AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲವ್,ಸೆಕ್ಸ್,ದೋಖಾ: ಗಂಡ ಬಿಟ್ಟಿದ್ದ ಮಹಿಳೆಗೆ ಬಾಳು ಕೊಡ್ತೀನಿ ಎಂದು ಕಾರು ಚಾಲಕನಿಂದ ಮೋಸ

ಗಂಡನ ಕಿರುಕುಳಕ್ಕೆ ಬೇಸತ್ತು ಗಂಡನನ್ನು ಬಿಟ್ಟು ಮಹಿಳೆ ಬೆಂಗಳೂರಿನಲ್ಲಿ ಇಬ್ಬರು ಮಕ್ಕಳ ಜೊತೆ ಜೀವನ ಕಟ್ಟಿಕೊಂಡಿದ್ದಳು. ಬೇಜಾರು ಕಳಿಯಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಹಾಕುತ್ತಿದ್ದಳು, ಆ ರೀಲ್ಸ್​ಗಳಿಗೆ ಕಮೆಂಟ್ ಮಾಡುತ್ತ ಪರಿಚಯವಾದ ಕ್ಯಾಬ್ ಚಾಲಕ ಜೀವನ ಕೊಡ್ತೀನಿ ಎಂದು ಮೋಸ ಮಾಡಿದ್ದಾನೆ.

ಲವ್,ಸೆಕ್ಸ್,ದೋಖಾ: ಗಂಡ ಬಿಟ್ಟಿದ್ದ ಮಹಿಳೆಗೆ ಬಾಳು ಕೊಡ್ತೀನಿ ಎಂದು ಕಾರು ಚಾಲಕನಿಂದ ಮೋಸ
ಕಂಗೇರಿ ಪೊಲೀಸ್ ಠಾಣೆ
ರಾಚಪ್ಪಾಜಿ ನಾಯ್ಕ್
| Updated By: ಆಯೇಷಾ ಬಾನು|

Updated on: Aug 10, 2024 | 8:14 AM

Share

ಬೆಂಗಳೂರು, ಆಗಸ್ಟ್​.10: ಗಂಡನನ್ನು ಬಿಟ್ಟು ಬಾಳು ಕಟ್ಟಿಕೊಂಡಿದ್ದ ಮಹಿಳೆಗೆ ಕಾರು ಚಾಲಕನೋರ್ವ ಬಾಳು ಕೊಡ್ತೀನಿ ಎಂದು ನಂಬಿಸಿ ಮೋಸ (Cheating) ಮಾಡಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆಸಿದೆ. ಕ್ಯಾಬ್ ಚಾಲಕ ಪ್ರಜ್ವಲ್ ಎಂಬಾತ ವಿವಾಹಿತ ಮಹಿಳೆಗೆ ಬಾಳು ಕೊಡ್ತೀನಿ ಎಂದು ನಂಬಿಸಿ ಆಕೆಯ ಜೊತೆ ಕೆಲ ದಿನಗಳ ಕಾಲ ಒಟ್ಟಿಗೆ ಜೀವನ ನಡೆಸಿ ಆಕೆಯನ್ನು ಬಳಸಿಕೊಂಡು ಇದೀಗ ಬೋರಾದ್ಳು ಎಂದು ಬಿಟ್ಟು ಹೋಗಿದ್ದಾನೆ. ಘಟನೆ ಸಂಬಂಧ ಮಹಿಳೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ನ್ಯಾಯಕ್ಕಾಗಿ ಅಂಗಲಾಚಿದ್ದಾಳೆ.

ರೀಲ್ಸ್, ಕಮೆಂಟ್ ಮೂಲಕ ಪರಿಚಯ

ನೊಂದ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಹಾಕುತ್ತಿದ್ದಳು. ಇದನ್ನು ಕಂಡ ಕ್ಯಾಬ್ ಚಾಲಕ ಪ್ರಜ್ವಲ್ ಆ ರೀಲ್ಸ್​ಗಳಿಗೆ ಲೈಕ್, ಕಮೆಂಟ್ ಮಾಡುತ್ತಿದ್ದ. ಮಹಿಳೆ ಕೂಡ ಆ ಕಮೆಂಟ್​ಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದಳು. ಹೀಗೆ ಇವರಿಬ್ಬರ ನಡುವೆ ಪರಿಚಯ ಬೆಳೆದು ಇಬ್ಬರೂ ಹತ್ತಿರವಾದರು. ಮೆಸೇಜ್ ಮಾಡ್ತಾ, ಮಾಡ್ತಾ ಪ್ರಜ್ವಲ್ ಮನೆವರೆಗೂ ಬಂದಿದ್ದ. ನಿನ್ನನ್ನೇ ಮದುವೆ ಆಗ್ತೀನೆಂದು ಒಟ್ಟಿಗೆ ವಾಸವಾಗಿದ್ದ. ಆದರೆ ಈಗ ಬೋರಾದ್ಳು ಅಂತಾ ಮೋಸ ಮಾಡಿ ಬಿಟ್ಟು ಹೋಗಿದ್ದಾನೆ. ಹೀಗಾಗಿ ಅವನೇ ಬೇಕು ಎಂದು ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಗಂಡ ಕುಡಿದು ಬಂದು ಕಿರುಕುಳ ನೀಡ್ತಿದ್ದ ಎಂದು ಗಂಡ ಬಿಟ್ಟಿದ್ದ ಮಹಿಳೆ

