ನಕಲಿ ನೋಟು ದಂಧೆ: ಬೆಂಗಳೂರು ಮೂಲದ ಮಹಿಳೆ ಅಪರಾಧ ಸಾಬೀತು, ಇಂದು ಶಿಕ್ಷೆ ಪ್ರಕಟ

2018 ರಲ್ಲಿ ನಡೆದಿದ್ದ ನಕಲಿ ನೋಟು ದಂಧೆಯಲ್ಲಿ ತೊಡಗಿದ್ದ ಮಹಿಳೆ ತಪ್ಪಿತಸ್ಥರೆಂದು ಸಾಬೀತು ಆಗಿದೆ. ಶಿಕ್ಷೆಯ ಪ್ರಮಾಣವನ್ನು ಇಂದು ಕೋರ್ಟ್ ಪ್ರಕಟಿಸಲಿದೆ. ಈ ಪ್ರಕರಣವನ್ನು 2018ರಲ್ಲಿ NIA ಭೇದಿಸಿ ನಂತರ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿತು. ಈ ಹಿಂದೆ ವನಿತಾ ಮತ್ತು ಆಕೆಯ ಆರು ಸಹಚರರನ್ನು ಮಾದನಾಯಕನಹಳ್ಳಿ ಪೊಲೀಸರು 2018ರ ಮಧ್ಯದಲ್ಲಿ ಬಂಧಿಸಿ 2,000 ರೂಪಾಯಿ ಮುಖಬೆಲೆಯ 6,84,000 ರೂಪಾಯಿಗಳ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದರು.

ನಕಲಿ ನೋಟು ದಂಧೆ: ಬೆಂಗಳೂರು ಮೂಲದ ಮಹಿಳೆ ಅಪರಾಧ ಸಾಬೀತು, ಇಂದು ಶಿಕ್ಷೆ ಪ್ರಕಟ
ಕೋರ್ಟ್​ ತೀರ್ಪು
Follow us
TV9 Web
| Updated By: ಆಯೇಷಾ ಬಾನು

Updated on: Sep 12, 2023 | 7:21 AM

ಬೆಂಗಳೂರು,ಸೆ.12: ರಾಷ್ಟ್ರೀಯ ತನಿಖಾ ಸಂಸ್ಥೆ (NIA) ದಾಖಲಿಸಿದ ನಕಲಿ ನೋಟು ದಂಧೆ ಪ್ರಕರಣಕ್ಕೆ ಸಂಬಂಧಿಸಿ  ವಿಶೇಷ ನ್ಯಾಯಾಲಯವು ಸೋಮವಾರ ಬೆಂಗಳೂರು ಮೂಲದ ಮಹಿಳೆಯೊಬ್ಬರನ್ನು ತಪ್ಪಿತಸ್ಥೆ ಎಂದು ಆದೇಶ ನೀಡಿದೆ. 2018 ರಲ್ಲಿ ನಡೆದಿದ್ದ ನಕಲಿ ನೋಟು ದಂಧೆಯಲ್ಲಿ(Counterfeit Currency Racket) ತೊಡಗಿದ್ದ ಮಹಿಳೆ ತಪ್ಪಿತಸ್ಥರೆಂದು ಸಾಬೀತು ಆಗಿದೆ. ಶಿಕ್ಷೆಯ ಪ್ರಮಾಣವನ್ನು ಇಂದು ಕೋರ್ಟ್ ಪ್ರಕಟಿಸಲಿದೆ. ಈ ಪ್ರಕರಣವನ್ನು 2018ರಲ್ಲಿ NIA ಭೇದಿಸಿ ನಂತರ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿತು. ಇನ್ನು ರಾಮಚಂದ್ರಾಪುರದ ಜೆ ವನಿತಾ ಅಲಿಯಾಸ್ ತಂಗಂ (53) ಅವರ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಮಂಗಳವಾರ(ಸೆ.12) ಪ್ರಕಟಿಸಲಿದೆ.

ವನಿತಾ ಅವರು ಆಗಸ್ಟ್ 2018 ರಿಂದ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ವನಿತಾ ಮತ್ತು ಆಕೆಯ ಆರು ಸಹಚರರನ್ನು ಮಾದನಾಯಕನಹಳ್ಳಿ ಪೊಲೀಸರು 2018ರ ಮಧ್ಯದಲ್ಲಿ ಬಂಧಿಸಿ 2,000 ರೂಪಾಯಿ ಮುಖಬೆಲೆಯ 6,84,000 ರೂಪಾಯಿಗಳ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದರು.

ಇದನ್ನೂ ಓದಿ: ಚಲಿಸುತ್ತಿದ್ದ ನಿಜಾಮುದ್ದೀನ್ ಎಕ್ಸ್​ಪ್ರೆಸ್ ರೈಲಿನಲ್ಲಿ ಪ್ರಜ್ಞೆ ತಪ್ಪಿದ ಪ್ರಯಾಣಿಕರು, ನಾಲ್ವರಿಗೆ ಬಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ

ವನಿತಾ ಮತ್ತು ಇತರ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ-489B (ನಕಲಿ ಕರೆನ್ಸಿ ಬಳಸುವುದು), 489C (ನಕಲಿ ಕರೆನ್ಸಿ ಸ್ವಾಧೀನ), 120B (ಕ್ರಿಮಿನಲ್ ಪಿತೂರಿ), 34 (ಸಾಮಾನ್ಯ ಉದ್ದೇಶ) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ನಂತರ, ಪ್ರಕರಣವನ್ನು ಸೆಪ್ಟೆಂಬರ್ 2018 ರಲ್ಲಿ ಎನ್ಐಎಗೆ ಹಸ್ತಾಂತರಿಸಲಾಯಿತು. ಬಳಿಕ ಇನ್ನೂ ಇಬ್ಬರು ಶಂಕಿತರನ್ನು ಎನ್‌ಐಎ ಬಂಧಿಸಿತ್ತು.

ಡಿಸೆಂಬರ್ 2020 ರಲ್ಲಿ, ಸಜ್ಜದ್ ಅಲಿ, ಎಂಜಿ ರಾಜು ಮತ್ತು ಅಬ್ದುಲ್ ಖಾದಿರ್ ಎಂಬ ಮೂವರು ಆರೋಪಿಗಳು ತಪ್ಪೊಪ್ಪಿಕೊಂಡರು ಮತ್ತು ವಿಶೇಷ ನ್ಯಾಯಾಲಯವು ಫೆಬ್ರವರಿ 2021 ರಲ್ಲಿ ಅವರಿಗೆ ಆರು ವರ್ಷಗಳ ಸಾದಾ ಜೈಲು ಶಿಕ್ಷೆಯನ್ನು ವಿಧಿಸಿತು. ಇನ್ನಿಬ್ಬರು ಆರೋಪಿಗಳಾದ ಗಂಗಾಧರ ರಾಮಪ್ಪ ಕೋಖರ್ ಮತ್ತು ಸಬ್ರುದ್ದೀನ್ ಅವರಿಗೆ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?