ಮುಂದಿನ ಜನಗಣತಿ ಇ-ಜನಗಣತಿ ಆಗಲಿದೆ: ಅಸ್ಸಾಂನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ

ಮುಂದಿನ ಜನಗಣತಿ ಇ-ಜನಗಣತಿ ಆಗಲಿದೆ: ಅಸ್ಸಾಂನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ
ಅಸ್ಸಾಂನಲ್ಲಿ ಅಮಿತ್ ಶಾ

2024 ರ ಹೊತ್ತಿಗೆ, ಪ್ರತಿ ಜನನ ಮತ್ತು ಮರಣವನ್ನು ನೋಂದಾಯಿಸಲಾಗುತ್ತದೆ, ಅಂದರೆ ನಮ್ಮ ಜನಗಣತಿ ಸ್ವಯಂಚಾಲಿತವಾಗಿ ನವೀಕರಿಸಲ್ಪಡುತ್ತದೆ. ಜನಗಣತಿಯನ್ನು ಹೆಚ್ಚು ವೈಜ್ಞಾನಿಕವಾಗಿ ಮಾಡಲು...

TV9kannada Web Team

| Edited By: Rashmi Kallakatta

May 09, 2022 | 9:50 PM

ದೆಹಲಿ: ದೇಶದ ಜನನ ಮತ್ತು ಮರಣ ದಾಖಲಾತಿಯನ್ನು ಜನಗಣತಿಗೆ (census) ಜೋಡಿಸಲಾಗುವುದು. ಮುಂದಿನ ಜನಗಣತಿಯನ್ನು ಸ್ವಯಂಚಾಲಿತ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಸೋಮವಾರ ಅಸ್ಸಾಂನಲ್ಲಿ ಹೇಳಿದ್ದಾರೆ. “2024 ರ ಹೊತ್ತಿಗೆ ಪ್ರತಿ ಜನನ ಮತ್ತು ಮರಣವನ್ನು ನೋಂದಾಯಿಸಲಾಗುತ್ತದೆ, ಅಂದರೆ ನಮ್ಮ ಜನಗಣತಿ ಸ್ವಯಂಚಾಲಿತವಾಗಿ ನವೀಕರಿಸಲ್ಪಡುತ್ತದೆ. ಜನಗಣತಿಯನ್ನು ಹೆಚ್ಚು ವೈಜ್ಞಾನಿಕವಾಗಿ ಮಾಡಲು ಆಧುನಿಕ ತಂತ್ರಗಳನ್ನು ಸೇರಿಸಲು ಗೃಹ ಸಚಿವಾಲಯ ನಿರ್ಧರಿಸಿದೆ. ಮುಂದಿನ ಜನಗಣತಿಯು ಇ-ಜನಗಣತಿ (e-census) ಆಗಿರುತ್ತದೆ, ಇದು ಶೇ 100 ಪರ್​​ಫೆಕ್ಟ್ ಜನಗಣತಿಯಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.ಪ್ರತಿ ಜನನದ ನಂತರ ಜನಗಣತಿ ನೋಂದಣಿಗೆ ವಿವರಗಳನ್ನು ಸೇರಿಸಲಾಗುವುದು ಮತ್ತು ಮಗುವಿಗೆ 18 ವರ್ಷ ತುಂಬಿದಾಗ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಲಾಗುವುದು ಎಂದು ಗೃಹ ಸಚಿವರು ಹೇಳಿದರು. ಸಾವಿನ ನಂತರ ಹೆಸರನ್ನು ಅಳಿಸಲಾಗುತ್ತದೆ. ಎಲ್ಲವೂ ಪರಸ್ಪರ ಲಿಂಕ್ ಆಗಿರುವುದರಿಂದ ಹೆಸರುಗಳು ಮತ್ತು ವಿಳಾಸಗಳ ಬದಲಾವಣೆಯು ಸುಗಮವಾಗಿರುತ್ತದೆ ಎಂದು ಅವರು ಹೇಳಿದರು.  ಸಾಫ್ಟ್‌ವೇರ್ ಅನ್ನು ಪ್ರಾರಂಭಿಸಿದಾಗ ಅದರಲ್ಲಿ ಎಲ್ಲಾ ವಿವರಗಳನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡುವ ವ್ಯಕ್ತಿಯ ಕುಟುಂಬ ನನ್ನದಾಗಿರುತ್ತದೆ ಎಂದು ಶಾ ಹೇಳಿದರು. ಅಸ್ಸಾಂನ ಕಮ್ರೂಪ್‌ನ ಅಮಿಂಗ್‌ಗಾಂವ್‌ನಲ್ಲಿ ಜನಗಣತಿ ಕಚೇರಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರವರು. ಈ ಇ-ಜನಗಣತಿಯು 100 ಪ್ರತಿಶತ ಎಣಿಕೆಯನ್ನು ಖಚಿತಪಡಿಸುತ್ತದೆ ಮತ್ತು ಮುಂದಿನ 25 ವರ್ಷಗಳವರೆಗೆ ದೇಶದ ಅಭಿವೃದ್ಧಿ ಯೋಜನೆಗೆ ಆಧಾರವನ್ನು ಒದಗಿಸುತ್ತದೆ ಎಂದು ಶಾ ಹೇಳಿದರು.

ಜನಗಣತಿಯು ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ. ನಮ್ಮ ಅಭಿವೃದ್ಧಿಯ ಸ್ಥಿತಿ ಏನು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು, ಪರ್ವತಗಳು, ನಗರಗಳು ಮತ್ತು ಹಳ್ಳಿಗಳಲ್ಲಿ ಜನರು ಯಾವ ರೀತಿಯ ಜೀವನಶೈಲಿಯನ್ನು ಹೊಂದಿದ್ದಾರೆ ಎಂಬುದನ್ನು ಜನಗಣತಿ ಮಾತ್ರ ಹೇಳಬಹುದು ಎಂದು ಅಮಿತ್ ಶಾ ಹೇಳಿದ್ದಾರೆ.

ಗೃಹ ಸಚಿವರು ತಮ್ಮ ಅಸ್ಸಾಂ ಭೇಟಿಯ ಸಂದರ್ಭದಲ್ಲಿ ಮಂಕಚಾರ್ ಸೆಕ್ಟರ್‌ನಲ್ಲಿ ಭಾರತ-ಬಾಂಗ್ಲಾದೇಶ ಗಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಸೆಂಟ್ರಲ್ ವರ್ಕ್‌ಶಾಪ್ ಮತ್ತು ಸ್ಟೋರ್ಸ್‌ಗೆ ಶಂಕುಸ್ಥಾಪನೆ ಮಾಡಿದ್ದು ಇದು ಈಶಾನ್ಯ ಮತ್ತು ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ಕೇಂದ್ರ ಸಶಸ್ತ್ರ ಅರೆಸೇನಾ ಪಡೆಗಳಿಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪೂರೈಸುತ್ತದೆ.

ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ  

ಇದನ್ನೂ ಓದಿ

Follow us on

Related Stories

Most Read Stories

Click on your DTH Provider to Add TV9 Kannada