ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ಹೀರಾಬೆನ್ ಮೋದಿಗೆ ಶ್ರದ್ಧಾಂಜಲಿ: ಎಲ್ಲ ರಾಜಕಾರಣಿಗಳು ಮೋದಿ ಆದರ್ಶಗಳನ್ನು ಪಾಲಿಸಬೇಕು ಎಂದ ಮುತಾಲಿಕ್
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಅವರು ನಿಧನರಾದ ಹಿನ್ನೆಲೆ ಬೆಂಗಳೂರಿನ ದ್ವಾರಕಾ ಹೊಟೇಲ್ನಲ್ಲಿ ಶ್ರೀರಾಮಸೇನೆಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು
ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ತಾಯಿ ಶತಾಯುಷಿ ಹೀರಾಬೆನ್ (Hira ben) ಇಂದು (ಡಿ. 30) ಬೆಳಿಗ್ಗೆ ನಿಧನಾರಾಗಿದ್ದಾರೆ. ಈ ಹಿನ್ನೆಲೆ ಬೆಂಗಳೂರಿನ ದ್ವಾರಕಾ ಹೊಟೇಲ್ನಲ್ಲಿ ಶ್ರೀರಾಮಸೇನೆಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮಾತನಾಡಿ ಮೋದಿ ಅವರ ತಾಯಿ ನಿಧನವಾದ ಸುದ್ದಿ ಕೇಳಿ ಆಘಾತವಾಯ್ತು ಅವರ ಆತ್ಮಕ್ಕೆ ಶಾಂತಿ ಸಿಗಲಿ. ಸರಳವಾಗಿ, ಆದರ್ಶವಾಗಿ, ಮೋದಿ ಅವರು ಸಂಸ್ಕಾರ ಮಾಡಿದರು ಎಂದರು.
ಇದನ್ನೂ ಓದಿ: ಬಡತನದಲ್ಲೇ ಜೀವನ ಕಳೆದು, ಸಾರ್ಥಕ 100 ವರ್ಷಗಳ ಅನುಭವ ಹೊತ್ತು ಸಾಗಿದ ಹೀರಾಬೆನ್ ಮೋದಿ
ಇಂದು ಕೂಡ ರಜೆ ತೆಗೆದುಕೊಳ್ಳದೆ ಅಂತ್ಯಕ್ರಿಯೆ ಮಾಡಿ, ಪಶ್ಚಿಮ ಬಂಗಾಳದ ಕೆಲಸದಲ್ಲಿ ತೊಡಗಿದ್ದರು. ಮಂತ್ರಿ, ಮುಖ್ಯಮಂತ್ರಿ, ಸಚಿವರು ಯಾರೂ ಬರಬೇಡಿ ಅನ್ನೋ ಸೂಚನೆ ಕಳಿಸಿದ್ದಾರೆ. ನಮ್ಮ ರಾಜ್ಯದಲ್ಲಿ ಆಗಿದ್ದರೇ ರಜೆ ಕೊಟ್ಟು, ದೊಡ್ಡಮಟ್ಟದ ಅಂತಿಮಯಾತ್ರೆ ಮಾಡುತ್ತಿದ್ದರು. ಆದ್ರೆ ಇದ್ಯಾವುದಕ್ಕೂ ಅವಕಾಶ ಕೊಡದೇ, ನನ್ನ ತಾಯಿಗೆ ನಾವು ಐದು ಜನ ಮಕ್ಕಳು ಇದ್ದೇವೆ ನಾವೇ ಹೆಗಲು ಕೊಡುತ್ತೇವೆ ಅಂತ ಹೇಳಿದರರು. ಆ ಮೂಲಕ ಪ್ರಧಾನಿ ಮೋದಿ ಆದರ್ಶರಾದರು. ಎಲ್ಲ ರಾಜಕಾರಣಿಗಳು ಮೋದಿ ಆದರ್ಶಗಳನ್ನು ಪಾಲಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: ಮಗ ಪ್ರಧಾನಿಯಾಗಿದ್ದರೂ ಹೀರಾಬೆನ್ ತಮ್ಮ ಹಳ್ಳಿಯಲ್ಲೇ ಇರಲು ಬಯಸಿದ್ದಕ್ಕೆ ಕಾರಣ ಇಲ್ಲಿದೆ
ಪ್ರಧಾನಿ ಮೋದಿ ತಾಯಿ ಹೀರಾಬೆನ್ ಮೋದಿ ನಿಧನ
ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಗುಜರಾತ್ನ ಅಹಮದಾಬಾದ್ನಲ್ಲಿ ಶುಕ್ರವಾರ ನಿಧನರಾದರು. ಅವರಿಗೆ 100 ವರ್ಷ ವಯಸ್ಸಾಗಿತ್ತು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರನ್ನು ನಗರದ ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟರು.
ಹೀರಾಬೆನ್ ಮೋದಿ ಅವರು 2022ರ ಜೂನ್ 18ರಂದು 100ನೇ ವರ್ಷದ ಜನ್ಮದಿನ ಆಚರಿಸಿಕೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿನಗರ ನಿವಾಸಕ್ಕೆ ಭೇಟಿ ನೀಡಿ ತಾಯಿಗೆ ಶುಭಾಶಯ ತಿಳಿಸಿ, ಆಶೀರ್ವಾದ ಪಡೆದಿದ್ದರು. ತಾಯಿಯ ಪಾದ ತೊಳೆದು ಪೂಜಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:11 pm, Fri, 30 December 22