AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಧರು ಬಟನ್ ಪ್ರೆಸ್ ಮಾಡಿದ್ರೆ ಸಾಕು, ಅವರಿದ್ದಲ್ಲಿಗೆ ಬರುತ್ತೆ ಬಿಎಂಟಿಸಿ ಬಸ್! ಬಂದಿದೆ ಹೊಸ ಡಿವೈಸ್

ಬಿಎಂಟಿಸಿ ಬಸ್​ನಲ್ಲಿ ಪ್ರತಿದಿನ ನೂರಾರು ಅಂಧರು ಪ್ರಯಾಣ ಮಾಡುತ್ತಾರೆ. ಆದರೆ, ಪ್ರಯಾಣ ಮಾಡಬೇಕಾದ ಬಸ್ ಎಲ್ಲಿದೆ? ಆ ಬಸ್ ತಾವಿರುವ ಜಾಗಕ್ಕೆ ಯಾವಾಗ ಬರುತ್ತದೆ ಎಂದು ತಿಳಿದುಕೊಳ್ಳಲು ಕಷ್ಟವಾಗುತ್ತಿತ್ತು. ಹಾಗಾಗಿ ಅವರಿಗಾಗಿಯೇ ಹೊಸದೊಂದು ಡಿವೈಸ್ ಅಭಿವೃದ್ಧಿಪಡಿಸಲಾಗಿದೆ. ದೆಹಲಿ ಐಐಟಿ ಅಭಿವೃದ್ಧಿಪಡಿಸಿದ ಆ ಸಾಧನದ ವಿಶೇಷವೇನು? ಹೇಗೆ ಕೆಲಸ ಮಾಡುತ್ತದೆ? ವಿವರ ಇಲ್ಲಿದೆ.

ಅಂಧರು ಬಟನ್ ಪ್ರೆಸ್ ಮಾಡಿದ್ರೆ ಸಾಕು, ಅವರಿದ್ದಲ್ಲಿಗೆ ಬರುತ್ತೆ ಬಿಎಂಟಿಸಿ ಬಸ್! ಬಂದಿದೆ ಹೊಸ ಡಿವೈಸ್
ಬಿಎಂಟಿಸಿ ಬಸ್ (ಸಾಂದರ್ಭಿಕ ಚಿತ್ರ)
Kiran Surya
| Updated By: Ganapathi Sharma|

Updated on: Jun 01, 2025 | 10:28 AM

Share

ಬೆಂಗಳೂರು, ಜೂನ್ 1: ಬಿಎಂಟಿಸಿ (BMTC) ನಿಗಮದಲ್ಲಿ 6800 ಬಸ್ಸುಗಳಿವೆ. ಪ್ರತಿದಿನ 40 ಲಕ್ಷ ಮಂದಿ ಪ್ರಯಾಣ ಮಾಡುತ್ತಾರೆ. ಅದರಲ್ಲಿ ನೂರಾರು ಅಂಧರು ಕೂಡ ಸೇರಿದ್ದಾರೆ. ಬೆಂಗಳೂರಿನಲ್ಲಿ ದೃಷ್ಟಿಮಾಂದ್ಯರು ಓಡಾಡುವ ಸ್ಥಳದಲ್ಲಿ, ಅವರು ಪ್ರಯಾಣ ಮಾಡುವ ಬಸ್ ಯಾವ ನಿಲ್ದಾಣಕ್ಕೆ ಬರುತ್ತದೆ ಎಂಬುದನ್ನು ಅವರು ಸುಲಭವಾಗಿ ತಿಳಿಯಲು ಹೊಸದೊಂದು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಅಂಧರು, ನಗರದ ಯಾವುದೇ ಬಸ್ ಸ್ಟ್ಯಾಂಡ್​​ನಲ್ಲಿ ನಿಂತು ಈ ರಿಮೋಟ್ ಡಿವೈಸ್ ಪ್ರೆಸ್ ಮಾಡಿದರೂ ಸಾಕು, ಬಿಎಂಟಿಸಿ ಬಸ್​​ಗಳು (BMTC Buses) ಅವರು ಇರುವ ಜಾಗದಲ್ಲಿ ನಿಲ್ಲಲಿವೆ. ದೃಷ್ಟಿ ಚೇತನರಿಗಾಗಿ ವಿಶೇಷವಾಗಿ ರಿಮೋಟ್ ಡಿವೈಸ್ ಸಿದ್ದಪಡಿಸಿದ್ದು, ಬ್ರೈಲ್ ಮಾದರಿಯಲ್ಲಿ ಅಂಧರಿಗಾಗಿ ವ್ಯವಸ್ಥೆ ಮಾಡಲಾಗಿದೆ. ಅವರು ಆ ರಿಮೋಟ್​ನಲ್ಲಿ ಬಟನ್ ಪ್ರೆಸ್ ಮಾಡಿದರೆ, ಆ ಮಾರ್ಗದ ಬಸ್​ಗಳಿಗೆ ಮಾಹಿತಿ ಗೊತ್ತಾಗಲಿದೆ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ.

