ಡೆಂಗ್ಯೂ ಕಂಟ್ರೋಲ್​ಗೆ ಮುಂಬೈ ಮಾದರಿ ಫಾಲೋ ಮಾಡಲು ಮುಂದಾದ ಬಿಬಿಎಂಪಿ; ಇಕೋ ಬಯೋ ಟ್ರ್ಯಾಪ್‌ ಬಳಕೆಗೆ ಪ್ಲಾನ್

ಮನೆ ಮನೆ ಸರ್ವೇ ಮಾಡಿದ್ದಾಯ್ತು, ಸೊಳ್ಳೆ ನಿಯಂತ್ರಣಕ್ಕೆ ಔಷಧ ಸಿಂಪಡಣೆಯೂ ಆಯ್ತು. ಏನೆಲ್ಲ ಕಸರತ್ತು ಮಾಡಿದ್ರು ಸಿಲಿಕಾನ್ ಸಿಟಿಯಲ್ಲಿ ಡೆಂಗ್ಯೂ ಸಂಖ್ಯೆ ಏರುತ್ತಲೇ ಇದೆ. ಸದ್ಯ ಡೆಂಗ್ಯೂ ಕಂಟ್ರೋಲ್​ಗೆ ಕಸರತ್ತು ನಡೆಸಿ ಸುಸ್ತಾದ ಪಾಲಿಕೆ, ಇದೀಗ ಮುಂಬೈ ಮಾದರಿ ಪಾಲಿಸೋಕೆ ಸಜ್ಜಾಗಿದೆ.

ಡೆಂಗ್ಯೂ ಕಂಟ್ರೋಲ್​ಗೆ ಮುಂಬೈ ಮಾದರಿ ಫಾಲೋ ಮಾಡಲು ಮುಂದಾದ ಬಿಬಿಎಂಪಿ; ಇಕೋ ಬಯೋ ಟ್ರ್ಯಾಪ್‌ ಬಳಕೆಗೆ ಪ್ಲಾನ್
ಸಾಂದರ್ಭಿಕ ಚಿತ್ರ
Follow us
ಶಾಂತಮೂರ್ತಿ
| Updated By: ಆಯೇಷಾ ಬಾನು

Updated on: Aug 10, 2024 | 11:08 AM

ಬೆಂಗಳೂರು, ಆಗಸ್ಟ್​.10: ರಾಜಧಾನಿಯಲ್ಲಿ ಸಾವಿರದ ಗಡಿದಾಟಿ ಡೆಂಗ್ಯೂ (Dengue) ಪ್ರಕರಣ ಮುನ್ನುಗುತ್ತಿದೆ. ಅತ್ತ ಡೆಂಗ್ಯೂ ಕಂಟ್ರೋಲ್​ಗೆ ಹಲವು ಸರ್ಕಸ್ ಮಾಡಿ ಸುಸ್ತಾದ ಪಾಲಿಕೆ(BBMP), ಇದೀಗ ಕೇಂದ್ರ ಆರೋಗ್ಯ ಸಚಿವಾಲಯದ ಸೂಚನೆಯಂತೆ ಮುಂಬೈ ಮಾದರಿಯಲ್ಲಿ ಸೊಳ್ಳೆಗಳ ಕಂಟ್ರೋಲ್ ಗೆ ಪ್ಲಾನ್ ಮಾಡಿದೆ. ಇಕೋ ಬಯೋ ಟ್ರ್ಯಾಪ್‌ ಸಾಧನ ಅಳವಡಿಕೆಗೆ ಸಜ್ಜಾಗಿದೆ. ಮುಂಬೈನ ಧಾರವಿ ಸ್ಲಂನಲ್ಲಿ ಅಳವಡಿಸಿರೋ ಈ ಟೆಕ್ನಾಲಜಿ ಬಳಕೆಗೆ ಪ್ಲಾನ್ ಮಾಡಿರೊ ಪಾಲಿಕೆ ಆ ಮೂಲಕ ಡೆಂಗ್ಯೂ ಕಂಟ್ರೊಲ್ ಗೆ ಪ್ಲಾನ್ ಮಾಡಿದೆ.

ಇನ್ನು ಹೂವಿನ ಕುಂಡದ ಮಾದರಿಯಲ್ಲಿರೋ ಈ ಸಾಧನದಲ್ಲಿ ರಾಸಾಯನಿಕ ಮಿಶ್ರಣ ಹಾಕೋ ಮೂಲಕ ಸೊಳ್ಳೆಗಳನ್ನ ಟ್ರ್ಯಾಪ್ ಮಾಡೋ ಪ್ಲಾನ್ ಮಾಡಿರೋ ಪಾಲಿಕೆ, ಡೆಂಗ್ಯೂ ಹಾಟ್ ಸ್ಪಾಟ್ ಏರಿಯಾಗಳಲ್ಲಿ ಪ್ರತಿ 400 ಚದರ ಅಡಿಗೆ ಒಂದು ಬಯೋ ಟ್ರ್ಯಾಪ್‌ ಅಳವಡಿಸಿ ಸೊಳ್ಳೆಗಳ ಕಂಟ್ರೋಲ್ ಗೆ ಪ್ಲಾನ್ ಮಾಡಿದೆ. ಸದ್ಯ ಈ ಸಾಧನಕ್ಕೆ ತಲಾ 400 ರೂಪಾಯಿ ವೆಚ್ಚ ಬೀಳಲಿದ್ದು, ಆಡುಗೋಡಿ ಸುತ್ತಮುತ್ತ ಪ್ರಯೋಗ ನಡೆಸೋಕೆ ಪಾಲಿಕೆ ಪ್ಲಾನ್ ಮಾಡಿದೆ.

