ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ (New Year’s Eve Celebrations in Bengaluru)ಗೆ ಬೆಂಗಳೂರು ಮಹಾನಗರ ಸಿದ್ಧಗೊಂಡಿದ್ದು, ರಾಜಧಾನಿಯ ಮೂಲೆ ಮೂಲೆಯಲ್ಲೂ ಪೊಲೀಸರು ಹದ್ದಿನ (Police Security in Bengaluru) ಕಣ್ಣಿಟ್ಟಿದ್ದಾರೆ. ಮುಂಜಾಗ್ರತ ಕ್ರಮವಾಗಿ ಭಧ್ರತೆಗೆ 8,500ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಸಂಚಾರ ಮಾರ್ಗದಲ್ಲಿ ಬದಲಾವಣೆ (Traffic route change in Bengaluru) ಮಾಡಲಾಗಿದ್ದು, ಎಂ.ಜಿ ರಸ್ತೆ, ಬ್ರಿಡೇಗ್ ರಸ್ತೆ, ಚರ್ಚ್ ಸ್ಟ್ರೀಟ್ ಸೇರಿದಂತೆ ಕೆಲವೊಂದು ಪ್ರದೇಶಗಳಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ವಾಹನ ಹಾಗೂ ತುರ್ತು ವಾಹನ ಸಂಚಾರಕ್ಕೆ ಮಾತ್ರ ಅವಕಾಶ ನೀಡಿ ಉಳಿದೆಲ್ಲಾ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿ ಆದೇಶಿಸಲಾಗಿದೆ.
ನಗರದಲ್ಲಿ ಭದ್ರತೆಗಾಗಿ 8,500ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆಯಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ನಾಲ್ವರು ಡಿಸಿಪಿ, 10 ಎಸಿಪಿ ಸೇರಿ 3 ಸಾವಿರ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ನಗರದಲ್ಲಿ 160 ಇನ್ಸ್ಪೆಕ್ಟರ್, 600 ಪಿಎಸ್ಐ, 800 ಎಎಸ್ಐ, 1800 ಹೆಡ್ಕಾನ್ಸ್ಟೇಬಲ್, 5200 ಕಾನ್ಸ್ಟೇಬಲ್ಗಳ ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ: New Year Gift: ಹೊಸ ವರ್ಷಕ್ಕೆ ಗಿಫ್ಟ್; ಅಂಚೆ ಸೇರಿದಂತೆ ಹಲವು ಠೇವಣಿಗಳ ಬಡ್ಡಿ ದರ ಜನವರಿ 1ರಿಂದ ಹೆಚ್ಚಳ
ಎಂ.ಜಿ.ರಸ್ತೆಯ ಪ್ರವೇಶದ್ವಾರದಲ್ಲಿ ಮೆಟಲ್ ಡಿಟೆಕ್ಟರ್ಗಳನ್ನು ಅಳವಡಿಸಲಾಗಿದ್ದು, ಕೋರಮಂಗಲ, ಇಂದಿರಾನಗರ, ವೈಟ್ಫೀಲ್ಡ್ ಪ್ರದೇಶದಲ್ಲೂ ಭದ್ರತೆ ಕೈಗೊಳ್ಳಲಾಗಿದೆ. 2500 ಪೊಲೀಸರ ನಿಯೋಜನೆ ಮಾಡುವುದರ ಜೊತೆಗೆ 20 ಡ್ರೋನ್ ಕ್ಯಾಮರಾಗಳ ಬಳಕೆ ಮಾಡಲಾಗುತ್ತಿದೆ. ರಾತ್ರಿ 1 ಗಂಟೆಯವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ ನೀಡಲಾಗಿದ್ದು, ಅವಧಿ ಮೀರಿ ಸಂಭ್ರಮಾಚರಣೆಯಲ್ಲಿ ತೊಡಗಿದವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಅಲ್ಲದೆ ಸುರಕ್ಷತೆಗಾಗಿ ವಾಚ್ಟವರ್ ಮತ್ತು ಮಹಿಳಾ ಸುರಕ್ಷತಾ ಕೊಠಡಿಗಳನ್ನು ಪೊಲೀಸರು ನಿರ್ಮಿಸಿದ್ದಾರೆ.
