ಪರಿಸರದ ಪಾಠ ಮಾಡೋಕೆ ತೋಟಗಾರಿಕೆ ಇಲಾಖೆ ಸಜ್ಜು: ಇನ್ಮುಂದೆ ಕಬ್ಬನ್ ಪಾರ್ಕ್​ನಲ್ಲಿ ಗೈಡ್ ಜೊತೆ ನೇಚರ್ ವಾಕ್!

ಕಬ್ಬನ್ ಪಾರ್ಕ್​​ ಬೆಂಗಳೂರಿನ ಜನರಿಗೆ ನೆಚ್ಚಿನ ತಾಣಗಳಲ್ಲಿ ಒಂದು. ಇದೇ ಪಾರ್ಕ್​​ನಲ್ಲಿ ಪ್ರಾಚೀನ ಮತ್ತು ವಿಶೇಷ ಮರಗಳು ನೋಡಲು ಸಿಗುತ್ತವೆ. ಆದರೆ ಸಾಕಷ್ಟು ಜನರಿಗೆ ಅವುಗಳ ಬಗ್ಗೆ ಗೊತ್ತಿಲ್ಲ. ಈ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಹೊಸ ಯೋಜನೆ ಜಾರಿಗೆ ಮುಂದಾಗಿದೆ. ಆ ಮೂಲಕ ಕಬ್ಬನ್ ಪಾರ್ಕ್​​ನಲ್ಲಿ ಇನ್ಮುಂದೆ ಗೈಡ್ ಜೊತೆ ನೇಚರ್ ವಾಕ್ ಮಾಡುವ ಅವಕಾಶ ಸಿಗಲಿದೆ.

ಪರಿಸರದ ಪಾಠ ಮಾಡೋಕೆ ತೋಟಗಾರಿಕೆ ಇಲಾಖೆ ಸಜ್ಜು: ಇನ್ಮುಂದೆ ಕಬ್ಬನ್ ಪಾರ್ಕ್​ನಲ್ಲಿ ಗೈಡ್ ಜೊತೆ ನೇಚರ್ ವಾಕ್!
ಕಬ್ಬನ್ ಪಾರ್ಕ್
Edited By:

Updated on: Jul 24, 2025 | 9:21 AM

ಬೆಂಗಳೂರು, ಜುಲೈ 24: ಸಿಲಿಕಾನ್ ಸಿಟಿಯ (Bengaluru) ಆಕ್ಸಿಜನ್ ಹಬ್​​ನಂತಿರುವ ಕಬ್ಬನ್ ಪಾರ್ಕ್​ನಲ್ಲಿ (Cubbon Park) ಇನ್ಮುಂದೆ ಗೈಡ್ ಜೊತೆ ನೇಚರ್ ವಾಕ್ ಮಾಡುವ ಅವಕಾಶ ಸಿಗಲಿದೆ. ಕಬ್ಬನ್ ಪಾರ್ಕ್​ನಲ್ಲಿ ಸುಮ್ಮ ಸುಮ್ಮನೆ ಸುತ್ತಾಡುವವರ ಜೊತೆಗೆ ಅಲ್ಲಿನ ಮರಗಳು, ಅವುಗಳ ವೈಶಿಷ್ಟ್ಯ ಹಾಗೂ ಕಬ್ಬನ್ ಪಾರ್ಕ್​​ನಲ್ಲಿ ಅಡಗಿರುವ ವಿಶೇಷತೆಗಳನ್ನ ಪರಿಚಯಿಸುವುದಕ್ಕೆ ತೋಟಗಾರಿಕೆ ಹೊಸ ಪ್ಲ್ಯಾನ್​ ಮಾಡುತ್ತಿದ್ದು, ಇನ್ಮುಂದೆ ವೀಕೆಂಡ್ ನಲ್ಲಿ ಗೈಡ್ ಜೊತೆ ನೇಚರ್ ವಾಕ್ ಮಾಡುವ ಅವಕಾಶ ಸಿಗಲಿದೆ.

