ಪಂಜಾಬ್ನ ಮೊಹಾಲಿಯಲ್ಲಿ ರಾಕೆಟ್ ದಾಳಿ: ಪೊಲೀಸ್ ಗುಪ್ತಚರ ವಿಭಾಗದ ಕಟ್ಟಡಕ್ಕೆ ಹಾನಿ
‘ಇದೊಂದು ಸಣ್ಣ ಪ್ರಮಾಣದ ದಾಳಿಯಾಗಿದ್ದು, ಹೆಚ್ಚೇನೂ ನಷ್ಟವಾಗಿಲ್ಲ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೊಹಾಲಿ: ಪಂಜಾಬ್ ಪೊಲೀಸ್ ಇಲಾಖೆಯ ಗುಪ್ತಚರ ವಿಭಾಗ ಕಚೇರಿಯ ಮೇಲೆ ರಾಕೆಟ್ ದಾಳಿ ನಡೆದಿದೆ. ರಾಕೆಟ್ ಪ್ರೊಪೆಲ್ಡ್ ಗ್ರೆನೇಡ್ (rocket-propelled grenade – RPG) ಮೂಲಕ ನಡೆದಿರುವ ಗ್ರೆನೇಡ್ ದಾಳಿಯಲ್ಲಿ ಗುಪ್ತಚರ ಇಲಾಖೆ ಕಟ್ಟಡದ ಗಾಜು ಒಡೆದು, ಪುಡಿಯಾಗಿದೆ. ಯಾವುದೇ ಜೀವಹಾನಿಯಾಗಿಲ್ಲ. ದಾಖಲೆಗಳು ಹಾಳಾಗಿಲ್ಲ. ‘ಇದೊಂದು ಸಣ್ಣ ಪ್ರಮಾಣದ ದಾಳಿಯಾಗಿದ್ದು, ಹೆಚ್ಚೇನೂ ನಷ್ಟವಾಗಿಲ್ಲ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೊಹಾಲಿಯ ಸೆಕ್ಟರ್ 77ರಲ್ಲಿರುವ ಎಸ್ಎಎಸ್ ನಗರ ಪ್ರದೇಶದಲ್ಲಿರುವ ಪಂಜಾಬ್ ಪೊಲೀಸ್ ಇಲಾಖೆಯ ಗುಪ್ತಚರ ಇಲಾಖೆ ಮುಖ್ಯ ಕಚೇರಿಯ ಮೇಲೆ ರಾತ್ರಿ 7.45ಕ್ಕೆ ರಾಕೆಟ್ ದಾಳಿ ನಡೆದಿದೆ. ದಾಳಿಯಲ್ಲಿ ಯಾವುದೇ ನಷ್ಟವಾಗಿರುವ ಬಗ್ಗೆ ವರದಿಯಾಗಿಲ್ಲ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ವಿಧಿವಿಜ್ಞಾನ ತಜ್ಞರೂ ಸ್ಥಳಕ್ಕೆ ಧಾವಿಸಿದ್ದು, ವಿಸ್ತೃತ ತನಿಖೆಗೆ ಆದೇಶ ನೀಡಲಾಗಿದೆ ಎಂದು ಮೊಹಾಲಿ ಪೊಲೀಸರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸ್ಫೋಟ ಸಂಭವಿಸಿದ ಪ್ರದೇಶದಲ್ಲಿ ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ರಾಕೆಟ್ ದಾಳಿ ಮಾದರಿಯ ಸ್ಫೋಟ ಸಂಭವಿಸಿದ್ದು, ಯಾವುದೇ ಜೀವಹಾನಿ ವರದಿಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಚಂಡಿಗಡದಿಂದ ಪೊಲೀಸ್ ಕ್ಷಿಪ್ರ ಕಾರ್ಯಪಡೆಯು ಮೊಹಾಲಿಗೆ ಭೇಟಿ ನೀಡಿದ್ದು, ಸ್ಥಳೀಯ ಪೊಲೀಸ್ ಸಿಬ್ಬಂದಿಗೆ ಅಗತ್ಯ ನೆರವು ಒದಗಿಸುತ್ತಿದೆ.
ಇದನ್ನೂ ಓದಿ: ಉಕ್ರೇನ್ನ ಶಾಲೆ ಮೇಲೆ ರಷ್ಯಾದಿಂದ ಬಾಂಬ್ ದಾಳಿ; 60ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಶಂಕೆ
Published On - 8:06 am, Tue, 10 May 22