ಇನ್ನು 13 ವರ್ಷದ ಹಿಂದೆ ವ್ಯಕ್ತಿಯೊಬ್ಬನನ್ನ ವಿವಾಹವಾಗಿದ್ದ ಮಹಿಳೆ. ಈ ದಂಪತಿಗೆ ಇಬ್ಬರು ಮಕ್ಕಳು ಕೂಡ ಆಗಿದ್ರು. ಗಂಡ ಕುಡಿದು ಬಂದು ಪ್ರತಿದಿನ ಕಿರುಕುಳ ಕೊಡ್ತಿದ್ದಾನೆಂದು ಬಿಟ್ಟು ತವರು ಮನೆಗೆ ಬಂದಿದ್ದಳು. ಬಳಿಕ ಇತ್ತೀಚೆಗೆ ಒಂದು ವರ್ಷದಿಂದ ಪ್ರತ್ಯೇಕವಾಗಿ ಬೆಂಗಳೂರಲ್ಲಿ ವಾಸ ಮಾಡ್ತಿದ್ಳು. ಸ್ನೇಹಿತರ ಜೊತೆಗೆ ರೂಮ್‌ ನಲ್ಲಿ ವಾಸ್ತವ್ಯ ಹೂಡಿದ್ಳು. ಬೇಜಾರು ಕಳಿಯಲಿ ಅಂತಾ ಆಗಾಗ ರೀಲ್ಸ್ ಮಾಡ್ತಿದ್ಳು.

ಇದನ್ನೂ ಓದಿ: ಜನ ವಸತಿ ಪ್ರದೇಶದಲ್ಲೇ ವಿಮಾನ ಪತನ ಒಟ್ಟು 62 ಜನರ ಸಾವು

ಆಕೆಯ ರೀಲ್ಸ್ ಗೆ ‘ಬ್ಯೂಟಿಫುಲ್’ ಎಂದು ಪ್ರಜ್ವಲ್ ಕಮೆಂಟ್ ಹಾಕಿದ್ದ. ಅದೇ ಕಮೆಂಟ್, ಮೆಸೇಜ್ ವರೆಗೂ ಬಂದಿತ್ತು. ನಂತರ ಫೋನ್ ನಂಬರ್ ಎಕ್ಸ್ ಚೇಂಜ್ ಆಗಿ ಚಾಟಿಂಗ್ ಶುರು ಮಾಡಿದ್ರು. ಇಬ್ಬರು ಪರಸ್ಪರ ವೈಯಕ್ತಿಕ ವಿಚಾರ ಶೇರ್ ಮಾಡಿಕೊಳ್ತಿದ್ರು. ತನ್ನ ಜೀವನದ ಕಥೆಯನ್ನೆಲ್ಲ ಮಹಿಳೆ ಹೇಳಿಕೊಂಡಿದ್ದಳು. ನನಗೆ 13 ಹಾಗೂ 10 ವರ್ಷದ ಮಕ್ಕಳಿದ್ದಾರೆ ಎಂದು ಮಹಿಳೆ ಹೇಳಿಕೊಂಡಿದ್ದಳು. ಹೀಗಿದ್ದರೂ ಮದುವೆ ಆಗೋದಾಗಿ ಪ್ರಜ್ವಲ್ ನಂಬಿಕೆಯ ಮಾತುಗಳನ್ನಾಡಿದ್ದ. ಹೊಸ ಜೀವನ ಕಟ್ಟಿಕೊಳ್ಳೋಣ ಎಂದು ಹೇಳಿದ್ದ. ಅಷ್ಟರಲ್ಲಾಗಲೇ ಮಹಿಳೆ ಉಳಿದುಕೊಂಡಿದ್ದ ಮನೆಯಲ್ಲಿ ಸ್ನೇಹಿತರು ಮನೆ ಖಾಲಿ ಮಾಡಿದ್ರು.

ಕೆಂಗೇರಿ ಸಮೀಪದ ಮನೆಯಲ್ಲಿ ಮಹಿಳೆ ವಾಸವಿದ್ದಳು. ಅದೇ ಮನೆಯಲ್ಲಿ ಪ್ರಜ್ವಲ್ ಕೂಡ ಉಳಿದುಕೊಂಡಿದ್ದ. ಮಗನ್ನ ಹಾಸ್ಟೆಲ್ ನಲ್ಲಿ ಸೇರಿಸಿದ್ರೆ ಮಗಳನ್ನು ತನ್ನ ತಾಯಿ ಮನೆಯಲ್ಲಿ ಬಿಟ್ಟು ಇವರಿಬ್ಬರು ಒಟ್ಟಿಗೆ ಇದ್ದರು. ಕಳೆದ ಕೆಲ ದಿನಗಳಿಂದ ಮನೆಗೆ ಬರದೇ ಪ್ರಜ್ವಲ್ ಕಥೆ ಕಟ್ತಿದ್ದ. ವಿಚಾರಿಸಿದಾಗ ಮದುವೆ ಆಗಲ್ಲ ಎಂದು ಹೇಳಿದ್ದ. ಇದರಿಂದ ನೊಂದ ಮಹಿಳೆ ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿ ನ್ಯಾಯಕ್ಕಾಗಿ ಅಂಗಲಾಚಿದ್ದಾಳೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