ಬೆಂಗಳೂರಲ್ಲಿ ಗಣೇಶೋತ್ಸವ ಬಂದೋಬಸ್ತ್​​ಗೆ ತಯಾರಿ; 3 ರೀತಿ ಪ್ರದೇಶ ಗುರುತಿಸಿರುವ ಪೊಲೀಸರು

ಬೆಂಗಳೂರು ಪೊಲೀಸರು ಸೂಕ್ಷ್ಮ, ಅತೀಸೂಕ್ಷ್ಮ ಮತ್ತು ಸಾಮಾನ್ಯ ಏರಿಯಾಗಳೆಂದು 3 ರೀತಿಯಲ್ಲಿ ಸ್ಥಳ ಗುರುತಿಸಿ ದಿನದ 24 ಗಂಟೆಯೂ ಬಂದೋಬಸ್ತ್ ಕೈಗೊಳ್ಳಲು ಸಜ್ಜಾಗಿದ್ದಾರೆ. ಮೂರು ಪಾಳಿಯಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆಗೆ ಸಿದ್ಧತೆ ನಡೆಯುತ್ತಿದೆ. ಸದಾ ಬೀಟ್ ಇರಬೇಕು ಎಂದು ಸೂಕ್ಷ್ಮ ಪ್ರದೇಶ ಏರಿಯಾಗಳ ಇನ್ಸ್‌ಪೆಕ್ಟರ್​​ಗಳಿಗೆ ಕಮಿಷನರ್ ಸೂಚನೆ ನೀಡಿದ್ದಾರೆ.

ಬೆಂಗಳೂರಲ್ಲಿ ಗಣೇಶೋತ್ಸವ ಬಂದೋಬಸ್ತ್​​ಗೆ ತಯಾರಿ; 3 ರೀತಿ ಪ್ರದೇಶ ಗುರುತಿಸಿರುವ ಪೊಲೀಸರು
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Sep 03, 2024 | 9:50 AM

ಬೆಂಗಳೂರು, ಸೆ​.03: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗಣೇಶ ಚತುರ್ಥಿಗೆ (Ganesha Chaturthi) ಕೌಂಟ್ ಡೌನ್ ಆರಂಭವಾಗಿದೆ. ಅದ್ದೂರಿಯಾಗಿ ಗಣೇಶ ಹಬ್ಬವನ್ನ ಆಚರಿಸಲು ಸಿಟಿ ಮಂದಿ ಸಜ್ಜಾಗುತ್ತಿದ್ದಾರೆ. ಇದರ ಜೊತೆಗೆ ಬೆಂಗಳೂರಲ್ಲಿ (Bengaluru) ಗಣೇಶೋತ್ಸವ ಬಂದೋಬಸ್ತ್​​ಗೆ ಪೊಲೀಸರು ತಯಾರಿ ಶುರು ಮಾಡಿದ್ದಾರೆ. ಪೊಲೀಸರು ಗಣೇಶ ಪ್ರತಿಷ್ಠಾಪನೆಗೆ 3 ರೀತಿ ಪ್ರದೇಶ ಗುರುತಿಸಿದ್ದಾರೆ. ಸೂಕ್ಷ್ಮ, ಅತೀಸೂಕ್ಷ್ಮ ಮತ್ತು ಸಾಮಾನ್ಯ ಏರಿಯಾಗಳೆಂದು 3 ರೀತಿಯಲ್ಲಿ ಸ್ಥಳ ಗುರುತಿಸಿ ದಿನದ 24 ಗಂಟೆಯೂ ಬಂದೋಬಸ್ತ್ ಕೈಗೊಳ್ಳಲು ಪೊಲೀಸರು ಸಜ್ಜಾಗಿದ್ದಾರೆ.

ಮೂರು ಪಾಳಿಯಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆಗೆ ಸಿದ್ಧತೆ ನಡೆಯುತ್ತಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುವ ಪಟ್ಟಿ ತಯಾರಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಚಾಮರಾಜಪೇಟೆ, ಜೆ.ಜೆ ನಗರ, ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ, ಎಸ್.ಜಿ. ಪಾಳ್ಯ, ವಿವೇಕನಗರ, ತಿಲಕ್ ನಗರ, ಬನಶಂಕರಿ, ಆರ್.ಟಿ. ನಗರ, ಜೆ.ಸಿ. ನಗರಗಳಲ್ಲಿ ಗಣೇಶ ಹಬ್ಬದಂದು ಕಟ್ಟೆಚ್ಚರ ವಹಿಸುವಂತೆ ಇನ್ಸ್‌ಪೆಕ್ಟರ್​ಗಳಿಗೆ ಕಮಿಷನರ್ ಸೂಚನೆ ನೀಡಿದ್ದಾರೆ.

ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಗೆ ಪಿಐಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸೂಕ್ಷ್ಮ ಪ್ರದೇಶಗಳ ಸುತ್ತಮುತ್ತ ಸಿಸಿ ಕ್ಯಾಮರಾ ಕಣ್ಗಾವಲು, ಗಣೇಶೋತ್ಸವ ಆಯೋಜಕರಿಂದ ಮಾಹಿತಿ ಪಡೆಯುವಂತೆ ಸೂಚಿಸಲಾಗಿದೆ. ಸೂಕ್ಷ್ಮ ಪ್ರದೇಶಗಳ ಮೆರವಣಿಗೆಯ ಬ್ಲೂಪ್ರಿಂಟ್ ರೆಡಿ ಮಾಡಬೇಕು. ಮೆರವಣಿಗೆಯ ಪ್ರತಿ ರಸ್ತೆಯಲ್ಲೂ ಸಿಸಿಟಿವಿ ಅಳವಡಿಕೆಗೆ ಸೂಚಿಸಲಾಗಿದೆ. ಹಬ್ಬ, ಮೆರವಣಿಗೆಯ ಪ್ರತಿಯೊಂದು ಕ್ಷಣವೂ ಸೆರೆಹಿಡಿಯುವಂತೆ ಹಾಗೂ ಏರಿಯಾಗಳಲ್ಲಿ ಪೊಲೀಸ್ ಸಿಬ್ಬಂದಿ ಸದಾ ಬೀಟ್ ಇರಬೇಕು ಎಂದು ಸೂಕ್ಷ್ಮ ಪ್ರದೇಶ ಏರಿಯಾಗಳ ಇನ್ಸ್‌ಪೆಕ್ಟರ್​​ಗಳಿಗೆ ಕಮಿಷನರ್ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: Ganesh Chaturthi 3 yogas: ಈ ಬಾರಿ ಗಣೇಶ ಚತುರ್ಥಿಗೆ ಯಾವ 3 ಮಂಗಳಕರ ಯೋಗಗಳು ರೂಪುಗೊಳ್ಳುತ್ತಿವೆ? ಇಲ್ಲಿದೆ ವಿವರ

ಹಬ್ಬಕ್ಕೆ ತರಕಾರಿ ಬೆಲೆ ಏರಿಕೆ ಶಾಕ್

ಇನ್ನು ಮತ್ತೊಂದೆಡೆ ಮಳೆ ಹೊಡೆತದ ನಡುವೆ ವಾರದಲ್ಲಿ ತರಕಾರಿ ಗಳ ಬೆಲೆ 10 ರಿಂದ‌ 20 ರೂಪಾಯಿ‌ ಹೆಚ್ಚಾಗಿದ್ದು, ಹಬ್ಬಕ್ಕೆ ದರದ ಹೊರೆ ಬೀಳ್ತಿದೆ. ಕಳೆದ ವಾರ ಕೆಜಿಗೆ 50 ರೂಪಾಯಿ ಇದ್ದ ನಾಟಿ ಬೀನ್ಸ್ ಈ ವಾರ 80ಕ್ಕೆ ಏಕೆಯಾಗಿದೆ. 15 ರೂಪಾಯಿ ಇದ್ದ ಟೊಮ್ಯಾಟೋ 25ಕ್ಕೆ ಏರಿದೆ. ಮೆಣಸಿನಕಾಯಿ 60 – 80ರೂಪಾಯಿಗೆ ಹೆಚ್ಚಾಗಿದೆ. ಶುಂಠಿ 150 ರಿಂದ 260ಕ್ಕೆ ಏರಿಕೆಯಾಗಿದೆ. 400 ರೂಪಾಯಿ ಇದ್ದ ಬೆಳ್ಳುಳ್ಳಿ 410ರೂಪಾಯಿಗೆ ಮಾರಾಟವಾಗ್ತಿದೆ. ನಾಟಿ ಬಟಾಣಿ 200 ರಿಂದ 250 ರೂಪಾಯಿಗೆ ಏರಿಕೆಯಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು