ಗೈಡ್ ಲೈನ್ ಅಳವಡಿಕೆಗೆ ಪಿಜಿಗಳಿಗೆ ಡೆಡ್ ಲೈನ್ ಕೊಟ್ಟ ಪಾಲಿಕೆ, ಸೆಪ್ಟೆಂಬರ್ 15 ರೊಳಗೆ ರಿಜಿಸ್ಟರ್ ಆಗದಿದ್ರೆ ಪಿಜಿ ಬಂದ್

ರಾಜಧಾನಿಯ ಪಿಜಿಗಳಿಗೆ ಕೆಲ ಗೈಡ್ ಲೈನ್ ಜಾರಿಮಾಡಿದ್ದ ಬಿಬಿಎಂಪಿ, ಇದೀಗ ಗೈಡ್ ಲೈನ್ ಅಳವಡಿಸಿಕೊಳ್ಳದ ಪಿಜಿಗಳ ವಿರುದ್ಧ ಸಮರ ಸಾರೋಕೆ ಸಜ್ಜಾಗಿದೆ. ಗೈಡ್ ಲೈನ್ ಅಳವಡಿಸದೇ ಕಾಲಹರಣ ಮಾಡ್ತಿರೋ ಪಿಜಿಗಳ ಜೊತೆಗೆ ಸಿಲಿಕಾನ್ ಸಿಟಿಯಲ್ಲಿ ಅನಧಿಕೃತವಾಗಿ ತಲೆ ಎತ್ತಿರೋ ಪಿಜಿಗಳಿಗೂ ಚಾಟಿ ಬೀಸೋಕೆ ಪಾಲಿಕೆ ಪ್ಲಾನ್ ಮಾಡಿದೆ. ರಾಜಧಾನಿಯ ಪಿಜಿಗಳ ಮೇಲೆ ನಿಗಾ ಇಟ್ಟಿರೋ ಪಾಲಿಕೆ, ಇದೀಗ ಅನಧಿಕೃತ ಪಿಜಿಗಳಿಗೆ ಶಾಕ್ ನೀಡೋಕೆ ತಯಾರಿ ನಡೆಸಿದೆ.

ಗೈಡ್ ಲೈನ್ ಅಳವಡಿಕೆಗೆ ಪಿಜಿಗಳಿಗೆ ಡೆಡ್ ಲೈನ್ ಕೊಟ್ಟ ಪಾಲಿಕೆ, ಸೆಪ್ಟೆಂಬರ್ 15 ರೊಳಗೆ ರಿಜಿಸ್ಟರ್ ಆಗದಿದ್ರೆ ಪಿಜಿ ಬಂದ್
ಸಾಂದರ್ಭಿಕ ಚಿತ್ರ
Follow us
ಶಾಂತಮೂರ್ತಿ
| Updated By: ಆಯೇಷಾ ಬಾನು

Updated on: Aug 31, 2024 | 12:16 PM

ಬೆಂಗಳೂರು, ಆಗಸ್ಟ್​.31: ಕೋರಮಂಗಲದ ಪಿಜಿಯಲ್ಲಿ ಯುವತಿ ಕೊಲೆಯಾದ ಬಳಿಕ ಬಿಬಿಎಂಪಿ (BBMP) ಒಂದಷ್ಟು ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿತ್ತು. ಬೆಂಗಳೂರಿನ (Bengaluru) ಪಿಜಿಗಳಲ್ಲಿ ಆ ಗೈಡ್ ಲೈನ್ ಅಳವಡಿಸಲು ಸೂಚನೆ ಕೂಡ ನೀಡಿತ್ತು. ಸೂಚನೆ ಕೊಟ್ಟರೂ ಗೈಡ್ ಲೈನ್ ಪಾಲಿಸದ ಪಿಜಿಗಳಿಗೆ ಇದೀಗ ಪಾಲಿಕೆ ಬಿಸಿ ಮುಟ್ಟಿಸೋಕೆ ಸಜ್ಜಾಗಿದೆ. ಗೈಡ್ ಲೈನ್ ಅಳವಡಿಕೆಗೆ ಸೆಪ್ಟೆಂಬರ್ 15ರ ತನಕ ಗೈಡ್ ಲೈನ್ ನೀಡಿರೋ ಪಾಲಿಕೆ, ನಿಯಮ ಪಾಲಿಸದಿದ್ರೆ ಪಿಜಿ ಬಂದ್ ಮಾಡೋಕೆ ಸಜ್ಜಾಗಿದೆ. ಪಾಲಿಕೆ ನೀಡಿದ್ದ ಗೈಡ್​​ ಲೈನ್ಸ್​ ಪಾಲನೆಗೆ ಪಿಜಿ ಮಾಲೀಕರು ಅಸಡ್ಡೆ ತೋರಿದ್ದಾರೆ. ಈ ಹಿನ್ನೆಲೆ ಸೆಪ್ಟೆಂಬರ್​​​ 15 ಗಡುವು ನೀಡಿರೋ ಪಾಲಿಕೆ ಖಡಕ್ ಎಚ್ಚರಿಕೆ ನೀಡಿದೆ.

ಸದ್ಯ ಅನಧಿಕೃತ ಪಿಜಿಗಳಿಗೂ ಕಡಿವಾಣ ಹಾಕಲು ಪ್ಲಾನ್ ಮಾಡಿರೋ ಪಾಲಿಕೆ, ಗೈಡ್ ಲೈನ್ ಜೊತೆಗೆ ಲೈಸನ್ಸ್​ ಹಾಗೂ ಭದ್ರತೆ ಇಲ್ಲದೆ ನಗರದಲ್ಲಿ 25 ಸಾವಿರಕ್ಕೂ ಅಧಿಕ ಪಿಜಿಗಳಿವೆ ಅಂತಾ ಪಾಲಿಕೆ ಪತ್ತೆ ಹಚ್ಚಿದೆ. ಇದರಲ್ಲಿ ಬೊಮ್ಮನಹಳ್ಳಿ, ಮಹಾದೇವಪುರ ಭಾಗದಲ್ಲೇ ಅತಿ ಹೆಚ್ಚಿದ್ದು, ಪಾಲಿಕೆಯಿಂದ ಪರವಾನಗಿ ಪಡೆದು ಕಾರ್ಯಾಚರಣೆ ಮಾಡುತ್ತಿರುವ ಪಿಜಿಗಳ ಸಂಖ್ಯೆ ಕೇವಲ 2 ಸಾವಿರ ಮಾತ್ರ ಇದೆ. ಇತ್ತ ಪಾಲಿಕೆ ನಡೆ ಬಗ್ಗೆ ಪ್ರತಿಕ್ರಿಯಿಸಿರೋ ಪಿಜಿ ಮಾಲೀಕರ ಸಂಘ, ಎಲ್ಲಾ ನಿಯಮಗಳನ್ನೂ ಈಗಾಗಲೇ ಅಧಿಕೃತ ಪಿಜಿ ಮಾಲೀಕರು ಅಳವಡಿಸಿದ್ದಾರೆ. ಆದ್ರೆ 70 ಚದರ ