Karnataka Dam Water Level: ರಾಜ್ಯದ 14 ಪ್ರಮುಖ ಜಲಾಶಯಗಳಲ್ಲಿ ಒಟ್ಟಾರೆ 824.26 ಟಿಎಂಸಿ ನೀರು ಸಂಗ್ರಹ

ರಾಜ್ಯದ 14 ಪ್ರಮುಖ ಜಲಾಶಯಗಳಲ್ಲಿ ಒಟ್ಟಾರೆ 895.62 ಟಿ.ಎಂ.ಸಿ ಸಾಮಾರ್ಥ್ಯವಿದ್ದು, 824.26 ಟಿ.ಎಂ.ಸಿ ನೀರು ಸಂಗ್ರಹಣೆಯಾಗಿದ್ದು ಒಟ್ಟು ಸಾಮಾರ್ಥ್ಯದ ಶೇ.92ರಷ್ಟಿದೆ. ವಿದ್ಯುತ್ ಉತ್ಪಾಧನೆ ಜಲಾಶಯಗಳಲ್ಲಿ ಶೇ.91ರಷ್ಟು, ಕಾವೇರಿ ಕಣಿವೆ 4 ಜಲಾಶಯಗಳಲ್ಲಿ ಶೇ.99ರಷ್ಟು, ಹಾಗೂ ಕೃಷ್ಣಾ ಕಣಿವೆ ವ್ಯಾಪ್ತಿ ಜಲಾಶಯಗಳಲ್ಲಿ ಶೇ.93ರಷ್ಟು ನೀರಿನ ಸಂಗ್ರಹಣೆಯಿದೆ.

Karnataka Dam Water Level: ರಾಜ್ಯದ 14 ಪ್ರಮುಖ ಜಲಾಶಯಗಳಲ್ಲಿ ಒಟ್ಟಾರೆ 824.26 ಟಿಎಂಸಿ ನೀರು ಸಂಗ್ರಹ
ತುಂಗಭದ್ರಾ ಜಲಾಶಯ
Follow us
|

Updated on: Aug 31, 2024 | 7:41 AM

ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಜಲಾಶಯಕ್ಕೆ ಒಳಹರಿವು ಹೆಚ್ಚಿದೆ. ಒಟ್ಟು 105.788 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಸದ್ಯ 94.324 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯ ಭರ್ತಿಗೆ ಕೇವಲ 10 ಟಿಎಂಸಿ ನೀರು ಅವಶ್ಯಕತೆ ಇದೆ. ಜಲಾಶಯಕ್ಕೆ 34,431 ಕ್ಯೂಸೆಕ್ ನೀರಿನ ಒಳ ಹರಿವು ಇದೆ. ಒಟ್ಟು ಹತ್ತು ಸಾವಿರ ಕ್ಯೂಸೆಕ್ ನೀರಿನ ಹೊರಹರಿವು ಇದೆ. ಮಲೆನಾಡಿನಲ್ಲಿ ಮತ್ತೆ ಮಳೆಯಾಗುವುತ್ತಿರುವುದರಿಂದ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಹಾಗಾದರೆ ತುಂಗಭದ್ರಾ ಸೇರಿದಂತೆ ರಾಜ್ಯದ 14 ಜಲಾಶಯಗಳ  (Karnataka Dam Water Level)  ನೀರಿನ ಮಟ್ಟ ವಿವರ ಇಲ್ಲಿದೆ.

ಜಲಾಶಯಗಳ ನೀರಿನ ಮಟ್ಟ
ಕರ್ನಾಟಕದ ಪ್ರಮುಖ ಜಲಾಶಯಗಳು (Dam) ಗರಿಷ್ಠ ನೀರಿನ ಮಟ್ಟ (ಮೀ) ಒಟ್ಟು ಸಾಮರ್ಥ್ಯ (ಟಿಎಂಸಿ) ಇಂದಿನ ನೀರಿನ ಮಟ್ಟ (ಟಿಎಂಸಿ) ಕಳೆದ ವರ್ಷದ ನೀರಿನ ಮಟ್ಟ (ಟಿಎಂಸಿ) ಒಳಹರಿವು (ಕ್ಯೂಸೆಕ್ಸ್) ಹೊರಹರಿವು (ಕ್ಯೂಸೆಕ್ಸ್)
ಆಲಮಟ್ಟಿ ಜಲಾಶಯ (Almatti Dam) 519.60 123.08 117.20 121.78 1,66,760 1,76,540
ತುಂಗಭದ್ರಾ ಜಲಾಶಯ (Tungabhadra Dam) 497.71 105.79 94.324 77.80 34,431 10,459
ಮಲಪ್ರಭಾ ಜಲಾಶಯ (Malaprabha Dam) 633.80 37.73 36.20 22.70 6,891 5,294
ಕೆ.ಆರ್.ಎಸ್ (KRS Dam) 38.04 49.45 48.75 24.08 14,620 9,582
ಲಿಂಗನಮಕ್ಕಿ ಜಲಾಶಯ (Linganamakki Dam) 554.44 151.75 146.08 70.65 19,414 24,843
ಕಬಿನಿ ಜಲಾಶಯ (Kabini Dam) 696.13 19.52 18.96 13.66 6,628 5,163
ಭದ್ರಾ ಜಲಾಶಯ (Bhadra Dam) 657.73 71.54 66.88 47.19 12,137 3,943
ಘಟಪ್ರಭಾ ಜಲಾಶಯ (Ghataprabha Dam) 662.91 51.00 50.34 41.07 22,470 25,320
ಹೇಮಾವತಿ ಜಲಾಶಯ (Hemavathi Dam) 890.58 37.10 37.01 25.27 11,861 12,350
ವರಾಹಿ ಜಲಾಶಯ (Varahi Dam) 594.36 31.10 23.30 9.88 2,677 0
ಹಾರಂಗಿ ಜಲಾಶಯ (Harangi Dam)​​ 871.38 8.50 8.32 7.69 2315 2,008
ಸೂಫಾ (Supa Dam) 564.00 145.33 129.94 78.42 14,287 8,200
ನಾರಾಯಣಪುರ ಜಲಾಶಯ (Narayanpura Dam) 492.25 33.31 27.76 23.75 1,84,821 1,90,394
ವಾಣಿವಿಲಾಸ ಸಾಗರ (VaniVilas Sagar Dam) 652.24 30.42 21.09 24.41 693 135

ಕಳೆದ 24 ಗಂಟೆಗಳಲ್ಲಿ ಎಲ್ಲ ಜಲಾಶಯಗಳಿಗೆ 25.1 ಟಿ.ಎಂ.ಸಿ ನೀರು ಹರಿದು ಬಂದಿದು, ವಿದ್ಯುತ್ ಉತ್ಪಾಧನಾ ಜಲಾಶಯಗಳಿಗೆ 3.16 ಟಿಎಂಸಿ, ಕಾವೇರಿ ಕಣಿವೆ ಜಲಾಶಯಗಳಿಗೆ 2.3 ಟಿಎಂಸಿ ಹಾಗೂ ಕೃಷ್ಣ ಕಣಿವೆ ಜಲಾಶಯಗಳಿಗೆ 19.6 ಟಿಎಂಸಿ ಒಳಹರಿವು ಕಂಡುಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