Bengaluru Crime: ಈಶಾನ್ಯ ರಾಜ್ಯದ ಮಹಿಳೆಯರನ್ನು ತಂದು ವೇಶ್ಯಾವಾಟಿಕೆ; ಮೂವರ ಬಂಧನ

| Updated By: ganapathi bhat

Updated on: Mar 10, 2022 | 11:55 AM

ರಫಿಕುಲ್ ಮತ್ತು ರುಬೇಲ್ ಮಂಡಲ್ ಮಧುಗೆ ಮಹಿಳೆಯರನ್ನು ಪೂರೈಸುತ್ತಿದ್ದ ಎಂದು ಮಾಹಿತಿ ಲಭ್ಯವಾಗಿದೆ. ಈಶಾನ್ಯ ರಾಜ್ಯದ ಬಡ ಮಹಿಳೆಯರನ್ನು ಕರೆತಂದು ವೇಶ್ಯಾವಾಟಿಕೆ ದಂಧೆಗೆ ದೂಡಲಾಗುತ್ತಿತ್ತು. ಇದೀಗ ವಿದ್ಯಾರಣ್ಯಪುರ ಪೊಲೀಸರಿಂದ ಆರೋಪಿಗಳ ಬಂಧನ ಮಾಡಲಾಗಿದ್ದು, ತನಿಖೆ ಮುಂದುವರಿದಿದೆ.

Bengaluru Crime: ಈಶಾನ್ಯ ರಾಜ್ಯದ ಮಹಿಳೆಯರನ್ನು ತಂದು ವೇಶ್ಯಾವಾಟಿಕೆ; ಮೂವರ ಬಂಧನ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ನಗರದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ವಿದ್ಯಾರಣ್ಯಪುರ ಠಾಣೆ ಪೊಲೀಸರಿಂದ ಮೂವರು ಅರೆಸ್ಟ್ ಆಗಿದ್ದಾರೆ. ಸಿ.ಆರ್. ಮಧು (43), ಅಸ್ಸಾಂ ಮೂಲದ ರಫಿಕುಲ್ ಇಸ್ಲಾಂ (21), ಪಶ್ಚಿಮ ಬಂಗಾಳದ ರುಬೇಲ್ ಮಂಡಲ್ (28) ಬಂಧಿತರು. ವಿದ್ಯಾರಣ್ಯಪುರದ ಜಯಕೃಷ್ಣ ಬಡಾವಣೆಯ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸ್ತಿದ್ದ ಆರೋಪಿಗಳನ್ನು ಬಂಧಿಸಿ ಪಶ್ಚಿಮ ಬಂಗಾಳ ಮೂಲದ 35 ವರ್ಷದ ಮಹಿಳೆಯ ರಕ್ಷಣೆ ಮಾಡಲಾಗಿದೆ.

ಬೆಂಗಳೂರು ಬ್ಯಾಟರಾಯನಪುರ ನಿವಾಸಿ ಮಧು ವೇಶ್ಯಾವಾಟಿಕೆ ದಂಧೆ ನಡೆಸ್ತಿದ್ದ ಎಂದು ತಿಳಿದುಬಂದಿದೆ. ರಫಿಕುಲ್ ಮತ್ತು ರುಬೇಲ್ ಮಂಡಲ್ ಮಧುಗೆ ಮಹಿಳೆಯರನ್ನು ಪೂರೈಸುತ್ತಿದ್ದ ಎಂದು ಮಾಹಿತಿ ಲಭ್ಯವಾಗಿದೆ. ಈಶಾನ್ಯ ರಾಜ್ಯದ ಬಡ ಮಹಿಳೆಯರನ್ನು ಕರೆತಂದು ವೇಶ್ಯಾವಾಟಿಕೆ ದಂಧೆಗೆ ದೂಡಲಾಗುತ್ತಿತ್ತು. ಇದೀಗ ವಿದ್ಯಾರಣ್ಯಪುರ ಪೊಲೀಸರಿಂದ ಆರೋಪಿಗಳ ಬಂಧನ ಮಾಡಲಾಗಿದ್ದು, ತನಿಖೆ ಮುಂದುವರಿದಿದೆ.

