
ಬೆಂಗಳೂರು, ಜೂನ್ 01: ಅರಿಹಂತ್ ಜ್ಯುವೆಲ್ಲರ್ಸ್ ಮಾಲೀಕನ ಮನೆ ಕಳ್ಳತನ ಕೇಸ್ ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿತ್ತು. ಈ ಪ್ರಕರಣದಲ್ಲಿ ನೇಪಾಳಿ (Nepali) ಕಳ್ಳರು ತಮ್ಮ ಕೈಚಳಕ ತೋರಿಸಿದ್ದರು. ಇದೀಗ ಮತ್ತೆ ನಗರದಲ್ಲಿ ನೇಪಾಳಿ ದಂಪತಿಯಿಂದ ಮನೆಗಳ್ಳತನವೊಂದು (robbery) ನಡೆದಿದೆ. ಉದ್ಯಮಿ ಮನೆಯಲ್ಲಿದ್ದ ನಗದು, ಚಿನ್ನಾಭರಣ, ಲೈಸೆನ್ಸ್ ಪಿಸ್ತೂಲ್, 2 ಕೆಜಿ ಚಿನ್ನ ಮತ್ತು 10 ಲಕ್ಷ ರೂ ನಗದು ಕಳ್ಳತನ ದೋಚಿ ಪರಾರಿ ಆಗಿದ್ದಾರೆ. ಹೆಚ್ಎಎಲ್ನ ಶಾಸ್ತ್ರಿನಗರದಲ್ಲಿರುವ ಉದ್ಯಮಿ ಮನೆಯಲ್ಲಿ ಕಳ್ಳತನ ನಡೆದಿದೆ.
3 ತಿಂಗಳ ಹಿಂದೆ ನೇಪಾಳಿ ಮೂಲದ ರಾಜ್ ಮತ್ತು ದೀಪಾ ದಂಪತಿ ಸೆಕ್ಯೂರಿಟಿ ಕೆಲಸಕ್ಕೆ ಸೇರಿದ್ದರು. ಮೇ 27ರಂದು ರಮೇಶ್ ಕುಟುಂಬ ಸಮೇತ ತಿರುಪತಿಗೆ ಹೋಗಿದ್ದರು. ನಂಬಿಕೆ ಗಳಿಸಿದ್ದ ನೇಪಾಳಿ ದಂಪತಿ ಬಿಟ್ಟು ತಿರುಪತಿಗೆ ತೆರಳಿದ್ದರು. ಇದೇ ಒಳ್ಳೆಯ ಅವಕಾಶವೆಂದು ನೇಪಾಳಿ ದಂಪತಿ ಸೇರಿ ಐದು ಜನರಿಂದ ಮನೆಯ ಪ್ರಮುಖ ಮತ್ತು ಬೆಡ್ ರೂಂ ಬಾಗಿಲು ಮುರಿದು ಕಳ್ಳತನ ಮಾಡಿದ ಲಕ್ಷಾಂತರ ರೂ ಸೇರಿದಂತೆ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಅಂಧರು ಬಟನ್ ಪ್ರೆಸ್ ಮಾಡಿದ್ರೆ ಸಾಕು, ಅವರಿದ್ದಲ್ಲಿಗೆ ಬರುತ್ತೆ ಬಿಎಂಟಿಸಿ ಬಸ್! ಬಂದಿದೆ ಹೊಸ ಡಿವೈಸ್
ಮಾಮೂಲಿಯಂತೆ ಕಾರ್ ಬುಕ್ ಮಾಡಿದ್ದ ಕಳ್ಳರು ನಾಲ್ಕು ಜನ ಮನೆ ಬಳಿ ಬಂದ ಕಾರಿನಲ್ಲಿ ಚಿನ್ನಭರಣ, ಹಣದ ಬ್ಯಾಗ್ಗಳನ್ನು ತುಂಬಿಕೊಂಡು ಹೋಗಿದ್ದಾರೆ. ಕಾರಿನ ಚಾಲಕನಿಗೂ ಕಳ್ಳತನಕ್ಕೂ ಯಾವುದೇ ಸಂಬಂಧವಿಲ್ಲ.
ಇತ್ತ ಮೇ 28ರ ಬೆಳಗಿನ ಜಾವ ರಮೇಶ್, ಮೊಬೈಲ್ನಲ್ಲಿ ಮನೆಯ ಸಿಸಿಟಿವಿ ಪರಿಶೀಲಿಸಿದ್ದು, ಆಫ್ ಆಗಿತ್ತು. ಕರೆಂಟ್ ಹೋಗಿ ಸಿಸಿಟಿವಿ ಆಫ್ ಆಗಿರಬಹುದು ಅಂದುಕೊಂಡಿದ್ದಾರೆ. ಬಳಿಕ ಪಕ್ಕದ ಮನೆಯವರು ಕರೆ ಮಾಡಿ ಮನೆಯಲ್ಲಿ ಯಾರೂ ಇಲ್ಲ ಎಂದಿದ್ದಾರೆ. ನಂತರ ತಮ್ಮ ಸ್ನೇಹಿತರಿಗೆ ಮನೆ ಬಳಿ ಹೋಗಲು ತಿಳಿಸಿದ್ದ ರಮೇಶ್, ಈ ವೇಳೆ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಬೆಂಗಳೂರಿನ ಮಲ್ಲಸಂದ್ರ ಬಳಿ ಚಿರತೆ ಪ್ರತ್ಯಕ್ಷ: ಭಯಭೀತರಾದ ಜನ, ಕ್ಯಾಮರಾ ಅಳವಡಿಕೆ
ಸದ್ಯ ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ.
ವರದಿ: ಪ್ರದೀಪ್ ಚಿಕ್ಕಾಟಿ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.