ಬೆಂಗಳೂರು ಆಸ್ಪತ್ರೆಗಳಲ್ಲಿ ಹೆಪಟೈಟಿಸ್ ಬಿ ಲಸಿಕೆಯ ಕೊರತೆ, ಲಸಿಕೆಗಾಗಿ ಸರ್ಕಾರಕ್ಕೆ ವೈದ್ಯರ ಮನವಿ

| Updated By: ವಿವೇಕ ಬಿರಾದಾರ

Updated on: Jul 05, 2024 | 8:10 AM

ಹೆಪಟೈಟಿಸ್ ಬಿ ಯಕೃತ್ತಿನ (Liver) ಒಂದು ಸಾಂಕ್ರಾಮಿಕ ರೋಗ. ಹೆಪಟೈಟಿಸ್ ಬಿ ಎಂಬ ವೈರಸ್ಸಿನಿಂದ (ಎಚ್.ಬಿ.ವಿ.) ರೋಗ ಬರುತ್ತದೆ. ಬೆಂಗಳೂರಿನಲ್ಲಿ ಹೆಪಟೈಟಿಸ್ ಬಿ ಲಸಿಕೆ ಕೊರೆತೆ ಇದೆ. ವೈದ್ಯರು ಲಸಿಕೆಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.

ಬೆಂಗಳೂರು ಆಸ್ಪತ್ರೆಗಳಲ್ಲಿ ಹೆಪಟೈಟಿಸ್ ಬಿ ಲಸಿಕೆಯ ಕೊರತೆ, ಲಸಿಕೆಗಾಗಿ ಸರ್ಕಾರಕ್ಕೆ ವೈದ್ಯರ ಮನವಿ
ಹೆಪಟೈಟಿಸ್ ಬಿ ಲಸಿಕೆ
Follow us on

ಬೆಂಗಳೂರು, ಜುಲೈ 05: ರಾಜಾಧಾನಿ‌ ಬೆಂಗಳೂರಿನಲ್ಲಿ (Bengaluru) ಹೆಪಟೈಟಿಸ್ ಬಿ ಲಸಿಕೆ (Hepatitis B Vaccine) ಕೊರತೆ ಎದುರಾಗಿದ್ದು, ನಗರದ ಲಸಿಕೆ ಸಿಗುತ್ತಿಲ್ಲ. ಸದ್ಯ ಆಸ್ಪತ್ರೆಗಳಲ್ಲಿ ಶೇ50 ರಷ್ಟು ಲಸಿಕೆಗೆ ಬೇಡಿಕೆ ಇದ್ದು, ಪೂರೈಕೆ ಮಾತ್ರ ಆಗುತ್ತಿಲ್ಲ. ಹೀಗಾಗಿ ಆದಾಷ್ಟು ಬೇಗ ಹೆಪಟೈಟಿಸ್ ಬಿ ಲಸಿಕೆ ನೀಡುವಂತೆ ವೈದ್ಯರು ಆರೋಗ್ಯ ಇಲಾಖೆಗೆ ಮನವಿ ಮಾಡಿದ್ದಾರೆ.

ಕಳೆದ ಒಂದು ತಿಂಗಳಿನಿಂದ ನಗರದ ಆಸ್ಪತ್ರೆಗಳಲ್ಲಿ ಹೆಪಟೈಟಿಸ್ ಬಿ ಲಸಿಕೆಯ ಕೊರತೆ ಎದುರಾಗಿದೆ. ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೂ ಲಸಿಕೆಯನ್ನ ನೀಡಿಲ್ಲ. ಜೊತೆಗೆ ಮಗವಿಗೆ ಹೆಪಟೈಟಿಸ್ ಬಿ ಲಸಿಕೆಯನ್ನು ಕಡ್ಡಾಯವಾಗಿ ನೀಡಬೇಕಾಗಿದ್ದು, ಹೊರ ರಾಜ್ಯಗಳಿಂದ ಆಮದು ಮಾಡಿಕೊಳ್ಳವ ಅನಿವಾರ್ಯತೆ ಶೃಷ್ಠಿಯಾಗಿದೆ. ಮಗುವಿಗೆ ಬೂಸ್ಟರ್ ಡೋಸ್ ಸೇರಿದಂತೆ ಮೂರು ಡೋಸ್ ಲಸಿಕೆ ನೀಡಲಾಗುತ್ತದೆ. ಆದರೆ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಹೆಪಟೈಟಿಸ್ ಬಿ ವ್ಯಾಕ್ಸಿನ್ ಸಿಗುತ್ತಿಲ್ಲ. ಇದರಿಂದಾಗಿ ಸಾಕಷ್ಟು ಸಮಸ್ಯೆಯಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಹೆಚ್ಚಿದ ಡೆಂಗ್ಯೂ ಪ್ರಕರಣಗಳು: ಮೈಸೂರು, ಉತ್ತರ ಕನ್ನಡದಲ್ಲಿ ಸೋಂಕಿಗೆ ಮೊದಲ ಬಲಿ

ಹೆಪಟೈಟಿಸ್ ಬಿ ಸೋಂಕು ಹೆಚ್​1ಎನ್1 ನಷ್ಟೇ ಪರಿಣಾಮಕಾರಿಯಾಗಿದ್ದು, ಲಸಿಕೆ ಕಡ್ಡಾಯವಾಗಿ ನೀಡಬೇಕು. ಜೊತೆಗೆ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ವೈದ್ಯರು ಮೂರು ಡೋಸ್​ಗಳನ್ನ ಅಗತ್ಯವಾಗಿ ತೆಗೆದುಕೊಳ್ಳಬೇಕು. ಲಸಿಕೆ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳು ಸರಿಯಾಗಿ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಲಸಿಕೆ ಉತ್ತಾಪದನೆಯಾಗುವುದು ಕಡಿಮೆಯಾಗಿದೆ. ಹೀಗಾಗಿ ಆಸ್ಪತ್ರೆಗಳಿಗೆ ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಜನವರಿಯಿಂದಲೂ ಹೆಪಟೈಟಿಸ್ ಬಿ ಲಸಿಕೆಗೆ ಬೇಡಿಕೆ ಇದ್ದು, ಮೊದಲು ಲಸಿಕೆ ಪೂರೈಸಿ ಅಂತ ವೈದ್ಯರು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.

ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡ್ ರಾವ್ ಮಾತನಾಡಿ, ನನಿಗೆ ಈಗಷ್ಟೇ ಮಾಹಿತಿ ಸಿಕ್ಕಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಸಮಸ್ಯೆಯಾಗುತ್ತಿದೆ. ಲಸಿಕೆ ಸಪ್ಲೈನಲ್ಲಿ ಸಮಸ್ಯೆಯಾಗುತ್ತಿದೆ ಸರಿಪಡಿಸುತ್ತೇನೆ ಎಂದು ಹೇಳಿದರು.

ಒಟ್ಟಿನಲ್ಲಿ, ಹೆಪಟೈಟಿಸ್ ಸೋಂಕು ಭಾರಿ ಪರಿಣಾಮಕಾರಿಯಾಗಿದ್ದು, ಲಸಿಕೆ ಕೊರತೆಯಿಂದ ಜನರಿಗೆ ಸಮಸ್ಯೆಯಾಗದಂತೆ ಸರ್ಕಾರ ನಿಗಾ ವಹಿಸಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