AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rajyotsava Award 2025 Winners List: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ; ನಟ ಪ್ರಕಾಶ್​ ರಾಜ್​ ಸೇರಿದಂತೆ 70 ಸಾಧಕರ ಆಯ್ಕೆ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 2025 ಪಟ್ಟಿ: 2025ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ಬಹುಭಾಷಾ ನಟ ಪ್ರಕಾಶ್​ ರಾಜ್​ ಸೇರಿದಂತೆ ಒಟ್ಟು 70 ಜನ ಸಾಧಕಕರನ್ನ ಆಯ್ಕೆ ಮಾಡಲಾಗಿದೆ. ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರದ 70 ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ಐದು ಲಕ್ಷ ನಗದು ಬಹುಮಾನ ಹಾಗೂ 25 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದೆ. ಪ್ರಶಸ್ತಿ ಪಟ್ಟಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಬಿಡುಗಡೆ ಮಾಡಿದರು. ಇನ್ನು ಯಾವ ವಿಭಾಗದಲ್ಲಿ ಯಾರನೆಲ್ಲಾ ಆಯ್ಕೆ ಮಾಡಲಾಗಿದೆ ಎನ್ನುವ ಪಟ್ಟಿ ಈ ಕೆಳಗಿನಂತಿದೆ.

Rajyotsava Award 2025 Winners List: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ; ನಟ ಪ್ರಕಾಶ್​ ರಾಜ್​ ಸೇರಿದಂತೆ 70 ಸಾಧಕರ ಆಯ್ಕೆ
Prakash Raj
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on:Oct 30, 2025 | 8:17 PM

Share

ಬೆಂಗಳೂರು, (ಅಕ್ಟೋಬರ್ 30): 2025ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ (Kannada Rajyotsava Awards 2025 ಪ್ರಕಟವಾಗಿದ್ದು, ಬಹುಭಾಷಾ ನಟ ಪ್ರಕಾಶ್​ ರಾಜ್​  (Actor Prakash Raj) ಸೇರಿದಂತೆ ಒಟ್ಟು 70 ಜನ ಸಾಧಕಕರನ್ನ ಆಯ್ಕೆ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಿ ಇಂದು (ಅಕ್ಟೋಬರ್ 30) ಸುದ್ದಿಗೋಷ್ಠಿ ನಡೆಸಿ ಪ್ರಶಸ್ತಿಗೆ ಆಯ್ಕೆಯಾದವರ ಹೆಸರು ಪ್ರಕಟಿಸಿದ್ದು, ಇದೇ ಮೊದಲ‌ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಕರೆಯದೆ ಒಟ್ಟು 70 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.‌

ಪ್ರಶಸ್ತಿ ನೀಡಿಕೆಯಲ್ಲಿ ಜಿಲ್ಲಾವಾರು, ಸಾಮಾಜಿಕ ಪರಿಪಾಲನೆಯಡಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.‌ ಆಯ್ಕೆ ಸಲಹಾ ಸಮಿತಿ ಸದಸ್ಯರು ಶಿಫಾರಸ್ಸು ಮಾಡಿದ್ದವರನ್ನು ಬಹುತೇಕ‌‌ ಆಯ್ಕೆ ಮಾಡಲಾಗಿದ್ದು,‌ ನಾಲ್ಕೈದು‌ ಬಾರಿ‌ ಸಭೆ ನಡೆಸಿದ ಸದಸ್ಯರು ಅರ್ಹರನ್ನು ‌ಆಯ್ಕೆ ಮಾಡಲಾಗಿದೆ ಎಂದು ಶಿವಾರಜ್ ತಂಗಡಗಿ‌ ತಿಳಿಸಿದರು.

ಮೊದಲೇ ನಿರ್ಧರಿಸಿದಂತೆ‌ ಈ ಬಾರಿ‌ ಯಾವುದೇ ಸಂಘ-ಸಂಸ್ಥೆಗಳಿಗೆ ಪ್ರಶಸ್ತಿ ನೀಡಿಲ್ಲ. ಇನ್ನು ಈ ಬಾರಿ 12 ಮಂದಿ‌ ಮಹಿಳೆಯರಿಗೆ ಈ ಬಾರಿ ಪ್ರಶಸ್ತಿ ಆಯ್ಕೆ‌‌ ಮಾಡಲಾಗಿದೆ.‌ ಇನ್ನು ನವಂಬರ್ 1ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಪ್ರಶಸ್ತಿಯು 5 ಲಕ್ಷ ನಗದು, 25ಗ್ರಾಂ ಚಿನ್ನದ ಪದಕ ಪ್ರಶಸ್ತಿ ಫಲಕವನ್ನು ರಾಜ್ಯೋತ್ಸವ ಪ್ರಶಸ್ತಿ ಒಳಗೊಂಡಿದೆ.

ಜಾನಪದ

  •  ಬಸಪ್ಪ ಭರಮಪ್ಪ ಚೌಡ್ಕಿ-ಕೊಪ್ಪಳ
  •  ಬಿ. ಟಾಕಪ್ಪ ಕಣ್ಣೂರು-ಶಿವಮೊಗ್ಗ
  • ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೋಳ-ಬೆಳಗಾವಿ
  •  ಹನುಮಂತಪ್ಪ, ಮಾರಪ್ಪ, ಚೀಳಂಗಿ-ಚಿತ್ರದುರ್ಗ
  • ಎಂ. ತೋಪಣ್ಣ-ಕೋಲಾರ
  • ಸೋಮಣ್ಣ ದುಂಡಪ್ಪ ಧನಗೊಂಡ-ವಿಜಯಪುರ
  • ಸಿಂಧು ಗುಜರನ್ದ-ಕ್ಷಿಣ ಕನ್ನಡ
  • ಎಲ್. ಮಹದೇವಪ್ಪ ಉಡಿಗಾಲ-ಮೈಸೂರು.

ಸಾಹಿತ್ಯ ಕ್ಷೇತ್ರ

  • ಪ್ರೊ. ರಾಜೇಂದ್ರ ಚೆನ್ನಿ ಶಿವಮೊಗ್ಗ
  • ತುಂಬಾಡಿ ರಾಮಯ್ಯ ತುಮಕೂರು
  • ಪ್ರೊ ಅರ್ ಸುನಂದಮ್ಮ ಚಿಕ್ಕಬಳ್ಳಾಪುರ
  • ಡಾ.ಎಚ್.ಎಲ್ ಪುಷ್ಪ ತುಮಕೂರು
  • ರಹಮತ್ ತರೀಕೆರೆ ಚಿಕ್ಕಮಗಳೂರು
  • ಹ.ಮ. ಪೂಜಾರ ವಿಜಯಪುರ

ಚಲನಚಿತ್ರ /ಕಿರುತೆರೆ

  •  ಪ್ರಕಾಶ್ ರಾಜ್- ದಕ್ಷಿಣ ಕನ್ನಡ
  • ವಿಜಯಲಕ್ಷ್ಮೀ ಸಿಂಗ್- ಕೊಡಗು

ಆಡಳಿತ

  • ಹೆಚ್. ಸಿದ್ದಯ್ಯ ಭಾ.ಆ.ಸೇ(ನಿ) ಬೆಂಗಳೂರು ದಕ್ಷಿಣ (ರಾಮನಗರ)

ವೈದ್ಯಕೀಯ

  • ಆಲಮ್ಮ ಮಾರಣ್ಣ- ತುಮಕೂರು
  • ಡಾ. ಜಯರಂಗನಾಥ್- ಬೆಂಗಳೂರು ಗ್ರಾಮಾಂತರ

ಸಂಗೀತ: ದೇವೆಂದ್ರಕುಮಾರ ಪತ್ತಾರ್- ಕೊಪ್ಪಳ, ಮಡಿವಾಳಯ್ಯ ಸಾಲಿ-ಬೀದರ್ ನೃತ್ಯ: ಪ್ರೊ. ಕೆ. ರಾಮಮೂರ್ತಿ ರಾವ್- ಮೈಸೂರು

ಸಮಾಜ ಸೇವೆ

  • ಮತಿ ಸೂಲಗಿತ್ತಿ ಈರಮ್ಮ-ವಿಜಯನಗರ
  • ಫಕ್ಕೀರಿ-ಬೆಂಗಳೂರು ಗ್ರಾಮಾಂತರ
  • ಕೋರಿನ್ ಆಂಟೊನಿಯಟ್ ರಸ್ಕೀನಾ-ದಕ್ಷಿಣ ಕನ್ನಡ
  • ಡಾ. ಎನ್. ಸೀತಾರಾಮ ಶೆಟ್ಟಿ-ಉಡುಪಿ
  • ಕೋಣಂದೂರು ಲಿಂಗಪ್ಪ-ಶಿವಮೊಗ್ಗ

