Power Cut: ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದು ಸಂಜೆ 7ರವರೆಗೆ ಪವರ್ ಕಟ್
Bengaluru Power Cut: ಬೆಂಗಳೂರಿನ ಬಸವೇಶ್ವರನಗರ, ಮಹಾಲಕ್ಷ್ಮಿ ಲೇಔಟ್, ಭುವನೇಶ್ವರಿನಗರ, ಕಲ್ಯಾಣ ನಗರ, ಹೆಸರಘಟ್ಟ ಮುಖ್ಯರಸ್ತೆ ಮುಂತಾದ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 7ರವರೆಗೆ ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ಒಂದೆಡೆ ತುಂತುರು ಮಳೆಯಾದರೆ ಇನ್ನೊಂದೆಡೆ ಪವರ್ ಕಟ್ ಕಾಟ. ನಿನ್ನೆಯಿಂದ ಬೆಂಗಳೂರಿನ ಬಹುತೇಕ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ (Power Cut) ಉಂಟಾಗಿದೆ. ಇಂದು ಕೂಡ ಹಲವು ಏರಿಯಾಗಳಲ್ಲಿ ಕರೆಂಟ್ ಇರುವುದಿಲ್ಲ ಎಂದು ಬೆಸ್ಕಾಂ (BESCOM) ತಿಳಿಸಿದೆ. ಇಂದು (ಮಾರ್ಚ್ 10) ಬೆಂಗಳೂರಿನ ಬಸವೇಶ್ವರನಗರ, ಮಹಾಲಕ್ಷ್ಮಿ ಲೇಔಟ್, ಭುವನೇಶ್ವರಿನಗರ, ಕಲ್ಯಾಣ ನಗರ, ಹೆಸರಘಟ್ಟ ಮುಖ್ಯರಸ್ತೆ ಮುಂತಾದ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 7ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಬೆಂಗಳೂರು ದಕ್ಷಿಣ ವಲಯ: ಇಂದು ಬೆಳಗ್ಗೆ 10.30ರಿಂದ ಸಂಜೆ 6.30ರವರೆಗೆ ಬಸವೇಶ್ವರನಗರ, ಸುರಭಿ ನಗರ, ಕೊತ್ತನೂರು ಮುಖ್ಯರಸ್ತೆ, ಬಿಕೆ ವೃತ್ತ, ಜಮ್ಮು ಸವಾರಿ ದಿಣ್ಣೆ, ಐಡಿಬಿಐ ಲೇಔಟ್, ಸೌತ್ ಅವೆನ್ಯೂ ಲೇಔಟ್, ಗೊಟ್ಟಿಗೆರೆ ಮುಖ್ಯರಸ್ತೆ, ಕೆಂಬಟಹಳ್ಳಿ ಮುಖ್ಯರಸ್ತೆ, ಪವಮಾನ ನಗರ, ಗುಂಡಪ್ಪ ಲೇಔಟ್, ಕೆಂಬಟಹಳ್ಳಿ ಗ್ರಾಮ, ಗ್ಯಾಲಕ್ಸಿ ಲೇಔಟ್, ಮೀನಾಕ್ಷಿ ದೇವಸ್ಥಾನ, ಸಂತೃಪ್ತಿ ನಗರ ಮತ್ತು ನೃಪತಿ ನಗರದಲ್ಲಿ ಪವರ್ ಕಟ್ ಇರಲಿದೆ.
