Bengaluru New Year: ಪಾರ್ಟಿ ಮೂಡ್​​ನಲ್ಲಿ ಟೆರೆಸ್ ಮೇಲೆ ಹೋಗುವಂತಿಲ್ಲ, ಪೊಲೀಸರ ಮತ್ತೊಂದು ಸೂಚನೆ

ಪಾರ್ಟಿ ಮೂಡ್​ನಲ್ಲಿ ಯಾರು ಕೂಡ ಟೆರೆಸ್ ಮೇಲೆ ಹೋಗುವಂತಿಲ್ಲ ಎಂದು ಪೊಲೀಸರು ಸೂಚಿಸಿದ್ದಾರೆ. ಅದ್ದೂರಿ ಹೊಸ ವರ್ಷಾಚರಣೆ ನಡೆಯುವ ಬೆಂಗಳೂರಿನ ಬ್ರಿಗೇಡ್​​ ರಸ್ತೆಯಲ್ಲಿ ಶ್ವಾನ ದಳದಿಂದ ಪರಿಶೀಲನೆ ನಡೆಸಲಾಗಿದೆ.

Bengaluru New Year: ಪಾರ್ಟಿ ಮೂಡ್​​ನಲ್ಲಿ ಟೆರೆಸ್ ಮೇಲೆ ಹೋಗುವಂತಿಲ್ಲ, ಪೊಲೀಸರ ಮತ್ತೊಂದು ಸೂಚನೆ
ಹೊಸ ವರ್ಷಾಚರಣೆ ಮಾರ್ಗಸೂಚಿ (ಫೋಟೋ: ಸಂಗ್ರಹ ಚಿತ್ರ)
Follow us
| Updated By: Rakesh Nayak Manchi

Updated on:Dec 31, 2022 | 11:54 AM

ಬೆಂಗಳೂರು: ಪಬ್, ರೆಸ್ಟೊರೆಂಟ್ (Pub And Restaurant) ವಿಚಾರದಲ್ಲಿ ಬೆಂಗಳೂರು ಪೊಲೀಸರು (Bengaluru Police) ಮತ್ತೊಂದು ಸೂಚನೆ ಹೊರಡಿಸಿದ್ದಾರೆ. ಪಾರ್ಟಿ ಮೂಡ್​​ನಲ್ಲಿ ಟೆರೆಸ್ ಮೇಲೆ ಹೋಗುವಂತಿಲ್ಲ ಎಂದು ಪೊಲೀಸರು ಕಡ್ಡಾಯ ಸೂಚನೆಯನ್ನು ಹೊರಡಿಸಿದ್ದಾರೆ. ಹೊಸ ವರ್ಷಾಚರಣೆ ವೇಳೆ ಮದ್ಯ ಸೇವನೆ ಮಾಡಿ ಟೆರೆಸ್ ಹತ್ತಿ ಆಯಾ ತಪ್ಪಿ‌ ಬೀಳುವ ಸಾಧ್ಯತೆ ಹಿನ್ನಲೆ ಓಪನ್ ಟೆರೆಸ್​​ಗಳ ಕಡೆ ಯಾರು ಹೋಗದಂತೆ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ಟೆರೆಸ್ ಮೇಲೆ ಹೋಗುವ ಬಾಗಿಲುಗಳನ್ನ ಕಡ್ಡಾಯವಾಗಿ ಮುಚ್ಚುವಂತೆ ಪಬ್, ರೆಸ್ಟೋರೆಂಟ್ ಮಾಲೀಕರಿಗೆ ಸೂಚನೆ ನೀಡಲಾಗಿದೆ. ಟೆರೆಸ್​​ನಲ್ಲಿ ಪಾರ್ಟಿ ಹಾಲ್​​ಗಳಿದ್ದರೆ ಸುರಕ್ಷತಾ ಕ್ರಮಗಳನ್ನ ಕೈಗೊಳ್ಳುವಂತೆ ಪೊಲೀಸರು ಸೂಚನೆ ನೀಡಿದ್ದು, ಕುಡಿದ ಆಮಲಿನಲ್ಲಿರುವವರು ಸುರಕ್ಷಿತವಾಗಿ ವಿಶ್ರಾಂತಿ ಪಡೆಯಲು ಸ್ಥಳಾವಕಾಶ ವ್ಯವಸ್ಥೆ ಮಾಡಲು ಕೂಡ ಸೂಚಿಸಲಾಗಿದೆ.