ಸಂಕೀರ್ಣ:

  • ಉಮೇಶ ಪಂಬದ -ದಕ್ಷಿಣ ಕನ್ನಡ
  • ಡಾ. ರವೀಂದ್ರ ಕೋರಿಶೆಟ್ಟಿರ್ ಧಾರವಾಡ
  • ಕೆ.ದಿನೇಶ್- ಬೆಂಗಳೂರು
  • ಶಾಂತರಾಜು -ತುಮಕೂರು
  • ಜಾಫರ್ ಮೊಹಿಯುದ್ದೀನ್- ರಾಯಚೂರು
  • ಪೆನ್ನ ಓಬಳಯ್ಯ- ಬೆಂಗಳೂರು ಗ್ರಾಮಾಂತರ
  • ಬಾಯಿ ಬಳ್ಳಾರಿ
  • ಪುಂಡಲೀಕ ಶಾಸ್ತ್ರೀ(ಬುಡಬುಡಕೆ) ಬೆಳಗಾವಿ

ಹೊರನಾಡು/ ಹೊರದೇಶ: ಜಕರಿಯ ಬಜಪೆ (ಸೌದಿ), ಪಿ ವಿ ಶೆಟ್ಟಿ (ಮುಂಬೈ)

ಪರಿಸರ: ರಾಮೇಗೌಡ- ಚಾಮರಾಜನಗರ, ಮಲ್ಲಿಕಾರ್ಜುನ ನಿಂಗಪ್ಪ- ಯಾದಗಿರಿ

ಕೃಷಿ: ಡಾ.ಎಸ್.ವಿ.ಹಿತ್ತಲಮನಿ-ಹಾವೇರಿ, ಎಂ ಸಿ ರಂಗಸ್ವಾಮಿ-ಹಾಸನ.

ಮಾಧ್ಯಮ: ಕೆ.ಸುಬ್ರಮಣ್ಯ-ಬೆಂಗಳೂರು, ಅಂಶಿ ಪ್ರಸನ್ನಕುಮಾರ್-ಮೈಸೂರು, ಬಿ.ಎಂ ಹನೀಫ್- ದಕ್ಷಿಣ ಕನ್ನಡ, ಎಂ ಸಿದ್ಧರಾಜು- ಮಂಡ್ಯ.

ವಿಜ್ಞಾನ ಮತ್ತು ತಂತ್ರಜ್ಞಾನ : ರಾಮಯ್ಯ ಚಿಕ್ಕಬಳ್ಳಾಪುರ, ಏರ್ ಮಾರ್ಷಲ್ ಫೀಲೀಫ್ ರಾಜಕುಮಾರ-ದಾವಣಗೆರೆ, ಡಾ. ಆರ್. ವಿ ನಾಡಗೌಡ- ಗದಗ.

ಸಹಕಾರ: ಶೇಖರಗೌಡ ವಿ ಮಾಲಿಪಾಟೀಲ್ -ಕೊಪ್ಪಳ.

ಯಕ್ಷಗಾನ: ಕೋಟ ಸುರೇಶ ಬಂಗೇರ- ಉಡುಪಿ , ಐರಬೈಲ್‌ಆನಂದ ಶೆಟ್ಟಿ ಉಡುಪಿ, ಕೃಷ್ಣ ಪರಮೇಶ್ವರ ಹೆಗಡೆ (ಕೆ.ಪಿ ಹೆಗಡೆ)- ಉತ್ತರ ಕನ್ನಡ.

ಬಯಲಾಟ: ಗುಂಡೂರಾಜ್-ಹಾಸನ

ರಂಗಭೂಮಿ: ಹೆಚ್.ಎಂ. ಪರಮಶಿವಯ್ಯ,ಬೆಂಗಳೂರು ದಕ್ಷಿಣ (ರಾಮನಗರ), ಎಲ್.ಬಿ.ಶೇಖ್ (ಮಾಸ್ತರ್)-ವಿಜಯಪುರ, ಬಂಗಾರಪ್ಪ ಖುದಾನ್‌ಪುರ-ಬೆಂಗಳೂರು, ಮೈಮ್ ರಮೇಶ್- ದಕ್ಷಿಣ ಕನ್ನಡ, ಡಿ.ರತ್ನಮ್ಮ ದೇಸಾಯಿ- ರಾಯಚೂರು.

ಕ್ರೀಡೆ: ಆಶೀಶ್ ಕುಮಾರ್ ಬಲ್ಲಾಳ್-ಬೆಂಗಳೂರು, ಎಂ ಯೋಗೇಂದ್ರ-ಮೈಸೂರು, ಡಾ. ಬಬಿನಾ ಎನ್.ಎಂ (ಯೋಗ)ಕೊಡಗು.

ಶಿಕ್ಷಣ: ಡಾ. ಎಂ.ಆರ್. ಜಯರಾಮ್-ಬೆಂಗಳೂರು, ಡಾ. ಎನ್ ಎಸ್ ರಾಮೇಗೌಡ-ಮೈಸೂರು , ಎಸ್. ಬಿ. ಹೊಸಮನಿ- ಕಲಬುರಗಿ, ರಾಜ್ ಶ್ರೀ ನಾಗರಾಜು- ಬೆಳಗಾವಿ.

ನ್ಯಾಯಾಂಗ: ನ್ಯಾಯಮೂರ್ತಿ  ಪಿ.ಬಿ. ಭಜಂತ್ರಿ (ಪವನ್ ಕುಮಾರ್ ಭಜಂತ್ರಿ )-ಬಾಗಲಕೋಟೆ.

ಶಿಲ್ಪಕಲೆ: ಬಸಣ್ಣ ಮೋನಪ್ಪ ಬಡಿಗೇರ- ಯಾದಗಿರಿ, ನಾಗಲಿಂಗಪ್ಪ ಜಿ ಗಂಗೂರ- ಬಾಗಲಕೋಟೆ.

ಚಿತ್ರಕಲೆ: ಬಿ. ಮಾರುತಿ-ವಿಜಯನಗರ

ಕರಕುಶಲ: ಎಲ್. ಹೇಮಾಶೇಖರ್-ಮೈಸೂರು

Published On - 5:22 pm, Thu, 30 October 25

ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ
ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ
ಜಾರ್ಖಂಡ್ ಕಲ್ಲಿದ್ದಲು ಪ್ರದೇಶದಲ್ಲಿ ವಿಷಕಾರಿ ಅನಿಲ ಸೋರಿಕೆ; ಇಬ್ಬರು ಸಾವು
ಜಾರ್ಖಂಡ್ ಕಲ್ಲಿದ್ದಲು ಪ್ರದೇಶದಲ್ಲಿ ವಿಷಕಾರಿ ಅನಿಲ ಸೋರಿಕೆ; ಇಬ್ಬರು ಸಾವು
ಸಾಕ್ಷಿ ಕೇಳ್ತಿದ್ದ ಸಿದ್ರಾಮಯ್ಯಗೆ ವಿಡಿಯೋ ಪ್ಲೇ ಮಾಡಿ ತೋರಿಸಿದ ಅಶೋಕ್​
ಸಾಕ್ಷಿ ಕೇಳ್ತಿದ್ದ ಸಿದ್ರಾಮಯ್ಯಗೆ ವಿಡಿಯೋ ಪ್ಲೇ ಮಾಡಿ ತೋರಿಸಿದ ಅಶೋಕ್​
ನಿರ್ದೇಶಕ ಸಂಗೀತ್ ಸಾಗರ್ ನಿಧನಕ್ಕೂ ಮುನ್ನ ಪರಿಸ್ಥಿತಿ ಹೇಗಿತ್ತು?
ನಿರ್ದೇಶಕ ಸಂಗೀತ್ ಸಾಗರ್ ನಿಧನಕ್ಕೂ ಮುನ್ನ ಪರಿಸ್ಥಿತಿ ಹೇಗಿತ್ತು?
ಶೂಟಿಂಗ್ ವೇಳೆ ನಿರ್ದೇಶಕ ಸಾವು, ಘಟನೆ ವಿವರಿಸಿದ ನಿರ್ಮಾಪಕ: ವಿಡಿಯೋ
ಶೂಟಿಂಗ್ ವೇಳೆ ನಿರ್ದೇಶಕ ಸಾವು, ಘಟನೆ ವಿವರಿಸಿದ ನಿರ್ಮಾಪಕ: ವಿಡಿಯೋ
ಹಿಜಾಬ್ Vs ಕೇಸರಿ ಶಾಲು: ಮತ್ತೆ ಮುನ್ನೆಲೆಗೆ ಬಂದ ವಿವಾದ
ಹಿಜಾಬ್ Vs ಕೇಸರಿ ಶಾಲು: ಮತ್ತೆ ಮುನ್ನೆಲೆಗೆ ಬಂದ ವಿವಾದ