ಬೆಂಗಳೂರು: ನೂಪುರ್ ಶರ್ಮಾ (Nupur Sharma) ಹೇಳಿಕೆಯನ್ನು ಖಂಡಿಸಿ ದೇಶದ ಹಲವು ಕಡೆ ಪ್ರತಿಭಟನೆ ನಡೆಯುತ್ತಿದೆ. ಈ ಹಿನ್ನೆಲೆ ಬೆಂಗಳೂರು (Bengaluru) ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು (Police) ಕಟ್ಟೆಚ್ಚರ ವಹಿಸಿದ್ದಾರೆ. ರಾತ್ರಿ ಹಾಗೂ ಬೆಳಗ್ಗೆ ನಗರದಲ್ಲಿ ಪೊಲೀಸರು ರೌಂಡ್ಸ್ ಹಾಕಿದ್ದಾರೆ. ಹಾಗೇ, ಪೂರ್ವ, ಪಶ್ಚಿಮ ವಿಭಾಗ, ಉತ್ತರ ವಿಭಾಗ, ದಕ್ಷಿಣ ವಿಭಾಗ, ಈಶಾನ್ಯ, ಆಗ್ನೇಯ, ವೈಟ್ ಫೀಲ್ಡ್ ವಿಭಾಗದಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದು, ಸೂಕ್ಷ್ಮ ಪ್ರದೇಶ, ಮಸೀದಿಗಳ ಬಳಿ ತೀವ್ರ ನಿಗಾ ವಹಿಸಿದ್ದಾರೆ. ರಾಜ್ಯದಲ್ಲಿ ಹುಬ್ಬಳ್ಳಿ ಸೇರಿ ಕೆಲ ಜಿಲ್ಲೆಗಳಲ್ಲೂ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ರಾಜ್ಯದಲ್ಲಿ ಹುಬ್ಬಳ್ಳಿ ಸೇರಿ ಕೆಲ ಜಿಲ್ಲೆಗಳಲ್ಲೂ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ.
ಈ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಈಗಾಗಲೇ ಹಿರಿಯ ಅಧಿಕಾರಿಗಳ ಜೊತೆಗೆ ಸಭೆ ಮಾಡಿದ್ದೇನೆ. ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆ ಕೊಟ್ಟಿದ್ದೇನೆ. ಕಟ್ಟೆಚ್ಚರ, ಗಸ್ತು ಪ್ರಾರಂಭ ಆಗಿದೆ. ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಪ್ರತಿ ಪೊಲೀಸ್ ಠಾಣೆಗೂ ಸೌಹಾರ್ದದಿಂದ ಕ್ರಮ ಕೈಗೊಳ್ಳಲು, ಶಾಂತಿ ಕಾಪಾಡಲು ಸೂಚನೆ ನೀಡಿದೆ. ಕಾನೂನು ಕ್ರಮಗಳನ್ನು ಕೈಗೊಳ್ಳಲು ಸೂಚನೆ ಕೊಟ್ಟಿದ್ದೇನೆ. ಈಗಾಗಲೇ ಪರಿಸ್ಥಿತಿ ಶಾಂತವಾಗಿದೆ ಎಂದರು.
ಮುಸ್ಲಿಂ ಮುಖಂಡರ ಜತೆ ಪೊಲೀಸರ ಸಭೆ:
ಮುಸ್ಲಿಂ ಮುಖಂಡರ ಜತೆ ಆಯಾ ಠಾಣೆ ಪೊಲೀಸರು ಸಭೆ ನಡೆಸಿದ್ದಾರೆ. ಬೆಂಗಳೂರಿನ ಶ್ರೀರಾಂಪುರ ಠಾಣೆಯಲ್ಲಿ ಮಸೀದಿ ಮುಖ್ಯಸ್ಥರನ್ನು ಕರೆದು ಇನ್ಸ್ಪೆಕ್ಟರ್ ಸಭೆ ಮಾಡಿದ್ದಾರೆ. ಯಾವುದೇ ರೀತಿಯಾದ ಪ್ರತಿಭಟನೆಯನ್ನ ಮಾಡಬೇಡಿ. ಸಾರ್ವಜನಿಕರಿಗೆ ತೊಂದರೆ ಕೊಡಬೇಡಿ ಎಂದು ಮನವಿ ಮಾಡಿದ ಇನ್ಸ್ಪೆಕ್ಟರ್, ತಮ್ಮ ಸಮುದಾಯದ ಜನರಿಗೆ ತಿಳಿಸುವಂತೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಪರ ಮತ ಚಲಾಯಿಸಿದ ಜೆಡಿ(ಎಸ್) ಶಾಸಕರ ಕೈಲಾಸ ಸಮಾರಾಧನೆ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ!
ಕ್ರಿಮಿನಲ್ ಕೇಸ್ ಹಾಕಲು ಸಿದ್ದರಾಮಯ್ಯ ಒತ್ತಾಯ:
ನೂಪುರ್ ಶರ್ಮಾ ಮೇಲೆ ಕ್ರಿಮಿನಲ್ ಕೇಸ್ ಹಾಕಬೇಕು. ನೂಪುರ್ ಶರ್ಮಾ ಜೊತೆ ಮತ್ತೊಬ್ಬರೂ ಮಾತನಾಡಿದ್ದಾರೆ. ಅವರ ವಿರುದ್ಧವೂ ಕ್ರಿಮಿನಲ್ ಕೇಸ್ ಹಾಕಬೇಕೆಂದು ವಿಪಕ್ಷಯ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಮೊಹಮ್ಮದ್ ಪೈಗಂಬರ್ ಬಗ್ಗೆ ಮಾತನಾಡುವುದು ಸರಿಯಲ್ಲ. ಮತ್ತೊಂದು ಸಮುದಾಯಕ್ಕೆ ದ್ವೇಷ ಬಿತ್ತಿದಂತಾಗುತ್ತದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಶಾಂತಿಯುತ ಪ್ರತಿಭಟನೆ ಮಾಡಬೇಕು ಎಂದು ಹೇಳಿದರು.
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:34 pm, Sat, 11 June 22