ಬೆಂಗಳೂರು, ಆಗಸ್ಟ್.10: ಡಿಜಿಟಲ್ ಇಂಡಿಯಾ, ಡಿಜಿಟಲ್ ಇಂಡಿಯಾ (Digital India) ಎಂದು ಈಗ ಎಲ್ಲಿ ನೋಡಿದರೂ ಜನ ಫೋನ್ ಪೇ, ಗೂಗಲ್ ಪೇ ಎಂದು ಓಡಾಡ್ತಿದ್ದಾರೆ. ಪರ್ಸ್ನಲ್ಲಿ 10 ರೂಪಾಯಿ ಕೂಡ ಇಟ್ಟುಕೊಳ್ಳುತ್ತಿಲ್ಲ. ಮಕ್ಕಳು ಕೂಡ 5ರೂಪಾಯಿ ಪೆನ್ ಖರೀದಿಸಿದರೂ ಆನ್ ಲೈನ್ ಮೂಲಕ ಹಣ ಪಾವತಿಸುತ್ತಿದ್ದರೆ. ಈ ಮಟ್ಟಿಗೆ ಈಗ ಭಾರತ ಅಭಿವೃದ್ಧಿಯಾಗ್ತಿದೆ. ಆದರೆ ಕೆಲ ಖದೀಮರು ನಮಗೆ ಮೆಡಿಕಲ್ ಎಮರ್ಜೆನ್ಸಿ ಇದೆ ಎಂದು ನಾಟಕವಾಡಿ ಅಕೌಂಟ್ಗೆ ಹಣ ಹಾಕ್ತೀವಿ ಕ್ಯಾಶ್ ಕೊಡಿ ಅಂತ ಕೇಳಿ ಮೋಸ (Cheating) ಮಾಡುತ್ತಿದ್ದಾರೆ. ಇತ್ತೀಜೆಗೆ ಇಂತಹ ಘಟನೆಗಳು ಹೆಚ್ಚಾಗಿವೆ.
ಅಂಗಡಿಗಳನ್ನು ಇಟ್ಟಿಕೊಂಡು ವ್ಯಾಪಾರ ಮಾಡುತ್ತಿರುವವರನ್ನೇ ಟಾರ್ಗೆಟ್ ಮಾಡಿ ಫೋನ್ ಪೇ, ಜೀ ಪೇ ಮಾಡ್ತೀವಿ ಕ್ಯಾಶ್ ಇದ್ರೆ ಕೊಡಿ ಎಂದು ಮೋಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದೇ ರೀತಿ ಅಂದ್ರಹಳ್ಳಿಯ ಸೈಬರ್ ಸೆಂಟರ್ ಮಾಲೀಕನಿಗೆ ಯುವಕನೋರ್ವ ಪಂಗನಾಮ ಹಾಕಿದ್ದಾನೆ. ಸ್ವಲ್ಪ ಮೆಡಿಕಲ್ ಎಮರ್ಜೆನ್ಸಿ ಇದೆ 10,000 ನಿಮ್ಮ ಅಕೌಂಟ್ಗೆ ಹಾಕ್ತೇನೆ, ಇಲ್ಲ ಅಂದರೆ 5,000 ಆದ್ರೂ ಕೊಡಿ ಮೆಡಿಕಲ್ ಎಮರ್ಜೆನ್ಸಿ ಅಂತ ಬಣ್ಣದ ಮಾತುಗಳನ್ನು ಆಡಿದ ಯುವಕ ಸ್ಕ್ಯಾನರ್ ಅನ್ನು ಸ್ಕ್ಯಾನ್ ಮಾಡಿ ಬಳಿಕ ನೆಟ್ ಆಫ್ ಮಾಡಿದ್ದಾನೆ. ನಂತರ ಸ್ಕ್ಯಾನರ್ ವರ್ಕ್ ಆಗ್ತಿಲ್ಲ, ಮೊಬೈಲ್ ನಂಬರ್ಗೆ ಹಾಕ್ತೀನಿ ಎಂಬ ನಾಟಕವಾಡಿದ್ದಾನೆ. ಫೇಕ್ ಆ್ಯಪ್ ಮುಖಾಂತರ ಪೇಮೆಂಟ್ ಸಕ್ಸಸ್ ಎನ್ನುವ ಸ್ಕ್ರೀನ್ ಶಾಟ್ ತೋರಿಸಿ ಮೋಸ ಮಾಡಿದ್ದಾನೆ.
ಇದನ್ನೂ ಓದಿ: ಲವ್,ಸೆಕ್ಸ್,ದೋಖಾ: ಗಂಡ ಬಿಟ್ಟಿದ್ದ ಮಹಿಳೆಗೆ ಬಾಳು ಕೊಡ್ತೀನಿ ಎಂದು ಕಾರು ಚಾಲಕನಿಂದ ಮೋಸ
ಹಣ ಪಡೆದು ಕ್ಷಣ ಮಾತ್ರದಲ್ಲಿ ಪರಾರಿಯಾಗಿದ್ದಾನೆ. ಮಾಲೀಕ ಮೊಬೈಲ್ ಚೆಕ್ ಮಾಡಿದಾಗ ಖಾತೆಗೆ ಹಣನೇ ಬಂದಿಲ್ಲ. ವಂಚನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಮಾಲೀಕ ಈ ವಿಡಿಯೋವನ್ನು ತನ್ನ ಎಕ್ಸ್ ಖಾತೆಯಲ್ಲಿ ಅಪ್ಲೋಡ್ ಮಾಡಿ ಅಳಲು ತೋಡಿಕೊಂಡಿದ್ದಾರೆ. ಯಾರೂ ಈ ರೀತಿ ಮೋಸ ಹೋಗಬೇಡಿ, ಈ ರೀತಿ ಬಂದರೆ ಪೊಲೀಸರಿಗೆ ತಿಳಿಸಿ ಅಂತ ಮನವಿ ಮಾಡಿದ್ದಾರೆ. ಅಂದ್ರಹಳ್ಳಿ, ತಿಗಳರಪಾಳ್ಯ, ಡಿ ಗ್ರೂಪ್ ಸುತ್ತಮುತ್ತ ಅಂಗಡಿಗಳಿಗೆ ಯುವಕ ಮೋಸ ಮಾಡಿದ್ದಾನೆ ಎಂದು ಪೋಸ್ಟ್ನಲ್ಲಿ ಬರೆದುಕೊಳ್ಳಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