ಇದನ್ನೂ ಓದಿ: ಚಿಕನ್​​ ಕರಿ ಹೇಳಿದ ಗಂಡನ ಮೆದುಳು ಹೊರಬರುವಂತೆ ಇಟ್ಟಿಗೆಯಿಂದ ಹೊಡೆದು ಕೊಂದ ಪತ್ನಿ

ಸದ್ಯ ಮುಂಬೈನಲ್ಲಿ ಈ ತಂತ್ರದ ಮೂಲಕ ಅತಿ ದೊಡ್ಡ ಸ್ಲಂನಲ್ಲೇ ಡೆಂಗ್ಯೂ ಕಂಟ್ರೋಲ್ ಮಾಡಿದ್ದು, ಇದೀಗ ಈ ಟೆಕ್ನಾಲಜಿ ಮೂಲಕ ಸಿಲಿಕಾನ್ ಸಿಟಿಯಲ್ಲೂ ಡೆಂಗ್ಯೂ ಕಂಟ್ರೋಲ್​ಗೆ ತಯಾರಿ ನಡೆಯುತಿದೆ.

ಏನಿದು ಬಯೋ ಟ್ರ್ಯಾಪ್, ಕಾರ್ಯ ಹೇಗೆ?

  • ಇದೊಂದು ಮಡಿಕೆ ಆಕಾರದ ಸಾಧನವಾಗಿದೆ
  • ಕುಂಡದಲ್ಲಿ ನೀರು ತುಂಬಿ ರಾಸಾಯನಿಕ ಹಾಕಲಾಗುತ್ತೆ
  • ರಾಸಾಯನಿಕ ಮಿಶ್ರಣ ಸೊಳ್ಳೆಗಳನ್ನ ಆಕರ್ಷಿಸಿ ಸಾಯಿಸುತ್ತೆ
  • ಒಂದು ಬಯೋ ಟ್ರ್ಯಾಪ್ ಸಾಧನ 30 ದಿನ ಕೆಲಸ ಮಾಡಲಿದೆ
  • ಬಯೋ ಟ್ರ್ಯಾಪ್ ಬಳಕೆಯಿಂದ ಶೇ.60 ರಷ್ಟು ಸೊಳ್ಳೆಗಳ ನಿಯಂತ್ರಣ ಸಾಧ್ಯ

ಸದ್ಯ ಬೆಂಗಳೂರಲ್ಲಿ ಎರಡು ಹಾಗೂ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಡೆಂಗ್ಯೂ ಪ್ರಕರಣ ಒಂದೇ ಸ್ಥಳದಲ್ಲಿ ಪತ್ತೆಯಾದರೆ ಅದನ್ನು ಡೆಂಗ್ಯೂ ಹಾಟ್‌ ಸ್ಪಾಟ್‌ ಎಂದು ಗುರುತಿಸಲಾಗುತ್ತಿದೆ. ಈ ರೀತಿ ನಗರದಲ್ಲಿ ಬರೋಬ್ಬರಿ 25 ಡೆಂಗ್ಯೂ ಹಾಟ್‌ ಸ್ಪಾಟ್‌ಗಳನ್ನು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಗುರುತಿಸಿದ್ದಾರೆ. ಈ ಪೈಕಿ ಮಹದೇವಪುರ ವಲಯದಲ್ಲಿಯೇ ಅತಿ ಹೆಚ್ಚು 11 ಹಾಟ್‌ಸ್ಪಾಟ್‌ ಪತ್ತೆಯಾಗಿವೆ. ಇದೀಗ ಮುಂಬೈನ ಈ ಟೆಕ್ನಾಲಜಿ ಬಳಕೆಗೆ ಚಿಂತನೆ ನಡೀತಿದ್ದು, ಇದು ಎಷ್ಟರ ಮಟ್ಟಿಗೆ ವರ್ಕ್ ಔಟ್ ಆಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಕಿಕ್ ಮಾಡಿ

ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ
ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ
ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ
‘ಸಂಗೊಳ್ಳಿ ರಾಯಣ್ಣ’ ಮರು ಬಿಡುಗಡೆ, ಚಿತ್ರಮಂದಿರ ಖಾಲಿ: ಅಭಿಮಾನಿಗಳ ಆಕ್ರೋಶ
‘ಸಂಗೊಳ್ಳಿ ರಾಯಣ್ಣ’ ಮರು ಬಿಡುಗಡೆ, ಚಿತ್ರಮಂದಿರ ಖಾಲಿ: ಅಭಿಮಾನಿಗಳ ಆಕ್ರೋಶ
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್
ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