ ಆಸ್ಪತ್ರೆ ವೈದ್ಯಕೀಯ ತಂಡಕ್ಕೂ ಮೆಟ್ರೋ ಮೂಲಕ ನೆರವು ನೀಡಲಾಗಿದೆ. ಗೋರಗುಂಟೆಪಾಳ್ಯದಿಂದ ಬನಶಂಕರಿವರೆಗೆ ಕೇವಲ 41 ನಿಮಿಷಗಳಲ್ಲಿ ಹೃದಯ ಸಾಗಾಟ ಮಾಡಲಾಗಿದೆ. 17 ನಿಲ್ದಾಣಗಳ ದೂರ ಕೇವಲ 41 ನಿಮಿಷಗಳಲ್ಲಿ ಮೆಟ್ರೋ ಕ್ರಮಿಸಿದ್ದು, ಅಸ್ಟರ್ ಆರ್‌ವಿ ಆಸ್ಪತ್ರೆಗೆ ಹೃದಯವನ್ನು ಸುರಕ್ಷಿತವಾಗಿ ತಲುಪಿಸಲಾಗಿದೆ. ಬಿಎಂಆರ್ಸಿಎಲ್ ಮತ್ತು ವೈದ್ಯಕೀಯ ತಂಡ ಹಾಗೂ ನಿಲ್ದಾಣ ಅಧಿಕಾರಿಗಳ ಸಹಯೋಗದಲ್ಲಿ ನಡೆದ ಕಾರ್ಯಾಚರಣೆ ಯಶಸ್ವಿಯಾಗಿದೆ.
ಇನ್ನು ಇತ್ತೀಚೆಗೆ ನಮ್ಮ ಮೆಟ್ರೋ ರೈಲಿನ ಮೂಲಕ ಯಶಸ್ವಿಯಾಗಿ ಹೃದಯ ಸಾಗಾಟ ಮಾಡಲಾಗಿತ್ತು. ಆ ಮೂಲಕ ಎರಡನೇ ಬಾರಿ ಯಶಸ್ವಿಯಾಗಿ ಅಂಗಾಂಗ ಸಾಗಾಟ ಮಾಡಿದಂತಾಗಿತ್ತು. ಯಶವಂತಪುರ ಸ್ಪರ್ಶ್ ಆಸ್ಪತ್ರೆಯಿಂದ ಶೇಷಾದ್ರಿಪುರ ಬಳಿಯ ಅಪೋಲೋ ಆಸ್ಪತ್ರೆಗೆ ಹೃದಯವನ್ನು ಸಾಗಿಸಲಾಗಿತ್ತು.
ಇದನ್ನೂ ಓದಿ: ಮೊದಲ ಬಾರಿ ನಮ್ಮ ಮೆಟ್ರೋದಲ್ಲಿ ಯಶಸ್ವಿಯಾಗಿ ಅಂಗಾಂಗ ಸಾಗಾಟ
ಯಶವಂತಪುರ ಇಂಡಸ್ಟ್ರಿ ಮೆಟ್ರೋ ಸ್ಟೇಷನ್ನಿಂದ ಸಂಪಿಗೆ ರೋಡ್ ಸ್ಟೇಷನ್ವರೆಗೆ ಮೆಟ್ರೋದಲ್ಲಿ ಹೃದಯ ಸಾಗಿಸಲಾಗಿತ್ತು. ಸ್ಪರ್ಶ್ ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ಮೂಲಕ ಯಶವಂತಪುರ ಇಂಡಸ್ಟ್ರಿವರೆಗೆ ಹೃದಯವನ್ನು ತೆಗೆದುಕೊಂಡು ಹೋಗಲಾಗಿತ್ತು. ಅಲ್ಲಿಂದ ಮೆಟ್ರೋ ಮೂಲಕ ಸಂಪಿಗೆ ರೋಡ್ ಮೆಟ್ರೋ ಸ್ಟೇಷನ್ವರೆಗೆ ಶಿಫ್ಟ್ ಮಾಡಿದರೆ, ಅಲ್ಲಿಂದ ಮತ್ತೆ ಆ್ಯಂಬುಲೆನ್ಸ್ ಮೂಲಕ ಶೇಷಾದ್ರಿಪುರ ಅಪೋಲೋ ಆಸ್ಪತ್ರೆಗೆ ಹೃದಯವನ್ನು ಶಿಫ್ಟ್ ಮಾಡಲಾಗಿತ್ತು. ಎಂದಿನಂತೆ ಪ್ರಯಾಣಿಕರು ಪ್ರಯಾಣ ಮಾಡುವ ಮೆಟ್ರೋ ರೈಲಿನ ಒಂದು ಕೋಚ್ ಅನ್ನು ಹೃದಯ ಸಾಗಿಸಲು ಮೀಸಲಿಡಲಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:42 pm, Thu, 30 October 25