ಮೊದಲ ಹಂತದಲ್ಲಿ 25 ಬಸ್​ಗಳಲ್ಲಿ ಸಾದನ ಅಳವಡಿಕೆ

ಮೊದಲ ಹಂತದಲ್ಲಿ ಬಿಎಂಟಿಸಿಯ 25 ಬಸ್​​ಗಳಲ್ಲಿ ಕಮ್ಯುನಿಕೇಷನ್ ಡಿವೈಸ್​ಗಳನ್ನು ಅಳವಡಿಸಲಾಗಿದೆ. ಈಗಾಗಲೇ 401K ಯಲಹಂಕ ಟು ಕೆಂಗೇರಿ, 401KB ಯಶವಂತಪುರ ಟು ಕೆಂಗೇರಿ ಮಾರ್ಗದಲ್ಲಿ ಸಂಚಾರ ಮಾಡುವ ಬಿಎಂಟಿಸಿ ಬಸ್​​ಗಳಲ್ಲಿ ಈ ವ್ಯವಸ್ಥೆ ಅಳವಡಿಸಲಾಗಿದೆ. ಯಶವಂತಪುರ ಟು ಕೆಂಗೇರಿ ಮಾರ್ಗದಲ್ಲಿ ಅತಿ ಹೆಚ್ಚಿನ ದೃಷ್ಟಿಮಾಂದ್ಯರು ಸಂಚಾರ ಮಾಡುವುದು ಬಿಎಂಟಿಸಿಗೆ ಗೊತ್ತಾಗಿದೆ. ಈ ನವೆಂಬರ್ ಒಳಗೆ ಬಿಎಂಟಿಸಿಯ 500 ಬಸ್​​ಗಳಿಗೆ ಈ ಆನ್ ಬೋರ್ಡ್ ಟೆಕ್ನಾಲಜಿ ಅಳವಡಿಸಲಾಗುತ್ತದೆ.ಮುಂದಿನ ದಿನಗಳಲ್ಲಿ ಎಲ್ಲಾ ಬಸ್​​ಗಳಲ್ಲಿ ಅಳವಡಿಸಲು ಚಿಂತನೆ ನಡೆಸಲಾಗಿದೆ.

ಬಿಎಂಟಿಸಿಯ ಈ ಕ್ರಮಕ್ಕೆ ದೃಷ್ಟಿಮಾಂದ್ಯರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಇದರಿಂದ ನಮಗೆ ತಿಂಬಾ ಸಹಾಯವಾಗಿದೆ ಎಂದು ವಿಶೇಷಚೇತನ ನಿತಿನ್ ಎಂಬವರು ‘ಟಿವಿ9’ಗೆ ತಿಳಿಸಿದ್ದಾರೆ.

ಇದನ್ನೂ ಓದಿ
Image
ಮಲ್ಲಸಂದ್ರ ಬಳಿ ಚಿರತೆ ಪ್ರತ್ಯಕ್ಷ: ಭಯಭೀತರಾದ ಜನ, ಕ್ಯಾಮರಾ ಅಳವಡಿಕೆ
Image
ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನ ಕೆಲವೆಡೆ ಮುಂದಿನ ಐದು ದಿನ ಮಳೆ
Image
ವಿದ್ಯಾರ್ಥಿಗಳು KSRTC ಬಸ್ ಪಾಸ್ ವಿತರಣೆ ಆರಂಭ: ಅರ್ಜಿ ಸಲ್ಲಿಕೆ ಹೇಗೆ?
Image
ಆನ್​ಲೈನ್ ಗೇಮಿಂಗ್ ವಂಚನೆ; ಬೆಂಗಳೂರು, ಮುಂಬೈ ಸೇರಿ 7 ಕಡೆ ಇಡಿ ದಾಳಿ

ಇದನ್ನೂ ಓದಿ: ವಿದ್ಯಾರ್ಥಿಗಳು KSRTC ಬಸ್ ಪಾಸ್ ವಿತರಣೆ ಆರಂಭ: ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ವಿವರ

ಒಟ್ಟಿನಲ್ಲಿ ದೃಷ್ಟಿ ವಿಶೇಷ ಚೇತನರಿಗಾಗಿ ಬಿಎಂಟಿಸಿ ಖಾಸಗಿ ಎನ್​​ಜಿಒ ಜೊತೆಗೂಡಿ ಇಂತಹದ್ದೊಂದು ಹೊಸ ಪ್ರಯತ್ನಕ್ಕೆ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ. ನಗರದ ಎಲ್ಲಾ ಬಿಎಂಟಿಸಿ ಬಸ್​ಗಳಲ್ಲೂ ಈ ಡಿವೈಸ್​​ಗಳನ್ನು ಅಳವಡಿಸಿದರೆ, ಮತ್ತಷ್ಟು ಅಂಧರಿಗೆ ತುಂಬಾ ಸಹಾಯ ಆಗುವುದಂತೂ ಖಂಡಿತ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!