ವಿದ್ಯುತ್ ತಗುಲಿ ಸ್ನೇಹಿತ ಸಾವು- ತನಿಖೆ ವೇಳೆ ಮಿಸ್ಸಿಂಗ್ ಕೇಸಿಗೆ ಟ್ವಿಸ್ಟ್, ನಕಲಿ ಸಹಿ -ಮ್ಯಾನೇಜರ್ ಸೇರಿ 8 ಜನರ ವಿರುದ್ಧ ಎಫ್​ಐಆರ್

ವಿದ್ಯುತ್ ತಗುಲಿ ಸ್ನೇಹಿತ ಸಾವು- ತನಿಖೆ ವೇಳೆ ಮಿಸ್ಸಿಂಗ್ ಕೇಸಿಗೆ ಟ್ವಿಸ್ಟ್, ನಕಲಿ ಸಹಿ -ಮ್ಯಾನೇಜರ್ ಸೇರಿ 8 ಜನರ ವಿರುದ್ಧ ಎಫ್​ಐಆರ್
ನಕಲಿ ಸಹಿ: ಬ್ಯಾಂಕ್ ಮ್ಯಾನೇಜರ್ ಸೇರಿ 8 ಜನರ ವಿರುದ್ಧ FIR ದಾಖಲು

ಬ್ಯಾಂಕ್ ಮ್ಯಾನೇಜರ್ ಸಂಧ್ಯಾ ನಕಲಿ ಸಹಿ ಮಾಡಿಸಿ, ಸಾಲ ಮಂಜೂರು ಮಾಡಿದ್ದರು. ಬ್ಯಾಂಕ್ ಸಾಲ ಮರುಪಾವತಿ ಆಗದ ಹಿನ್ನೆಲೆ, ಪ್ರಕರಣ ಬೆಳಕಿಗೆ ಬಂದಿತ್ತು.

TV9kannada Web Team

| Edited By: sadhu srinath

Mar 05, 2022 | 1:22 PM

ಹುಬ್ಬಳ್ಳಿ: ನಕಲಿ ಸಹಿ ಬಳಸಿ 35 ಲಕ್ಷ ರೂಪಾಯಿ ದುರ್ಬಳಕೆ ಆರೋಪ ಕೇಳಿಬಂದಿದ್ದು, ಬ್ಯಾಂಕ್ ಮ್ಯಾನೇಜರ್ ಸೇರಿ 8 ಜನರ ವಿರುದ್ಧ FIR ದಾಖಲು ಮಾಡಲಾಗಿದೆ. ನಕಲಿ ಸಹಿ ಬಳಸಿ 7 ಜನರಿಗೆ ತಲಾ 5 ಲಕ್ಷ ರೂಪಾಯಿಯಂತೆ ಸಾಲ ವಿತರಿಸಲಾಗಿತ್ತು. ಬ್ಯಾಂಕ್ ಮ್ಯಾನೇಜರ್ ಸಂಧ್ಯಾ ಟಿ.ಸಿ ಅವರು ಆರೋಪಿಗಳ ಜತೆ ಸೇರಿ ಸಾಲ ನೀಡಿದ್ದರು. ಒಟ್ಟು 8 ಜನರ ವಿರುದ್ಧ FIR ದಾಖಲಿಸಿಕೊಳ್ಳಲಾಗಿದೆ. ಬ್ಯಾಂಕ್ ಮ್ಯಾನೇಜರ್ ಸಂಧ್ಯಾ ನಕಲಿ ಸಹಿ ಮಾಡಿಸಿ, ಸಾಲ ಮಂಜೂರು ಮಾಡಿದ್ದರು. ಬ್ಯಾಂಕ್ ಸಾಲ ಮರುಪಾವತಿ ಆಗದ ಹಿನ್ನೆಲೆ, ಪ್ರಕರಣ ಬೆಳಕಿಗೆ ಬಂದಿತ್ತು. ಅದೇ ಬ್ಯಾಂಕ್ ಉದ್ಯೋಗಿಯಿಂದ ಕೇಶ್ವಾಪುರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿದ್ಯುತ್ ತಗುಲಿ ಸ್ನೇಹಿತನ ಸಾವು- ತುಮಕೂರು‌ ಪೊಲೀಸ್ ತನಿಖೆಯಲ್ಲಿ ಸಿಕ್ತು ಮಿಸ್ಸಿಂಗ್ ಕೇಸ್ ಗೆ ಟ್ವಿಸ್ಟ್: ತುಮಕೂರು‌: ಪೊಲೀಸ್ ತನಿಖೆಯಲ್ಲಿ ಮಿಸ್ಸಿಂಗ್ ಕೇಸ್ ಗೆ ಟ್ವಿಸ್ಟ್ ಸಿಕ್ಕಿದೆ. ಕಾಣೆಯಾದ ವ್ಯಕ್ತಿ ನಾಲ್ಕು ದಿನಗಳ ಬಳಿಕ ಶವವಾಗಿ ಪತ್ತೆಯಾಗಿದೆ. ವಿದ್ಯುತ್ ತಗುಲಿ ವ್ಯಕ್ತಿಯ ಸಾವು ಸಂಭವಿಸಿದ್ದು, ಪ್ರಕರಣ ಮುಚ್ಚಿಹಾಕಲು ಸ್ನೇಹಿತನ ಶವವನ್ನು ಇಬ್ಬರು ಮುಚ್ಚಿಟ್ಟಿದ್ದರು. ಪ್ರಕರಣದ ಸಂಬಂಧ ತುಮಕೂರು ಜಿಲ್ಲೆ ತುರುವೇಕೆರೆ ಪೊಲೀಸರು ರೋಹಿತ್ ಹಾಗೂ ವಿನಯ್ ಎಂಬಿಬ್ಬರು ಸ್ನೇಹಿತರನ್ನು ಬಂಧಿಸಿದ್ದಾರೆ. ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ತೊರೆಮಾವಿನ ಹಳ್ಳಿಯಲ್ಲಿ ಘಟನೆ ನಡೆದಿತ್ತು.