ಬೆಂಗಳೂರಿನ ಹಸಿರುತಾಣ, ಬಗೆ ಬಗೆಯ ಸಸ್ಯ, ಮರಗಳ ತಾಣ ಕಬ್ಬನ್ ಪಾರ್ಕ್​ನಲ್ಲಿ ಇದೇ ಜುಲೈ 27 ರಿಂದ ಹೊಸ ಕಾರ್ಯಕ್ರಮ ಆರಂಭಿಸುವುದಕ್ಕೆ ತೋಟಗಾರಿಕೆ ಇಲಾಖೆ ಸಜ್ಜಾಗಿದೆ. ಕಬ್ಬನ್ ಪಾರ್ಕ್​ನ ವಿಶೇಷತೆಗಳನ್ನ ಪರಿಚಯಿಸುವುದಕ್ಕೆ ಕಬ್ಬನ್ ವಾಕ್ಸ್ ಹೆಸರಲ್ಲಿ ಗೈಡ್ ಜೊತೆಗೆ ನೇಚರ್ ವಾಕ್ ಮಾಡುವುದಕ್ಕೆ ಅವಕಾಶ ಕೊಡಲಾಗುತ್ತಿದ್ದು, ಇದಕ್ಕಾಗಿ 10 ಜನ ಪರಿಸರ ತಜ್ಞರ ತಂಡ ನೇಮಕ ಮಾಡಲಾಗಿದೆ.

ಪ್ರತಿ ಶನಿವಾರ, ಭಾನುವಾರ ನೇಚರ್ ವಾಕ್

ಕಬ್ಬನ್ ವಾಕ್ ಅಂಗವಾಗಿ ಬುಧವಾರ ನಡೆದ ಟ್ರಯಲ್ ನೇಚರ್ ವಾಕ್​ನಲ್ಲಿ ಹೆಜ್ಜೆಹಾಕಿದ ತಜ್ಞರ ತಂಡ, ಕಬ್ಬನ್ ಪಾರ್ಕ್​ನಲ್ಲಿರುವ ಪ್ರಾಚೀನ ಮರಗಳು, ವಿಶೇಷ ಜಾಗಗಳ ಬಗ್ಗೆ ಮಾಹಿತಿ ನೀಡಿ ಗಮನಸೆಳೆದರು. ಈ ವೇಳೆ ಮಾತನಾಡಿದ ಕಬ್ಬನ್ ಪಾರ್ಕ್ ನಿರ್ದೇಶಕಿ ಕುಸುಮಾ, ಇನ್ಮುಂದೆ ಪ್ರತಿ ಶನಿವಾರ ಹಾಗೂ ಭಾನುವಾರ ಈ ನೇಚರ್ ವಾಕ್ ನಡೆಯಲಿದ್ದು, ಈ ವಾಕ್​ನಲ್ಲಿ ಭಾಗವಹಿಸುವವರು ಆನ್ ಲೈನ್​​ನಲ್ಲಿ ಬುಕ್ಕಿಂಗ್ ಮಾಡಬೇಕು. ಜೊತೆಗೆ ವಯಸ್ಕರಿಗೆ 200 ರೂ ಮತ್ತು ಮಕ್ಕಳಿಗೆ 50 ರೂ. ಟಿಕೆಟ್ ನಿಗದಿ ಮಾಡಲಾಗಿದೆ ಎಂದರು.

ಇದನ್ನೂ ಓದಿ
ಕರ್ನಾಟಕದ ಕರಾವಳಿಗೆ ರೆಡ್ ಅಲರ್ಟ್​, 16 ಜಿಲ್ಲೆಗಳಲ್ಲಿ ಧಾರಾಕಾರ ಮಳೆ
ಶಾಲಾ ಮಕ್ಕಳಿಗೆ ಫ್ಲೇವರ್ಡ್ ನಂದಿನಿ ಹಾಲು ವಿತರಣೆಗೆ ಬಮೂಲ್ ಪ್ರಸ್ತಾಪ
ಇಡೀ ಬೆಂಗಳೂರಿನಲ್ಲಿ 3% ಮಾತ್ರ ಹಸಿರು ಪರಿಸರ: ಐಐಎಸ್ಸಿ ತಜ್ಞರ ವರದಿ ಬಹಿರಂಗ
ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ: ಈ ಬಾರಿ ಚೆನ್ನಮ್ಮ, ರಾಯಣ್ಣ ದರ್ಶನ

ಇದನ್ನೂ ಓದಿ: ಲಾಲ್ ಬಾಗ್ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ: ಈ ಬಾರಿ ಚೆನ್ನಮ್ಮ, ರಾಯಣ್ಣ ದರ್ಶನ