ಇಂದು ಸಂಜೆ 4 ರಿಂದ ಮಧ್ಯರಾತ್ರಿ 3ವರೆಗೆ ಕೆಲವೊಂದು ಪ್ರದೇಶಗಳಲ್ಲಿ ವಾಹನ ನಿಲುಗಡೆಗೆ ನಿರ್ಭಂದ ಹೇರಲಾಗಿದೆ. ಎಂಜಿ ರಸ್ತೆ- ಅನಿಲ್ ಕುಂಬ್ಳೆ ವೃತ್ತದಿಂದ ಟ್ರಿನಿಟಿ ವೃತ್ತದವರೆಗೆ, ಬ್ರಿಗೇಡ್ ರಸ್ತೆ – ಆರ್ಟ್ ಕ್ರ್ಯಾಫ್ಟ್ ಜಂಕ್ಷನ್ನಿಂದ ಅಪೇರಾ ಜಂಕ್ಷನ್ವರೆಗೆ, ಚರ್ಚ್ ಸ್ರ್ಟೀಟ್ ರಸ್ತೆ- ಬ್ರಿಗೇಡ್ ರಸ್ತೆಯಿಂದ ಸೆಂಟ್ ಮಾರ್ಕ್ಸ್ ಜಂಕ್ಷನ್ವರೆಗೆ, ರೆಸ್ಟ್ ಹೌಸ್ ರಸ್ತೆ – ಬ್ರಿಗೇಡ್ ರಸ್ತೆ ಜಂಕ್ಷನ್ನಿಂದ ಮ್ಯೂಸಿಯಂ ರಸ್ತೆಯ ಜಂಕ್ಷನ್ವರೆಗೆ, ಮ್ಯೂಸಿಯಂ ರಸ್ತೆಯಲ್ಲಿ – ಎಂಜಿ ರಸ್ತೆ ಜಂಕ್ಷನ್ನಿಂದ ಎಸ್.ಬಿ.ಐ ವೃತ್ತದವರೆಗೆ ಸಂಜೆ 4 ಘಂಟೆಯ ಒಳಗಾಗಿ ವಾಹನ ತೆರವುಗೊಳಿಸುವುದಕ್ಕೆ ಸೂಚನೆ ನೀಡಲಾಗಿದೆ. ಪೊಲೀಸ್ ವಾಹನ ಸೇರಿದಂತೆ ತುರ್ತು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶವಿದ್ದು, ನಿಯಮ ಉಲ್ಲಂಘಿಸಿದರೆ ಪೊಲೀಸರು ದಂಡ ವಿಧಿಸಲಿದ್ದಾರೆ.
ಇದನ್ನೂ ಓದಿ: BMTC Ticket Fare: ಬಿಎಂಟಿಸಿ ಬಸ್ ಟಿಕೆಟ್ ದರ ಹೆಚ್ಚಳ; ಹೊಸ ವರ್ಷಕ್ಕೆ ಪ್ರಯಾಣಿಕರಿಗೆ ಶಾಕ್
ಅ.31 ರಂದು ರಾತ್ರಿ ಎರಡು ಘಂಟೆಯ ನಂತರ ಎಂಜಿ ರಸ್ತೆಯಿಂದ ಹಲಸೂರು ಕಡೆ ಹೋಗುವವರು- ಅನಿಲ್ ಕುಂಬ್ಳೆ ರಸ್ತೆಯಲ್ಲಿ ಎಡಕ್ಕೆ ತಿರುಗಿ ಸೆಂಟ್ರಲ್ ಸ್ರ್ರೀಟ್ – ಬಿ.ಆರ್.ವಿ ಜಂಕ್ಷನ್ ಬಲ ತಿರುವು ಪಡೆದು ಕಬ್ಬನ್ ರಸ್ತೆಯ ಮೂಲಕವಾಗಿ ವೆಬ್ಸ್ ಜಂಕ್ಷನ್ ಬಳಿಯಿಂದ ಸಾಗಬೇಕು. ಹಲಸೂರು ಕಡೆಯಿಂದ ಕಂಟೋನ್ ಮೆಂಟ್‌ಕಡೆ ಸಾಗುವವರು ಕಂಟೋನ್ ಮೆಂಟ್ ಕಡೆ ಹೋಗುವ ವಾಹನಗಳು ನಿಟಿ ವೃತ್ತದಲ್ಲಿ ಬಲ ತಿರುವು ಪಡೆದು- ಹಲಸೂರು ರಸ್ತೆ- ಡಿಕಂನ್ಸ್ನ್ ರಸ್ತೆಯ ಮಾರ್ಗವಾಗಿ – ಕಬ್ಬನ್ ರಸ್ತೆ ಮೂಲಕ ಸಂಚಾರ ಮಾಡಬೇಕು.
ಕಾಮರಾಜ ರಸ್ತೆಯಲ್ಲಿ ಕಬ್ಬನ್ ರಸ್ತೆ ಜಂಕ್ಷನ್ನಿಂದ ಕಮರ್ಷಿಯಲ್ ಸ್ಟ್ರೀಟ್ ಜಂಕ್ಷನ್ವರೆಗು ವಾಹನಗಳ ನಿಲುಗಡೆಗೆ ಅವಕಾಶ ಇದ್ದು, ಸಾರ್ವಜನಿಕರು ಶಿವಾಜಿನಗರ ಬಿಎಂಟಿಸಿ ಶಾಪಿಂಗ್ ಕಾಂಪ್ಲೆಕ್ಸ್ನಲ್ಲಿ ವಾಹನ ನಿಲುಗಡೆಗೆ ಅವಕಾಶ ಇದೆ. ಪಾದಚಾರಿಗಳು ಬ್ರಿಗೇಡ್ ರಸ್ತೆಯಲ್ಲಿ ಎಂಜಿ ರಸ್ತೆ ಜಂಕ್ಷನ್ನಿಂದ – ಅಪೇರಾ ಜಂಕ್ಷನ್ ಕಡೆಗೆ ನಡೆದುಕೊಂಡು ಹೋಗಲು ಮಾತ್ರ ಅವಕಾಶ ಇದೆ. ಈ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ (ಒನ್ ವೇನಲ್ಲಿ) ನಡೆದುಕೊಂಡು ಹೋಗುವುದಕ್ಕು ಸಹ ನಿಷೇಧ ಹೇರಲಾಗಿದೆ. ಪುನಃ ಎಂ.ಜಿ ರಸ್ತೆಗೆ ಬರಬೇಕಾದರೆ ರೆಸಿಡೆನ್ಸಿ ರಸ್ತೆ ಕ್ರಾಸ್ ಮಾರ್ಗವಾಗಿ ಬರಬೇಕು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:51 am, Sat, 31 December 22