ಮೈಸೂರು: ಶಿಕ್ಷಕಿ ಅನುಮಾನಾಸ್ಪದ ರೀತಿಯಲ್ಲಿ ಸಾವು

ನಗರದಲ್ಲಿ ಶಿಕ್ಷಕಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ಮಲಗಿರುವ ಸ್ಥತಿಯಲ್ಲಿ ಮೃತದೇಹ ಪತ್ತೆಯಾಗಿದೆ. ನಂಜನಗೂಡಿನ ಮಹದೇಶ್ವರ ಬಡಾವಣೆಯಲ್ಲಿ ಘಟನೆ ನಡೆದಿದೆ. ಸುಲೋಚನಾ (45) ಎಂಬವರು ಮೃತ ದುರ್ದೈವಿ. ಮಹದೇವನಗರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಿಂದಿ ಶಿಕ್ಷಕಿ ಸುಲೋಚನಾ ಪತಿ ಸುರೇಶ್ 7 ವರ್ಷದ ಹಿಂದೆ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಹೀಗಾಗಿ, ಸುಲೋಚನ ಒಂಟಿಯಾಗಿ ವಾಸಿಸುತ್ತಿದ್ದರು. ಇದೀಗ ಘಟನೆ ಬಗ್ಗೆ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಹುಬ್ಬಳ್ಳಿ: ಕಿಮ್ಸ್ ಕ್ವಾರ್ಟರ್ಸ್​ನಲ್ಲಿ ಕಳ್ಳತನ

ಹುಬ್ಬಳ್ಳಿಯ ಕಿಮ್ಸ್ ಕ್ವಾರ್ಟರ್ಸ್​ನಲ್ಲಿ ಕಳ್ಳತನವಾದ ಘಟನೆ ನಡೆದಿದೆ. ನರ್ಸ್​ಗಳ ಮನೆಗಳಿಗೆ ಖದೀಮರು ಕನ್ನ ಹಾಕಿದ್ದಾರೆ. ತಡರಾತ್ರಿ ಎರಡು ಮನೆಗಳಿಗೆ ಕನ್ನ ಹಾಕಿದ್ದಾರೆ. ಮನೆಯಲ್ಲಿರುವ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದೊಯ್ದಿದ್ದಾರೆ. ವಾರದ ಹಿಂದೆಯೂ ಇದೇ ಕ್ವಾರ್ಟರ್ಸ್​ನ ವೈದ್ಯರ ಮನೆಗೆ ಖದೀಮರು ಕನ್ನಹಾಕಿದ್ದರು. ಎರಡೂ ಮನೆಗಳ ಕಳ್ಳತನ ನಡೆದಿದ್ದು ಕಳ್ಳರ ಹಾವಳಿಗೆ ಕಿಮ್ಸ್ ಕ್ವಾರ್ಟಸ್೯ ಸಿಬ್ಬಂದಿ ಬೇಸತ್ತು ಹೋಗಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ದಾವಣಗೆರೆ: ಕಾಲೇಜು ಯುವಕರ ಗುಂಪುಗಳಿಂದ ಮಾರಾಮಾರಿ

ಕಾಲೇಜು ಯುವಕರ ಗುಂಪುಗಳಿಂದ ಮಾರಾಮಾರಿ ಮಾಡಿಕೊಂಡ ಘಟನೆ ದಾವಣಗೆರೆ MCC ‘B’ ಬ್ಲಾಕ್​ನಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಒಂದು ಗುಂಪಿನ ವಿದ್ಯಾರ್ಥಿಗಳ ಮೇಲೆ ಮತ್ತೊಂದು ಗುಂಪಿನವರು ಲೋಕಲ್ ಪುಂಡರನ್ನು ಕರೆಸಿಕೊಂಡು ಗಲಾಟೆ ನಡೆಸಿದ್ದಾರೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಂದ ಗಲಾಟೆ ಮಾಡಲಾಗಿದೆ. ನಡು ರಸ್ತೆಯಲ್ಲಿ ಓರ್ವ ವಿದ್ಯಾರ್ಥಿಗೆ ಮನಬಂದಂತೆ ಥಳಿಸಲಾಗಿದೆ. ರಸ್ತೆಯಲ್ಲಿ ಹೊಡೆದಾಡಿಕೊಂಡರೂ ಸಾರ್ವಜನಿಕರು ನೋಡುತ್ತಾ ಸುಮ್ಮನೆ ಸಾಗಿದ್ದಾರೆ. ಹಲ್ಲೆ ಸಂಬಂಧ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ. ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: Bengaluru Crime: ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಬೈಕ​ನ್ನೇ ಕದ್ದ ಕಳ್ಳ, ತಡರಾತ್ರಿ ನಡೆದ ಕೊಲೆ ಪ್ರಕರಣದ 5 ಆರೋಪಿಗಳು ಅರೆಸ್ಟ್

ಇದನ್ನೂ ಓದಿ: ಬೆಂಗಳೂರು ವಿವಿ ಅಕ್ರಮಗಳ ಅಡ್ಡೆಯಾಗುತ್ತಿದೆ; ಸಿಂಡಿಕೇಟ್ ಸದಸ್ಯರಿಂದಲೇ ರಾಜ್ಯಪಾಲರಿಗೆ ದೂರು

Published On - 8:41 am, Thu, 10 March 22