ಉತ್ತರ ವಲಯ: ಬೆಳಗ್ಗೆ 10ರಿಂದ ಸಂಜೆ 7 ಗಂಟೆಯವರೆಗೆ ಲಕ್ಷ್ಮಿ ದೇವಿ ನಗರ ಸ್ಲಂ, ಮಹಾಲಕ್ಷ್ಮಿ ಲೇಔಟ್, ಈಜುಕೊಳ ಪ್ರದೇಶ, ಗಣೇಶ ಬ್ಲಾಕ್, ಆಂಜನೇಯ ದೇವಸ್ಥಾನ, ಸರಸ್ವತಿಪುರಂ, ಎಜಿಬಿಜಿ ಲೇಔಟ್. ಹೆಸರಘಟ್ಟ ಮುಖ್ಯರಸ್ತೆ, ಬಾಗಲಗುಂಟೆ, ಭುವನೇಶ್ವರಿನಗರ 8ನೇ, 9ನೇ, 10ನೇ ಮುಖ್ಯರಸ್ತೆ, ಕಲ್ಯಾಣ ನಗರ, ಮಹೇಶ್ವರಿನಗರ, ಮಹೇಶ್ವರಮ್ಮ ದೇವಸ್ಥಾನದ ಸುತ್ತಮುತ್ತ, ಮಲ್ಲಸಂದ್ರ, ಮಾರಿಗೋಲ್ಡ್ ಅಪಾರ್ಟ್‌ಮೆಂಟ್, ದ್ವಾರಕಾ ನಗರ, ಸಿಂಗನಾಯಕನಹಳ್ಳಿ, ಆವಲಹಳ್ಳಿ, ಆರ್‌ಟಿಒ ರಸ್ತೆ ಮೈಲಪನಹಳ್ಳಿ ಮುಟಗದಹಳ್ಳಿ, ಭೂಪಸಂದ್ರ ಚಾಮುಂಡಿನಗರ, ಆನಂದನಗರ, ಆರ್‌ಟಿ ನಗರ, ಭುವನೇಶ್ವರಿ ನಗರ, ಕನಕನಗರದಲ್ಲಿ ಕರೆಂಟ್ ಇರುವುದಿಲ್ಲ.
ಪೂರ್ವ ವಲಯ: ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಕೊಡಿಗೇಹಳ್ಳಿ, ಜೋಗುಪಾಳ್ಯ, ಶಾರದಾಂಬ ನಗರದಲ್ಲಿ ಪವರ್ ಕಟ್ ಇರಲಿದೆ. ಬೆಂಗಳೂರು ಪಶ್ಚಿಮ ವಲಯದಲ್ಲಿ ಬೆಳಗ್ಗೆ 9ರಿಂದ ಸಂಜೆ 8 ಗಂಟೆಯವರೆಗೆ ಉದಯ್ ನಗರ, BEL 1ನೇ ಹಂತ, BEL 2ನೇ ಹಂತ, RTO ಆಫೀಸ್ ಮುಖ್ಯ ರಸ್ತೆ, RR ರೆಸಿಡೆನ್ಸಿ ಉತ್ತರಹಳ್ಳಿ ರಸ್ತೆ, ಕೊನ್ನಸಂದ್ರ ರಸ್ತೆ, ಅನ್ನಪೂರ್ಣಶ್ವರಿ ಲೇಔಟ್, ನಾಗನಾಯಕನಹಳ್ಳಿ, ಮಲ್ಲಿಪಾಳ್ಯ, ಆಂಧ್ರಹಳ್ಳಿ ಮುಖ್ಯ ರಸ್ತೆ, ಬ್ಯಾಡರಹಳ್ಳಿ ಬಸ್ ಸ್ಟಾಪ್ ಸುತ್ತಮುತ್ತ ಕರೆಂಟ್ ಇರುವುದಿಲ್ಲ.
ಇದನ್ನೂ ಓದಿ: Power Cut: ಬೆಂಗಳೂರಿನ ಜೆಪಿ ನಗರ, ಕುಮಾರಸ್ವಾಮಿ ಲೇಔಟ್ ಸೇರಿ ಹಲವೆಡೆ ಇಂದು ಪವರ್ ಕಟ್
Power Cut: ಬೆಂಗಳೂರಿನ ಹಲವೆಡೆ ಇಂದು ಕರೆಂಟ್ ಇರಲ್ಲ; ಪವರ್ ಕಟ್ ಇರುವ ಏರಿಯಾಗಳಿವು