ಏನಿದು ಪ್ರಕರಣ: ಯೋಗೇಶ್, ರೋಹಿತ್ ಹಾಗೂ ವಿನಯ್ ಮೂವರೂ ಸ್ನೇಹಿತರು. ರೋಹಿತ್ ತೋಟದಲ್ಲಿ ವಿದ್ಯುತ್ ಕಂಬದ ವೈರ್ ಸರಿ ಮಾಡಲು ಮೂವರೂ ಸ್ನೇಹಿತರು ಹೋಗಿದ್ದರು. ಈ ವೇಳೆ ವಿದ್ಯುತ್ ತಗುಲಿ ಯೋಗೇಶ್ ಸಾವನ್ನಪ್ಪಿದ್ದ. ಯೋಗೇಶನ ಶವವನ್ನ ಬೇರೆಡೆಗೆ ಬಿಸಾಡಿದ್ದ ಇನ್ನಿಬ್ಬರು ಮಿಸ್ಸಿಂಗ್ ಸೀನ್ ಕ್ರಿಯೇಟ್ ಮಾಡಿದ್ದರು. ಪ್ರಕರಣದ ದಿಕ್ಕು ತಪ್ಪಿಸಲು ಶವವನ್ನ 90 ಕಿಲೋ ಮೀಟರ್ ದೂರ ಬೈಕ್ ನಲ್ಲಿ ಕೊಂಡೊಯ್ದು ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಬಳಿಯ ಸೇತುವೆಯೊಂದರ ಕೆಳಗೆ ಬಿಸಾಡಿ ಬಂದಿದ್ರು. ಬಳಿಕ  ಪ್ರಕರಣದ ಸುಳಿವು ಸಿಗದಂತೆ ತಿಪಟೂರಿನ ಕೆಬಿ ಕ್ರಾಸ್ ಬಳಿ ಬೈಕ್ ನಿಲ್ಲಿಸಿದ್ದರು.

ಯೋಗೇಶ್ ಮಿಸ್ಸಿಂಗ್ ಆಗಿರುವ ಹಾಗೆ ಸೀನ್ ಕ್ರಿಯೇಟ್ ಮಾಡಿದರು. ಇತ್ತ ತುರುವೇಕೆರೆ ಪೊಲೀಸರು ಯೋಗೇಶ್ ಕಾಣೆಯಾದ ಬಗ್ಗೆ ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡಿದ್ದರು. ಯೋಗೇಶ್ ಮಿಸ್ಸಿಂಗ್ ಆಗಿರುವ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದರು. ಅತ್ತ, ದೂರು ದಾಖಲಾಗುತ್ತಿದ್ದಂತೆ ಆರೋಪಿಯೊಬ್ಬ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ. ಪೊಲೀಸರಿಗೆ ಸಿಕ್ಕಿ ಬೀಳುವ ಭಯದಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ರೋಹಿತ್.

ಈ ವೇಳೆ ಆರೋಪಿಯೊಬ್ಬನ ವಿಚಾರಣೆ ನಡೆಸಿದಾಗ ಯೋಗೇಶ್ ಸಾವಿನ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಆರೋಪಿ ರೋಹಿತ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ರೋಹಿತ್ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮತ್ತೊಬ್ಬ ಆರೋಪಿ ವಿನಯ್ ನನ್ನೂ ತುರುವೇಕೆರೆ ಪೊಲೀಸರು ಬಂಧಿಸಿದ್ದಾರೆ.

ಈ ಮಧ್ಯೆ, ಪೊಲೀಸರು ಯೋಗೇಶನ ಮೃತದೇಹವನ್ನ ಪತ್ತೆ ಹಚ್ಚಿ ಆತನ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಸದ್ಯ ಪೊಲೀಸರು ಮೃತ ಯೋಗೇಶ್ ಮರಣೋತ್ತರ ಪರೀಕ್ಷೆ ವರದಿಗೆ ಕಾಯುತ್ತಿದ್ದಾರೆ. ತುರುವೇಕೆರೆ ಪೊಲೀಸರಿಂದ ಪ್ರಕರಣದ ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ಕೋಟಿ ಅಪಾಯಗಳೇ ಎದುರಾಗಲಿ, ಈ ಸರಳ ಉಪಾಯ ಒಂದು ಸಾಕು! ಯಾವುದದು?

ಇದನ್ನೂ ಓದಿ: Ukraine Crisis: ಮಹಿಳೆಯರ ಮೇಲೆ ರಷ್ಯನ್ ಪಡೆಗಳು ಅತ್ಯಾಚಾರವೆಸಗುತ್ತಿವೆ; ಉಕ್ರೇನ್ ಗಂಭೀರ ಆರೋಪ

Follow us on

Related Stories

Most Read Stories

Click on your DTH Provider to Add TV9 Kannada