AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Reservation: 2ಸಿ, 2ಡಿಯವರಿಗೆ ಸದ್ಯಕ್ಕಿಂತ ಶೇಕಡಾ ನಾಲ್ಕರಷ್ಟು ಹೆಚ್ಚು ಮೀಸಲಾತಿ ಸಿಗಲಿದೆ: ಮುರುಗೇಶ್ ನಿರಾಣಿ

ಹೊಸದಾಗಿ ಸೃಷ್ಟಿ ಮಾಡಿರುವ 2ಸಿ ಮತ್ತು 2ಡಿ ಯವರಿಗೆ ಸದ್ಯಕ್ಕಿಂತ ಶೇಕಡಾ ನಾಲ್ಕರಷ್ಟು ಹೆಚ್ಚು ಮೀಸಲಾತಿ ಸಿಗಲಿದೆ ಎಂದು ಸಚಿವ ಮುರುಗೇಶ್ ನಿರಾಣಿ ಸ್ಪಷ್ಟನೆ ನೀಡಿದ್ದಾರೆ.

Reservation: 2ಸಿ, 2ಡಿಯವರಿಗೆ ಸದ್ಯಕ್ಕಿಂತ ಶೇಕಡಾ ನಾಲ್ಕರಷ್ಟು ಹೆಚ್ಚು ಮೀಸಲಾತಿ ಸಿಗಲಿದೆ: ಮುರುಗೇಶ್ ನಿರಾಣಿ
ಸಚಿವ ಮುರುಗೇಶ್ ನಿರಾಣಿImage Credit source: thehindubusinessline.com
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Dec 30, 2022 | 6:12 PM

Share

ಕಲಬುರಗಿ: ಲಿಂಗಾಯತ್​ ಪಂಚಮಸಾಲಿ (Panchamasali) ಮತ್ತು ಒಕ್ಕಲಿಗ ಮೀಸಲಾತಿ (Reservation) ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎರಡು ಪ್ರತ್ಯೇಕ ಕೆಟಗರಿಗಳನ್ನು ಗುರುವಾರ (ಡಿ.29) ಸಂಪುಟ ಸಭೆಯಲ್ಲಿ ಅಸ್ತಿತ್ವಕ್ಕೆ ತಂದಿದೆ. ಆದರೆ ಎಷ್ಟು ಪ್ರಮಾದಲ್ಲಿ ಮಿಸಲಾತಿ ನೀಡಲಾಗುತ್ತದೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿರಲಿಲ್ಲ. ಈ ಕುರಿತಾಗಿ ಇಂದು (ಡಿ. 30) ಕಲಬುರಗಿಯಲ್ಲಿ ಸಚಿವ ಮುರುಗೇಶ್ ನಿರಾಣಿ ಸ್ಪಷ್ಟನೆ ನೀಡಿದ್ದಾರೆ. ಒಕ್ಕಲಿಗರಿಗೆ 2ಸಿ, ಲಿಂಗಾಯತರಿಗೆ 2ಡಿ ಕ್ಯಾಟಗರಿ ಸೃಷ್ಟಿ ವಿಚಾರವಾಗಿ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಯಾವುದೇ ಸಮುದಾಯಕ್ಕೆ ಮೀಸಲಾತಿ ಹೆಚ್ಚು ಕಡಿಮೆ ಮಾಡಿಲ್ಲ. ಹೊಸದಾಗಿ ಸೃಷ್ಟಿ ಮಾಡಿರುವ 2ಸಿ ಮತ್ತು 2ಡಿ ಯವರಿಗೆ ಸದ್ಯಕ್ಕಿಂತ ಶೇಕಡಾ ನಾಲ್ಕರಷ್ಟು ಹೆಚ್ಚು ಮೀಸಲಾತಿ ಸಿಗಲಿದೆ ಎಂದು ಹೇಳಿದರು.

ವೀರಶೈವ ಲಿಂಗಾಯತರಿಗೆ ಶೇ.7ರಿಂದ 8ರಷ್ಟು ಮೀಸಲಾತಿ ಸಿಗಲಿದೆ. ಒಕ್ಕಲಿಗ ಸಮುದಾಯಕ್ಕೆ 6% ಮೀಸಲಾತಿ ಸಿಗುವ ಸಾಧ್ಯತೆ ಇದೆ. 2010ರಲ್ಲಿ ಪಂಚಮಸಾಲಿ ಸಮಾಜವನ್ನು ನಾವೇ 3ಬಿಗೆ ಸೇರಿಸಿದ್ದೆವು. 2013-18ರಲ್ಲಿ 2ಎ ಮೀಸಲಾತಿಗೆ ಯಾರೂ ಹೋರಾಟ ಮಾಡಲಿಲ್ಲ. ಜಾತಿಗಳ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಮಾಡ್ತೇವೆ. 2ಸಿ ಮತ್ತು 2ಡಿಗೆ ಸದ್ಯಕ್ಕೆ ಶೇ.4ಕ್ಕಿಂತ ಹೆಚ್ಚು ಮೀಸಲಾತಿ ಸಿಗಲಿದೆ ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

ಇದನ್ನೂ ಓದಿ: Reservation: ಚುನಾವಣೆ ಹೊತ್ತಲ್ಲಿ ಮೀಸಲಾತಿ ಅಸ್ತ್ರ ಪ್ರಯೋಗ, ಪ್ರಬಲ ಸಮುದಾಯಗಳನ್ನು ಎದುರು ಹಾಕಿಕೊಳ್ಳದೇ ಜಾಣ ನಡೆ ಇಟ್ಟ ಬಿಜೆಪಿ ಸರ್ಕಾರ