ಬೆಂಗಳೂರಿನ ಬ್ರಿಗೇಡ್​​ ರಸ್ತೆಯಲ್ಲಿ ಶ್ವಾನ ದಳದಿಂದ ಪರಿಶೀಲನೆ

ಹೊಸ ವರ್ಷದ ಸಂಭ್ರಮಾಚರಣೆಗೆ ಬೆಂಗಳೂರು ಮಹಾನಗರ ಸಿದ್ಧವಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಬ್ರಿಗೇಡ್​​ ರಸ್ತೆಯಲ್ಲಿ ಶ್ವಾನ ದಳದಿಂದ ಪರಿಶೀಲನೆ ನಡೆಸಲಾಗುತ್ತಿದೆ. ಬ್ರಿಗೇಡ್​​ ರಸ್ತೆಯ ಪಬ್, ಬಾರ್, ಸ್ಟೋರ್​​ಗಳ ಬಳಿ ಪರಿಶೀಲನೆ ನಡೆಸಲಾಗುತ್ತಿದೆ. ಅನುಮಾನಸ್ಪದ ವಸ್ತುಗಳು ಕಂಡು ಬಂದಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Bengaluru New Year Guidelines: ಹೊಸ ವರ್ಷದ ಸಂಭ್ರಮಕ್ಕೆ ರಾಜಧಾನಿ ಬೆಂಗಳೂರು ಸಿದ್ಧ, ಸಂಚಾರ ಮಾರ್ಗದಲ್ಲಿ ಬದಲಾವಣೆ, ಬಿಗಿ ಪೊಲೀಸ್ ಭದ್ರತೆ

ಗ್ರಾಹಕರನ್ನು ಸೆಳೆಯಲು ಭಾರೀ ತಯಾರಿ

ಹೊಸ ವರ್ಷಕ್ಕೆ ರಂಗೇರುವ ಪಾರ್ಟಿಗೆ ಪಬ್​ ಬಾಲೀಕರು ಸಕಲ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಚರ್ಚ್ ಸ್ಟ್ರೀಟ್​ನ ಪಬ್​ಗಳಲ್ಲಿ ಬಾರೀ ಸಿದ್ಧತೆ ನಡೆಯುತ್ತಿದೆ. ಸಂಭ್ರಮಾಚರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ಹಿನ್ನಲೆ ಗ್ರಾಮಹಕರನ್ನು ತಮ್ಮತ್ತ ಸೆಳೆದುಕೊಳ್ಳಲು ಬೇಕಾದ ತಾಯಾರಿ ನಡೆಸುತ್ತಿದ್ದಾರೆ. ಲೈಟಿಂಗ್ಸ್, ಡೆಕೊರೆಷನ್​​ ಮುಂತಾದವುಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಡ್ರಂಕ್ ಅಂಡ್ ಡ್ರೈವ್ ಮೇಲೆ ಪೊಲೀಸರ ಕಣ್ಣು, ವಿವಿಧ ಕಡೆಗಳಲ್ಲಿ ಚೆಕ್​ಪೋಸ್ಟ್

ನಗರದಲ್ಲಿ ಡ್ರಂಕ್ ಅಂಡ್ ಡ್ರೈವ್ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಕೆಲವೊಂದು ಕಡೆಗಳಲ್ಲಿ ಚೆಕ್ ಪೋಸ್ಟ್​ಗಳನ್ನು ಹಾಕಲಾಗುತ್ತಿದೆ. ಮದ್ಯ ಸೇವನೆ ಮಾಡಿ ರ್ಯಾಶ್ ಡ್ರೈವಿಂಗ್ ಮಾಡುವವರ ಮೇಲೆ ಟ್ರಾಫಿಕ್ ಪೊಲೀಸರು ನಿಗಾ ಇರಿಸಲಿದ್ದು, ಪ್ರತಿಯೊಂದು ಸಿಗ್ನಲ್​ಗೂ ಸಂಚಾರಿ ಪೊಲೀಸ್ ಸಿಬ್ಬಂದಿ ನಿಯೋಜನೆಗೆ ಪ್ಲಾನ್ ಹಾಕಿಕೊಳ್ಳಲಾಗಿದೆ. ಸದ್ಯ ಒಂದೇ ವಾರದಲ್ಲಿ 220 ಡ್ರಂಕ್ ಅಂಡ್ ಡ್ರೈವ್ ಕೇಸ್ ದಾಖಲಿಸಿದ ಪೊಲೀಸರು ಎರಡು ಕೋಟಿಗೂ ಅಧಿಕ ದಂಡ ವಸೂಲಿ ಮಾಡಿದ್ದಾರೆ.