ಇನ್ನು ಬರೋಬ್ಬರಿ 200 ಎಕರೆಗೂ ಹೆಚ್ಚು ವಿಸ್ತೀರ್ಣ ಇರುವ ಕಬ್ಬನ್ ಪಾರ್ಕ್​ನಲ್ಲಿ ಅತಿ ಪುರಾತನ ಮರಗಳು, ಬೇರೆ ಬೇರೆ ವಿದೇಶಿ ಮರಗಳು ಇರುವ ಬಗ್ಗೆ ಪ್ರವಾಸಿಗರಿಗೆ, ಪರಿಸರ ಪ್ರಿಯರಿಗೆ ಮಾಹಿತಿ ನೀಡುವುದಕ್ಕೆ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದ ಮೂಲಕ ಕಬ್ಬನ್ ಪಾರ್ಕ್​​ನ ಸೌಂದರ್ಯದ ಜೊತೆಗೆ ವಿಶೇಷತೆಗಳನ್ನ ತಿಳಿಸುವುದಕ್ಕೆ ದಿ ನ್ಯಾಚುರಲಿಸ್ಟ್ ಸ್ಕೂಲ್​ನ ಪರಿಸರ ತಜ್ಞರ ತಂಡ ಮಾಹಿತಿ ನೀಡಲಿದೆ.

ಇತ್ತ ರಾಜಧಾನಿಯ ಆಕರ್ಷಣೆ ಕೇಂದ್ರವಾಗಿರುವ ಕಬ್ಬನ್ ಪಾರ್ಕ್​ನಲ್ಲಿ ನಡೆಯಲಿರುವ ಈ ನೇಚರ್ ವಾಕ್ ನಲ್ಲಿ 30 ಜನರಿಗೆ ಒಂದು ಗೈಡ್ ಇರಲಿದ್ದು, ಕನ್ನಡ ಮತ್ತು ಇಂಗ್ಲಿಷ್​ನಲ್ಲಿ ಮಾಹಿತಿ ನೀಡಲಿದ್ದಾರೆ. ಇದು ಪ್ರವಾಸಿಗರನ್ನ ಮತ್ತಷ್ಟು ಆಕರ್ಷಿಸುವ ಸಾಧ್ಯತೆ ಇದೆ ಎಂಬ ನಿರೀಕ್ಷೆ ಇದೆ.

ಇದನ್ನೂ ಓದಿ: ಇಡೀ ಬೆಂಗಳೂರಿನಲ್ಲಿ 3% ಮಾತ್ರ ಹಸಿರು ಪರಿಸರ: ಐಐಎಸ್ಸಿ ತಜ್ಞರ ವರದಿಯ ಶಾಕಿಂಗ್ ಅಂಶ ಬಹಿರಂಗ

ಒಟ್ಟಿನಲ್ಲಿ ಇಷ್ಟು ದಿನ ಪ್ರೇಮಿಗಳು, ವಾಕರ್ಸ್ ಅಡ್ಡವಾಗಿದ್ದ ಕಬ್ಬನ್ ಪಾರ್ಕ್​ನಲ್ಲಿ, ಇನ್ಮುಂದೆ ಪರಿಸರದ ಪಾಠ ಹೇಳೋಕೆ ತೋಟಗಾರಿಕೆ ಇಲಾಖೆ ಸಜ್ಜಾಗಿದೆ. ಸದ್ಯ ಸಾವಿರಾರು ಮರಗಳು ಹಾಗೂ ವಿವಿಧ ಬಗೆಯ ಹೂಗಳನ್ನ ಹೊಂದಿರುವ ಕಬ್ಬನ್ ಪಾರ್ಕ್​ಗೆ ಬರುವ ಪ್ರವಾಸಿಗರಿಗೆ ವೀಕೆಂಡ್​ನಲ್ಲಿ ನೇಚರ್ ವಾಕ್ ಲಭ್ಯವಾಗ್ತಿದ್ದು, ಸದ್ಯ ತೋಟಗಾರಿಕೆ ಇಲಾಖೆಯ ಈ ಯೋಜನೆಗೆ ಪ್ರವಾಸಿಗರು ಹೇಗೆ ಪ್ರತಿಕ್ರಿಯಿಸುತ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:20 am, Thu, 24 July 25