2ಎ ಕೇಳಿದ್ದ ಲಿಂಗಾಯತ ಸಮುದಾಯಕ್ಕೆ 2ಡಿ ಕೆಟಗರಿ

ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ನೀಡಬೇಕೆಂದು ಬೇಡಿಕೆ ಇಟ್ಟಿದೆ. ಆದರೆ, ಸರ್ಕಾರ ಇಡೀ ಲಿಂಗಾಯತ ಸಮುದಾಯವನ್ನೇ 2D ಕೆಟಗರಿ ಸೇರಿಸಲು ಮುಂದಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಪಂಚಮಸಾಲಿ ಸಮುದಾಯಕ್ಕೆ ಪ್ರತ್ಯೇಕ ಕೆಟಗರಿ ಸೃಷ್ಟಿಸಿಲ್ಲ. ಬದಲಾಗಿ 2ಡಿ ಕೆಟಗರಿಯಲ್ಲೇ ಪಂಚಮಸಾಲಿ ಸಮುದಾಯವನ್ನು ಸೇರಿಸಲಾಗಿದೆ. ವೀರಶೈವ ಲಿಂಗಾಯತರು ಇದುವರೆಗೆ 3ಬಿ ಕೆಟಗರಿಯಲ್ಲಿದ್ದರು. ಈಗ 2ಡಿ ಕೆಟಗರಿಯಲ್ಲಿ ಒಟ್ಟಾರೆ ಲಿಂಗಾಯತರಿಗೆ ಮೀಸಲಾತಿ ಫಿಕ್ಸ್‌ ಮಾಡಲು ಸರ್ಕಾರ ತೀರ್ಮಾನಿಸಿದೆ.

ಒಂದೇ ಕಲ್ಲಲ್ಲಿ ಎರಡು ಹಕ್ಕಿ

ಇನ್ನು ಎರಡು ಹೊಸ ಕೆಟಗರಿ ರಚನೆ ಮಾಡುವುದೊಂದಿಗೆ ಈಗಾಗಲೇ 3ಎ ಮತ್ತು 3ಬಿನಲ್ಲಿದ್ದ ಉಳಿದ ಸಮುದಾಯಗಳು ಯಥಾಸ್ಥಿತಿಯಲ್ಲೇ ಇರಲಿವೆ. ಸದ್ಯ ಸಿಗುತ್ತಿರುವ ಮೀಸಲಾತಿ ಹಾಗೇ ಇರಲಿದೆ. ಆದ್ರೆ ಮುಂದಿನ ದಿನಗಳಲ್ಲಿ ಈ ಮೀಸಲಾತಿ ಪ್ರಮಾಣ ಹೆಚ್ಚು ಕಡಿಮೆ ಆಗುತ್ತಾ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಆದ್ರೆ ಸರ್ಕಾರವಂತೂ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯೋ ಮೂಲಕ ಮೀಸಲಾತಿ ಸಂಕಷ್ಟದಿಂದ ಪಾರಾಗಿದೆ.

ಇದನ್ನೂ ಓದಿ: Panchamasali Reservation: ಒಕ್ಕಲಿಗ ಹಾಗೂ ಲಿಂಗಾಯತರಿಗೆ ಪ್ರತ್ಯೇಕ ಕೆಟಗರಿ ರಚನೆ: ಮೀಸಲಾತಿ ಪರಿಹರಿಸಲು ಬೊಮ್ಮಾಯಿ ಸರ್ಕಾರದ ಹೊಸ ಸೂತ್ರ

ಬಿಜೆಪಿ ಸರ್ಕಾರ ಚುನಾವಣೆ ಹೊತ್ತಲ್ಲಿ ಎರಡು ಪ್ರಬಲ ಸಮುದಾಯಗಳನ್ನು ಎದುರು ಹಾಕಿಕೊಳ್ಳದೇ ಮೀಸಲಾತಿ ಅಸ್ತ್ರ ಪ್ರಯೋಗಿಸಿ ಎಚ್ಚರಿಕೆ ಹೆಜ್ಜೆ ಇಟ್ಟಿದೆ. ಆದರೆ ಸರ್ಕಾರದ ಈ ನಡೆಯನ್ನು ಎರಡು ಸಮುದಾಯಗಳು ಒಪ್ಪಿಕೊಳ್ಳುತ್ತಾವೆಯೋ ಅಥವಾ ವಿರೋಧಿಸುತ್ತವೆಯಾ ಎನ್ನುವುದನ್ನು ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:11 pm, Fri, 30 December 22

ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ
ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ
ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು
ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು
ಶಾಸಕರ ಆಹ್ವಾನ ಬೇಕಿಲ್ಲ, ಮಂಡ್ಯ ಜನ ಜವಾಬ್ದಾರಿ ನೀಡಿದ್ದಾರೆ: ಹೆಚ್​ಡಿಕೆ
ಶಾಸಕರ ಆಹ್ವಾನ ಬೇಕಿಲ್ಲ, ಮಂಡ್ಯ ಜನ ಜವಾಬ್ದಾರಿ ನೀಡಿದ್ದಾರೆ: ಹೆಚ್​ಡಿಕೆ
ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!
ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!
ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್
ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು
ರಂದೀಪ್ ಸುರ್ಜೇವಾಲಾ ಭೇಟಿಯ ನಂತರ ಕೊಂಚ ಖಿನ್ನರಾಗಿರುವ ಡಿಸಿಎಂ
ರಂದೀಪ್ ಸುರ್ಜೇವಾಲಾ ಭೇಟಿಯ ನಂತರ ಕೊಂಚ ಖಿನ್ನರಾಗಿರುವ ಡಿಸಿಎಂ