ಇದನ್ನೂ ಓದಿ: New Year 2023: ಡಿ.31ರ ರಾತ್ರಿಯಿಂದಲೇ ಬೆಂಗಳೂರಿನ 30 ಫ್ಲೈ ಓವರ್ ಬಂದ್, 1 ಲಕ್ಷಕ್ಕೂ ಅಧಿಕ ಸಿಸಿಟಿವಿಗಳ ಅಳವಡಿಕೆ

ಇದೀಗ ಟ್ರಯಲ್ ಮಾದರಿಯಲ್ಲಿ ಹೊಸ ವರ್ಷಾಚರಣೆ ನಡೆಯುವ ಪ್ರಮುಖ ರಸ್ತೆಗಳಲ್ಲೇ ಚೆಕ್ ಪೋಸ್ಟ್ ಹಾಕಿ ತಪಾಸಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಚೆಕ್ ಪೋಸ್ಟ್​​​ಗಳನ್ನ ಇಂದು ರಾತ್ರಿ 9 ಗಂಟೆಗೆ ಹಾಕಿಕೊಂಡು ಕಾರ್ಯಾಚರಣೆ ನಡೆಸಲಿದ್ದು, ಪೊಲೀಸ್ ಠಾಣೆಯಲ್ಲಿ ಐದಾರು ಸಿಬ್ಬಂದಿ ಬಿಟ್ಟು ಇನ್ಸ್​​ಪೆಕ್ಟರ್ ಹಾದಿಯಾಗಿ ರಾತ್ರಿ ಎಲ್ಲಾ ಪೊಲೀಸರು ರಾತ್ರಿ ಪಾಳಿಯಲ್ಲಿ ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡಲಾಗಿದೆ.

ಬ್ರಿಗೇಡ್ ರೋಡ್, ಎಮ್‌ಜಿ ರೋಡ್ ಹಾಗೂ ಚರ್ಚ್ ಸ್ಟ್ರೀಟ್ ಸಂಪರ್ಕಿತ ಅಷ್ಟ ದಿಕ್ಕುಗಳಲ್ಲಿ ಚೆಕ್ ಪೋಸ್ಟ್ ಹಾಕಲು ಸಿದ್ಧತೆ ನಡೆಸಲಾಗಿದ್ದು, ಬೆಂಗಳೂರು ಕೇಂದ್ರ ವಿಭಾಗ, ಕೋರಮಂಗಲ, ಇಂದಿರಾನಗರ ಸೇರಿ ಪ್ರಮುಖ ಸಂಪರ್ಕಿತ ರಸ್ತೆಗಳಲ್ಲಿ ಪೊಲೀಸರು ಹೆಚ್ಚಿನ ನಿಗಾ ಇರಿಸಲಿದ್ದಾರೆ. ಬರೋಬ್ಬರಿ 200 ಕಡೆ ಡ್ರಂಕ್ ಅಂಡ್ ಡ್ರೈವ್ ಚೆಕ್​ಗೆ ಸ್ಪೆಷಲ್ ಕಮಿಷನರ್ ಸಲೀಂ ಸೂಚನೆ ನೀಡಿದ್ದು, ಮೇಲ್ಸೇತುವೆ ಸರ್ವಿಸ್ ರೋಡ್, ಜನವಸತಿ ರಸ್ತೆಗಳಲ್ಲೂ ಸಂಚಾರಿ ಪೊಲೀಸರಿ ರೌಂಡ್ ಹೊಡಿಯಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:54 am, Sat, 31 December 22

ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು