ಮಾಸ್ಕ್ ಹಾಕದ ಯುವಕರಿಗೆ ದಂಡ ವಿಧಿಸಿದ್ದಕ್ಕೆ ಗಲಾಟೆ; ಘಟನೆ ವೇಳೆ ಹರಿದ ಪೊಲೀಸ್ ಹೆಡ್​ಕಾನ್​ಸ್ಟೇಬಲ್ ಸಮವಸ್ತ್ರ

| Updated By: ganapathi bhat

Updated on: Nov 26, 2021 | 2:53 PM

ಓರ್ವ ಆರೋಪಿ ಸಚಿನ್​ನನ್ನ ಠಾಣೆಗೆ ಕರೆತರಲಾಗಿದೆ. ಅಜಿತ್, ಅಜಯ್​ಗಾಗಿ ಪೊಲೀಸರಿಂದ ಶೋಧಕಾರ್ಯ ಮುಂದುವರಿದಿದೆ. ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮಾಸ್ಕ್ ಹಾಕದ ಯುವಕರಿಗೆ ದಂಡ ವಿಧಿಸಿದ್ದಕ್ಕೆ ಗಲಾಟೆ; ಘಟನೆ ವೇಳೆ ಹರಿದ ಪೊಲೀಸ್ ಹೆಡ್​ಕಾನ್​ಸ್ಟೇಬಲ್ ಸಮವಸ್ತ್ರ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಮಾಸ್ಕ್ ಹಾಕದ ಯುವಕರಿಗೆ ದಂಡ ಹಾಕುವಾಗ ಗಲಾಟೆ ನಡೆದ ಘಟನೆ ಬೆಂಗಳೂರಿನ ಮಲ್ಲಸಂದ್ರದಲ್ಲಿ ಉಂಟಾಗಿದೆ. ಪೊಲೀಸರ ಜೊತೆ ಯುವಕರು ಮಾಸ್ಕ್ ಧರಿಸದ ವಿಚಾರವಾಗಿ ಗಲಾಟೆ ಮಾಡಿಕೊಂಡಿದ್ದಾರೆ. ಎಎಸ್​ಐ ರಾಜಶೇಖರ್, ಹೆಡ್ ಕಾನ್ಸ್‌ಟೇಬಲ್ ಮುನಿರಾಜು ಜೊತೆ ಯುವಕರು ಜಗಳವಾಡಿದ್ದಾರೆ. ಗಲಾಟೆ ವೇಳೆ ಹೆಡ್​ಕಾನ್ಸ್​ಟೇಬಲ್​​ ಹೆಚ್​ಸಿ ಮುನಿರಾಜು ಸಮವಸ್ತ್ರ ಹರಿದು ಹೋಗಿದೆ. ಹೆಡ್​ ಕಾನ್ಸ್​​ಟೇಬಲ್​ ಬಳಿ ಇದ್ದ ಮಷಿನ್​ಗೂ ಹಾನಿ ಉಂಟಾಗಿದೆ ಎಂದು ತಿಳಿದುಬಂದಿದೆ.

ಮಾಸ್ಕ್ ಧರಿಸದೆ ರಸ್ತೆ ಬದಿಯಲ್ಲಿ ನಿಂತಿದ್ದ ಯುವಕರನ್ನು ಪೊಲೀಸರು ಪ್ರಶ್ನೆ ಮಾಡಿದ್ದರು. ಮಾಸ್ಕ್​ ಧರಿಸದ್ದನ್ನು ಪ್ರಶ್ನಿಸಿದ್ದಕ್ಕೆ ಯುವಕರು ಉದ್ಧಟತನ ತೋರಿದ್ದಾರೆ. ದಂಡ ಪಾವತಿಸಿದೆ ಯುವಕರು ಉದ್ಧಟತನ ಪ್ರದರ್ಶನ ಮಾಡಿದ್ದಾರೆ. ಈ ವೇಳೆ, ಪೊಲೀಸ್ ಕಾನ್​ಸ್ಟೇಬಲ್ ಸಮವಸ್ತ್ರ ಕೂಡ ಹರಿದುಹೋಗಿದೆ. ಓರ್ವ ಆರೋಪಿ ಸಚಿನ್​ನನ್ನ ಠಾಣೆಗೆ ಕರೆತರಲಾಗಿದೆ. ಅಜಿತ್, ಅಜಯ್​ಗಾಗಿ ಪೊಲೀಸರಿಂದ ಶೋಧಕಾರ್ಯ ಮುಂದುವರಿದಿದೆ. ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ದೇವನಹಳ್ಳಿ: ಜಮೀನು ವಿಚಾರ 2 ಕುಟುಂಬಗಳ ಮಧ್ಯೆ ಮಾರಾಮಾರಿ
ಜಮೀನು ವಿಚಾರದಲ್ಲಿ 2 ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬೈಚಾಪುರ ಗ್ರಾಮದಲ್ಲಿ ನಡೆದಿದೆ. ಶಶಿಧರ್, ಮುನಿಯಪ್ಪ ಕುಟುಂಬದ ಮಧ್ಯೆ ಹೊಡೆದಾಟ ಉಂಟಾಗಿದೆ. ಮೆಕ್ಕೆಜೋಳದ ತೋಟದಲ್ಲಿ ಸಿನಿಮಾ ಸ್ಟೈಲ್​ನಲ್ಲಿ ಗಲಾಟೆ ನಡೆದಿದೆ. ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರು: ರಸ್ತೆ ಗುಂಡಿಯಲ್ಲಿ ಬಿಬಿಎಂಪಿ ಪ್ರತಿಕೃತಿ ಮುಚ್ಚಿ ಅಂತ್ಯಕ್ರಿಯೆ ಮಾಡಿದ ಪ್ರತಿಭಟನಾಕಾರರು; ಪಾಲಿಕೆ ವಿರುದ್ಧ ಆಕ್ರೋಶ

ಇದನ್ನೂ ಓದಿ: ಬೆಂಗಳೂರು: ಭೂಕಂಪದ ಯಾವುದೇ ಲಕ್ಷಣ ದಾಖಲಾಗಿಲ್ಲ; ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಸ್ಪಷ್ಟನೆ

Published On - 2:49 pm, Fri, 26 November 21