ಬಿಡುವಿನ ಸಮಯದಲ್ಲಿ ಟೈಲರಿಂಗ್ ಕಲಿಯಲು ಹೋಗುತ್ತಿದ್ದ ಅಪ್ರಾಪ್ತೆ ಪ್ರಜ್ಞೆ ತಪ್ಪಿಸಿ ನಿರಂತರ ಅತ್ಯಾಚಾರ; 6 ಆರೋಪಿಗಳ ಸೆರೆ

ಬಿಡುವಿನ ಸಮಯದಲ್ಲಿ ಟೈಲರಿಂಗ್ ಕಲಿಯಲು ಹೋಗುತ್ತಿದ್ದ ಅಪ್ರಾಪ್ತೆ ಪ್ರಜ್ಞೆ ತಪ್ಪಿಸಿ ನಿರಂತರ ಅತ್ಯಾಚಾರ; 6 ಆರೋಪಿಗಳ ಸೆರೆ
ಸಾಂದರ್ಭಿಕ ಚಿತ್ರ

ಅಪ್ರಾಪ್ತೆ ಬಿಡುವಿನ ಸಮಯದಲ್ಲಿ ರಾಜೇಶ್ವರಿ ಎಂಬುವರ ಬಳಿ ಟೈಲರಿಂಗ್ ಕಲಿಯಲು ಹೋಗುತ್ತಿದ್ದಳು. ಈ ವೇಳೆ ರಾಜೇಶ್ವರಿ ಅಪ್ರಾಪ್ತೆಯನ್ನ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಳು. ಆಗ ತನ್ನ ಮನೆಯಲ್ಲಿ ಪ್ರಜ್ಞೆ ತಪ್ಪಿಸುವ ಔಷಧಿ ಜ್ಯೂಸ್ನಲ್ಲಿ ಬೆರೆಸಿ ಅಪ್ರಾಪ್ತೆಗೆ ಕುಡಿಸಿ ಕೇಶವಮೂರ್ತಿ ಎಂಬುವ ಆರೋಪಿ ಅತ್ಯಾಚಾರ ಮಾಡಿದ್ದ.

TV9kannada Web Team

| Edited By: Ayesha Banu

Mar 10, 2022 | 2:31 PM

ಬೆಂಗಳೂರು: ಪ್ರಜ್ಞೆ ತಪ್ಪಿಸಿ ಅಪ್ರಾಪ್ತೆಯ ಮೇಲೆ ನಿರಂತರ ಅತ್ಯಾಚಾರ ಎಸಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಂತ್ರಸ್ತೆ ನೀಡಿದ ದೂರು ಆಧರಿಸಿ ಹೆಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರು 6 ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ರಾಜೇಶ್ವರಿ, ಕಲಾವತಿ, ಕೇಶವಮೂರ್ತಿ, ರಫೀಕ್, ಸತ್ಯರಾಜ್, ಶರತ್‌ ಬಂಧಿತ ಆರೋಪಿಗಳು.

ಅಪ್ರಾಪ್ತೆ ಬಿಡುವಿನ ಸಮಯದಲ್ಲಿ ರಾಜೇಶ್ವರಿ ಎಂಬುವರ ಬಳಿ ಟೈಲರಿಂಗ್ ಕಲಿಯಲು ಹೋಗುತ್ತಿದ್ದಳು. ಈ ವೇಳೆ ರಾಜೇಶ್ವರಿ ಅಪ್ರಾಪ್ತೆಯನ್ನ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಳು. ಆಗ ತನ್ನ ಮನೆಯಲ್ಲಿ ಪ್ರಜ್ಞೆ ತಪ್ಪಿಸುವ ಔಷಧಿ ಜ್ಯೂಸ್ನಲ್ಲಿ ಬೆರೆಸಿ ಅಪ್ರಾಪ್ತೆಗೆ ಕುಡಿಸಿ ಕೇಶವಮೂರ್ತಿ ಎಂಬುವ ಆರೋಪಿ ಅತ್ಯಾಚಾರ ಮಾಡಿದ್ದ. ಬಳಿಕ ಆರೋಪಿ ರಾಜೇಶ್ವರಿ, ಅಪ್ರಾಪ್ತೆಗೆ ಪ್ರಜ್ಞೆ ಬಂದ ನಂತರ ಸ್ನಾನ ಮಾಡಿಸಿ ಅಪ್ರಾಪ್ತೆಯನ್ನ ಮನೆಗೆ ಕಳಿಸಿದ್ದಳು. ಯಾರಿಗೂ ವಿಷಯ ತಿಳಿಸದಂತೆ ಬೆದರಿಕೆ ಸಹ ಹಾಕಿದ್ದಳು. ನಿನ್ನ ತಂದೆ ತಾಯಿಗೆ ನೀನು ಈ ರೀತಿ ಕೃತ್ಯದಲ್ಲಿ ತೊಡಗಿದ್ದಿಯ ಎಂದು ಹೇಳದಿರುವುದಾಗಿ ಬೆದರಿಕೆ ಹಾಕಿದ್ದಳು.

ನಂತರ ಇದೇ ರೀತಿ ನಾಲ್ವರಿಂದ ಐದು ದಿನಗಳ ಕಾಲ ಮನೆಗೆ ಕರೆಸಿ ಹೆದರಿಸಿ ಬೇರೆ ಬೇರೆ ವ್ಯಕ್ತಿಗಳಿಂದ ಅತ್ಯಾಚಾರ ನಡೆಸಿದ್ದಾಳೆ. ಬಳಿಕ ಲಾಡ್ಜ್ ಒಂದರಲ್ಲಿ ಬಾಲಕಿಯನ್ನು ಇರಿಸಿ ಅತ್ಯಾಚಾರ ಮಾಡಿದವರಿಂದ ಹಣ ಪಡೆದುಕೊಂಡಿದ್ದಾಳೆ. ಅಪ್ರಾಪ್ತ ಬಾಲಕಿಯನ್ನಿಟ್ಟುಕೊಂಡ ದಂಧೆ ನಡೆಸಿ ಹಣ ಮಾಡಿದ್ದಾಳೆ. ನಾಲ್ಕು ದಿನಗಳ ಬಳಿಕ ತೀವ್ರ ಅಸ್ವಸ್ಥಳಾದ ಅಪ್ರಾಪ್ತೆ ತನ್ನ ಪೋಷಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾಳೆ. ಸತತ ನಾಲ್ಕು ದಿನಗಳ ಕಾಲ ಬಾಲಕಿಯ ಅತ್ಯಾಚಾರ ನಡೆದಿರುವುದು ಪೋಷಕರಿಗೆ ತಿಳಿಯುತ್ತಿದ್ದಂತೆ ಹೆಚ್ಎಸ್ಆರ್ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಬಳಿಕ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ:  Transgender: ಹಾದಿಯೇ ತೋರಿದ ಹಾದಿ; ‘ಎಲ್ಲದಕ್ಕೂ ನನ್ನ ಸಲಹೆಯನ್ನೇ ಪಡೆಯುತ್ತಾರೆ ನನ್ನ ಕುಟುಂಬದವರು’

ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್ ಕಡಿಮೆಯಿರುವ ಬಾಲಿವುಡ್ ತಾರೆಯರಿವರು

Follow us on

Related Stories

Most Read Stories

Click on your DTH Provider to Add TV9 Kannada