Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ವಿದ್ಯುತ್‌ ವ್ಯತ್ಯಯ, ಎಲ್ಲೆಲ್ಲಿ? ಇಲ್ಲಿದೆ ಮಾಹಿತಿ

|

Updated on: Aug 31, 2024 | 8:43 AM

ಇಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಹೂಡಿ 220 / 66 / 11 ಕೆ ವಿ ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಕೆಲ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ (BESCOM) ಅಧಿಕೃತ ಮಾಹಿತಿ ನೀಡಿದೆ.

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ವಿದ್ಯುತ್‌ ವ್ಯತ್ಯಯ, ಎಲ್ಲೆಲ್ಲಿ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಆಗಸ್ಟ್​.31: ಕ.ವಿ.ಪ್ರ.ನಿ.ನಿ ಲೈನ್‌ ದುರಸ್ತಿ/ ನಿರ್ವಹಣಾ ಕಾಮಗಾರಿ ಸಲುವಾಗಿ ಆಗಸ್ಟ್​ 31ರ ಶನಿವಾರವಾದ ಇಂದು ಕೆಲವು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ (Power Cut) ಉಂಟಾಗಲಿದೆ. ಇಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಹೂಡಿ 220 / 66 / 11 ಕೆ ವಿ ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಕೆಲ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ (BESCOM) ಅಧಿಕೃತ ಮಾಹಿತಿ ನೀಡಿದೆ.

ಎಲ್ಲೆಲ್ಲಿ ವಿದ್ಯುತ್‌ ವ್ಯತ್ಯಯ?

ಬೆಳಿಗ್ಗೆ 9 ಗಂಟೆಯಿಂದ 3 ಗಂಟೆಯವರೆಗೂ ಹೂಡಿ ಗ್ರಾಮ, ತಿಗಳರ ಪಾಳ್ಯ, ಸೀತಾರಾಮ ಪಾಳ್ಯ, ಬಸವನಗರ, ಸೊನ್ನೇನಹಳ್ಳಿ, ಎನ್‌ಜಿಇಎಫ್ ಕೈಗಾರಿಕಾ ಪ್ರದೇಶ, ಶಿವರಾಜ್ ಕರ‍್ಖಾನೆ, ಇಎಸ್ಐ ರಸ್ತೆ, ವಿಎಸ್‌ಎನ್‌ಎಲ್ ಡೇಟಾ ಸೆಂಟರ್ ಮತ್ತು ಪೂರ್ವ ಮತ್ತು ಪೂರ್ವ ಪಾರ್ಕ್‌ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಇದನ್ನೂ ಓದಿ: Karnataka Dam Water Level: ರಾಜ್ಯದ 14 ಪ್ರಮುಖ ಜಲಾಶಯಗಳಲ್ಲಿ ಒಟ್ಟಾರೆ 824.26 ಟಿಎಂಸಿ ನೀರು ಸಂಗ್ರಹ

ಶಿಡ್ಲಘಟ್ಟದಲ್ಲಿ ದಿನವಿಡೀ ವಿದ್ಯುತ್ ಕಟ್

ಇನ್ನು ಶಿಡ್ಲಘಟ್ಟ ನಗರದ ಹಲವು ಕಡೆ ಆಗಸ್ಟ್‌ 31 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೂ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಶಿಡ್ಲಘಟ್ಟ ಉಪ ಕೇಂದ್ರದಿಂದ ಹೊರ ಹೋಗುವ ಎಫ್‌ – 1 ಲೋಕಲ್‌ ಮತ್ತು ಎಫ್‌ – 12 ಅಶೋಕ ರಸ್ತೆ, 11 ಕೆವಿ ಮಾರ್ಗಗಳಾದ ಟಿ.ಬಿ.ರಸ್ತೆ, ದೇಶದಪೇಟೆ, ಉಲ್ಲೂರು ಪೇಟೆ, ಮಯೂರ ಸರ್ಕಲ್‌, ಬೂದಾಳ, ಸಿ.ಆರ್‌.ಬಡಾವಣೆ, ಕೆ.ಕೆ.ಪೇಟೆ, ಕೋಟೆ ವೃತ್ತ, ಅಶೋಕ ರಸ್ತೆ, ಕನಕ ನಗರ, ಗಾಂಧಿ ನಗರ, ತೈಭಾ ನಗರ, ಇದ್ಲೂಡು ರಸ್ತೆ, ಕೆಇಬಿ ರಸ್ತೆ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಪ್ರದೇಶಗಳಲ್ಲಿ ಮರುವಾಹಕ ಜೋಡಣೆ ಕೆಲಸ ನಿರ್ವಹಿಸುವ ಕಾರಣ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ನಗರ ಉಪ ವಿಭಾಗದ ಎಇಇ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿದ್ಯುತ್ ಸಂಬಂಧಿತ ದೂರಿಗಾಗಿ ಬೆಂಗಳೂರು ವಿದ್ಯುತ್‌ ಕಂಪನಿ ಸಹಾಯವಾಣಿ ಸಂಖ್ಯೆ ‘1912’ ಕರೆ ಮಾಡುವುದು ಅಥವಾ 58888ಗೆ ಸಂದೇಶವನ್ನು ಕಳುಹಿಸಬಹುದು ಎಂದು ಬೆಸ್ಕಾಂ ತಿಳಿಸಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