ಪ್ರೀತಿಸಿದ ಹುಡುಗ ನನಗೆ ಬೇಡ, IAS ಅಧಿಕಾರಿ ಜೊತೆ ಮದುವೆ ಮಾಡಿಸು: ಬನಶಂಕರಿ ದೇವಿಗೆ ಯುವತಿ ಪತ್ರ

ಬೆಂಗಳೂರಿನ ಬನಶಂಕರಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಶುಕ್ರವಾರ ನಡೆಯಿತು. ಹುಂಡಿಯಲ್ಲಿ ಭಕ್ತರು ಹಣ ಮಾತ್ರವಲ್ಲದೆ, ತಮ್ಮ ಕೋರಿಕೆಗಳನ್ನು ಪತ್ರದಲ್ಲಿ ಬರೆದು ಹಾಕಿದ್ದಾರೆ. ಇನ್ನು ಬನಶಂಕರಿ ಹುಂಡಿಯಲ್ಲಿನ ಪತ್ರಗಳನ್ನು ಓದಿ, ಆಡಳಿತ ಮಂಡಳಿಯವರು ಶಾಕ್ ಆಗಿದ್ದಾರೆ.

ಪ್ರೀತಿಸಿದ ಹುಡುಗ ನನಗೆ ಬೇಡ, IAS ಅಧಿಕಾರಿ ಜೊತೆ ಮದುವೆ ಮಾಡಿಸು: ಬನಶಂಕರಿ ದೇವಿಗೆ ಯುವತಿ ಪತ್ರ
ಬನಶಂಕರಿ ದೇವಿಗೆ ಪತ್ರ
Follow us
Poornima Agali Nagaraj
| Updated By: ವಿವೇಕ ಬಿರಾದಾರ

Updated on:May 24, 2024 | 11:25 AM

ಬೆಂಗಳೂರು, ಮೇ 24: ನಗರದ ಬನಶಂಕರಿ ದೇವಸ್ಥಾನದ (Banashankari Temple) ಹುಂಡಿ ಎಣಿಕೆ ಕಾರ್ಯ ಇಂದು (ಮೇ 24) ನಡೆಯಿತು. ಹುಂಡಿಯಲ್ಲಿ ಭಕ್ತರು ಹಣ ಮಾತ್ರವಲ್ಲದೆ, ತಮ್ಮ ಕೋರಿಕೆಗಳನ್ನು ಪತ್ರದಲ್ಲಿ ಬರೆದು ಹಾಕಿದ್ದಾರೆ. ಇನ್ನು ಬನಶಂಕರಿ ಹುಂಡಿಯಲ್ಲಿನ ಪತ್ರಗಳನ್ನು ಓದಿ, ಆಡಳಿತ ಮಂಡಳಿಯವರು ಶಾಕ್ ಆಗಿದ್ದಾರೆ. ​”ನನ್ನ ಹುಡುಗ ನನ್ನಿಂದ ದೂರ ಆಗಲಿ!, ತಾಯಿ ಮನೆ ಆಸ್ತಿ ನನಗೆ ಬರಲಿ!, ಮಗನ ನಿಶ್ಚಿತಾರ್ಥ ಆಗಿದೆ ಮುರಿದು ಹೋಗದೇ ಇರೋಥರ ಮಾಡಮ್ಮ! ಎಂದು ಬಸ್​ ಟಿಕೆಟ್​ಗಳಲ್ಲಿ ಬರೆದು ಹಾಕಿದ್ದಾರೆ.

ಪ್ರೀತಿಸಿದ ಹುಡುಗ ಬೇಡ, IAS ಅಧಿಕಾರಿ ಜೊತೆ ಮದುವೆ ಮಾಡಿಸು

“ಅಮ್ಮ ನಾನು ತಪ್ಪು ಮಾಡಿದ್ದೇನೆ ಕ್ಷಮಿಸಿ, ಹಿಂದೆ ಪತ್ರ ಬರೆದಾಗ ನಾನು ಗೋಪಿನಾಥ್ ಬಿಟ್ಟರೇ ಯಾರನ್ನು ಮದುವೆ ಆಗದಂತೆ ಬಯಸಿದ್ದೆ. ಈಗ ಅವನು ನನಗೆ ಬೇಡ. ಆದಷ್ಟು ಬೇಗ ಮುಂದಿನ ವರ್ಷ ನನ್ನ ಮದುವೆಯನ್ನು, ಒಳ್ಳೆಯ ಹೆಸರು, ಕೀರ್ತಿ, ಹೃದಯವಂತ, ಗುಣವಂತ, ಸಿರಿವಂತ, ಐಶ್ವರ್ಯವಂತ ಯಾವ ಹೀರೋಗೂ ಕಡಿಮೆ ಇರಬಾರದು. ಅಷ್ಟು ಚೆನ್ನಾಗಿರುವ ಒಳ್ಳೆಯ ಐಎಎಸ್ ಅಧಿಕಾರಿ ಜೊತೆ ಮಾಡಿಸು‌. ನನ್ನ ಗಂಡ ಬೇರೆ ಯಾವ ಹೆಂಗಸರನ್ನು, ಹುಡುಗಿಯರನ್ನು ಕೆಟ್ಟ ದೃಷ್ಟಿಯಿಂದ ನೋಡಬಾರದು. ನನ್ನನ್ನು ಹೆಚ್ಚಾಗಿ ಪ್ರೀತಿ ಮಾಡಬೇಕು‌. ನಾನೆಂದರೇ ಅವರಿಗೆ ಜೀವ ಆಗಿರಬೇಕು. ನನಗೆ ಮಕ್ಕಳು, ಮೊಮ್ಮಕ್ಕಳ ಜೊತೆ ಜೀವನ ಮಾಡಬೇಕು, ಇಷ್ಟು ವರ್ಷ ಕಾದಿದ್ದಕ್ಕೆ ಒಳ್ಳೆ ಹುಡುಗ ಸಿಕ್ಕಾ ಅಂತ ಆಡಿಕೊಳ್ಳುವರ ಬಾಯಿ ಮುಚ್ಚಿಸಬೇಕು ಅಂತ ಹುಡುಗನ ಜೊತೆ ಮದುವೆ ಮಾಡಿಸು” ಎಂದು ಯುವತಿ ಪತ್ರ ಬರೆದಿದ್ದಾಳೆ.

ಇದನ್ನೂ ಓದಿ: ಝಿಯು ಹೋಮ್ಸ್ ಮಾಲೀಕನಿಂದ ನೂರಾರು ಮನೆ ಮಾಲೀಕರು, ಬಾಡಿಗೆದಾರರಿಗೆ ವಂಚನೆ ಆರೋಪ

ತಾಯಿ ಆಸ್ತಿ ನನಗೆ ಸಿಗಲಿ

“ನನ್ನ ತಾಯಿ ಮನೆಯಿಂದ ನನಗೆ ಬರಬೇಕಾಗಿರುವ ಆಸ್ತಿ ನನಗೆ ಯಾವುದೇ ಅಡ್ಡಿಯಾಗದೆ ಬರುವಥರ ಮಾಡು. ಯಾವುದೇ ಅಡ್ಡಿ ಇಲ್ಲದೇ ನನಗೆ ಸಿಗೋಥರ ಮಾಡು ತಾಯಿ”.

ದಂಪತಿ ದೂರ ಆಗುವಂತೆ ಮಾಡು

“ಅಮ್ಮ ತಾಯಿ ರಮ್ಯ ಮತ್ತು ಉಮೇಶ್ ಇಬ್ಬರು ದೂರು ಆಗುವಂತೆ ಮಾಡು. ಇವರಿಂದ ಒಂದು ಸಂಸಾರ ದೂರ ಆಗುತ್ತದೆ. ಅವರ ತಪ್ಪಿಗೆ ಶಿಕ್ಷೆ ಕೊಡು ತಾಯಿ” ಎಂದು ಪತ್ರ ಬರೆದಿದ್ದಾರೆ.

ಮಗನ ಮದುವೆ ನಡೆದು, ಜೀವನ ಚೆನ್ನಾಗಿ ಇರಲಿ

“ಅಮ್ಮ ತಾಯಿ ನಿನ್ನಲ್ಲಿ ನನ್ನದು ಒಂದು ಕೋರಿಕೆ, ನನ್ನ ಮಗ ಶಶಾಂಕ್​ನ ನಿಶ್ಚಿತಾರ್ಥ ಆಗಿದೆ. ನನ್ನ ಮಗನನ್ನು ಮದುವೆ ಆಗುತ್ತಿರುವ ಹುಡುಗಿ ರಮ್ಯ ನನ್ನ ಮಗನ ಜೊತೆ ಚೆನ್ನಾಗಿದೆ ಇರುವಂತೆ ಮಾಡು. ನನ್ನ ಜೊತೆ, ನಮ್ಮ ಮನೆಯವರ ಜೊತೆ ಸಂತೋಷದಿಂದ ಇರುವಂತೆ ಮಾಡು ಯಾವುದೇ ಬೇಜಾರು ಇಲ್ಲದೆ ಸಂಸಾರ ನಡೆಸಿಕೊಂಡು ಹೋಗುವಂತೆ ಮಾಡು ತಾಯಿ”

ಈ ರೀತಿ ಪತ್ರಗಳನ್ನು ಹಾಕಿರುವುದು ಇದೇ ಮೊದಲಲ್ಲ, ಈ ಹಿಂದೆಯೂ ರಾಜ್ಯದ ಪ್ರಸಿದ್ಧ ದೇವಸ್ಥಾನಗಳಲ್ಲಿ, ಈ ರೀತಿಯಾದ ಪತ್ರಗಳು ಸಿಕ್ಕ ಉದಾಹರಣೆಗಳಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:24 am, Fri, 24 May 24

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?