GST ಆಡಿಟ್ ಮಾಡಿಕೊಡುವುದಾಗಿ ಹೇಳಿ 10 ಕೋಟಿಗೂ ಹೆಚ್ಚು ಹಣ ವಂಚಿಸಿರುವ ಆರೋಪಿ ಬೆಂಗಳೂರಿನಲ್ಲಿ ಅರೆಸ್ಟ್!

ಹಾಸನದ ಎಪಿಎಂಸಿ ಗೊಡೌನ್ನಿಂದ ಒಂದು ಲೋಡ್ ಪಡಿತರ ಅಕ್ಕಿಯನ್ನು ಸಾಗಾಟ ಮಾಡುತ್ತಿದ್ದರು. ಪಂಜಾಬ್ನಿಂದ ಕರ್ನಾಟಕಕ್ಕೆ ಅಕ್ಕಿಯನ್ನು ತಂದು ದಾಸ್ತಾನು ಮಾಡುತ್ತಿದ್ದರು.

GST ಆಡಿಟ್ ಮಾಡಿಕೊಡುವುದಾಗಿ ಹೇಳಿ 10 ಕೋಟಿಗೂ ಹೆಚ್ಚು ಹಣ ವಂಚಿಸಿರುವ ಆರೋಪಿ ಬೆಂಗಳೂರಿನಲ್ಲಿ ಅರೆಸ್ಟ್!
ಬಂಧಿತ ಆರೋಪಿ ವೀರಭದ್ರಪ್ಪ
Edited By:

Updated on: May 10, 2022 | 8:45 AM

ಬೆಂಗಳೂರು: GST ಆಡಿಟ್ (Audit) ಮಾಡಿಕೊಡುವುದಾಗಿ ಹೇಳಿ ಸುಮಾರು 10 ಕೋಟಿಗೂ ಹೆಚ್ಚು ಹಣವನ್ನು (Money) ವಂಚನೆ ಮಾಡಿರುವ ಆರೋಪಿಯನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವೀರಭದ್ರಪ್ಪ ಬೆಂಗಳೂರು, ದಾವಣಗೆರೆಯಲ್ಲಿ ವಂಚಿಸಿದ್ದಾನೆ. 12 ಕೇಸ್​ಗಳಲ್ಲಿ 10 ಕೋಟಿಗೂ ಹೆಚ್ಚು ತೆರಿಗೆ ಹಣ ವಂಚನೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿಯ ಬೆಂಗಳೂರಿನ ಇಂದಿರಾನಗರ, ದಾವಣಗೆರೆ ಮನೆಗಳ ಮೇಲೆ ದಾಳಿ ಮಾಡಿ 5.31 ಕೋಟಿ ರೂ. ಹಣವನ್ನು ತೆರಿಗೆ ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಅಕ್ರಮ ದಂಧೆ ಬಯಲು:
ಹಾಸನ: ಜಿಲ್ಲೆಯಲ್ಲಿ ಬಡವರಿಗೆ ವಿತರಣೆ ಆಗಬೇಕಿದ್ದ 471 ಚೀಲ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ದಂಧೆ ಬಯಲಾಗಿದೆ. ಅಕ್ರಮವಾಗಿ ಅಕ್ಕಿ ತಂದು ಖಾಸಗಿ ಗೊಡೌನ್​ನಲ್ಲಿ ದಾಸ್ತಾನು ಮಾಡುವ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ಹಾಸನದ ಎಪಿಎಂಸಿ ಗೊಡೌನ್​ನಿಂದ ಒಂದು ಲೋಡ್ ಪಡಿತರ ಅಕ್ಕಿಯನ್ನು ಸಾಗಾಟ ಮಾಡುತ್ತಿದ್ದರು. ಪಂಜಾಬ್​ನಿಂದ ಕರ್ನಾಟಕಕ್ಕೆ ಅಕ್ಕಿಯನ್ನು ತಂದು ದಾಸ್ತಾನು ಮಾಡುತ್ತಿದ್ದರು. ಚಾಲಕನ ಸಮೇತ ಲಾರಿ ಹಾಗೂ 471 ಚೀಲ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳಕ್ಕೆ ಅಹಾರ ಇಲಾಖೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಹುಕ್ಕಾ‌ಲಾಂಜ್ ತೆರೆದು ಹಣ ವಸೂಲಿ:
ಕೆಫೆ ಹೆಸರಿನಲ್ಲಿ ಹುಕ್ಕಾ‌ಲಾಂಜ್ ತೆರೆದು ಹಣ ವಸೂಲಿ ಮಾಡಿದ ಹಿನ್ನೆಲೆ ಕನ್ನಮಂಗಲ ಗೇಟ್ ಬಳಿ ಇರುವ ರನ್ ವೇ ಕೆಫೆ ಮೇಲೆ ಏರ್​ಪೋರ್ಟ್​ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ಆತಿಕುರ್, ಅಯ್ಯಬ್ ಖಾನ್, ಗಣೇಶ್ ಬಂಧಿತ ಆರೋಪಿಗಳು.

ಕಳ್ಳತನಕ್ಕೆ ಬಂದು ಬರಿ ಕೈಯಲ್ಲಿ ಹೋದ ಕಳ್ಳ:
ಕಳ್ಳತನಕ್ಕೆ ಬಂದು ಚಿಕನ್ ಹುಡುಕಾಡಿದ ಘಟನೆ ಬ್ಯಾಡರಹಳ್ಳಿ ಬಳಿಯ ತಿಗಳರಪೇಟೆಯಲ್ಲಿ ನಡೆದಿದೆ. ಫೈವ್ ಸ್ಟಾರ್ ಚಿಕನ್ ಸೆಂಟರ್ ಮೇಲ್ಚಾವಣಿ ಮುರಿದು ವ್ಯಕ್ತಿ ಕಳ್ಳತನಕ್ಕೆ ಯತ್ನಿಸಿದ್ದಾನೆ. ಅಂಗಡಿಯ ಮೇಲ್ಛಾವಣಿ ಮುರಿದು ಒಳ ಬಂದು ಖಾಲಿ ಕೈನಲ್ಲಿ ಕಳ್ಳ ವಾಪಸ್ ಆಗಿದ್ದಾನೆ. ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಂಗಡಿಯ ಡ್ಯಾಶ್ ಬೋರ್ಡ್​ನಲ್ಲಿ ದುಡ್ಡಿಲ್ಲವೆಂದು ಕಿಚನ್​ನಲ್ಲಿ ಹುಡುಕಾಟ ನಡೆಸಿದ್ದಾನೆ.

ಇದನ್ನೂ ಓದಿ

ಪಂಜಾಬ್​​​ನ ಮೊಹಾಲಿಯಲ್ಲಿ ರಾಕೆಟ್​ ದಾಳಿ: ಪೊಲೀಸ್ ಗುಪ್ತಚರ ವಿಭಾಗದ ಕಟ್ಟಡಕ್ಕೆ ಹಾನಿ

‘ಅವತಾರ್​’ ಸೀಕ್ವೆಲ್​ನ ಟ್ರೇಲರ್ ರಿಲೀಸ್​; ಹೇಗಿದೆ ನೋಡಿ ಹೊಸ ಲೋಕ

Published On - 8:37 am, Tue, 10 May 22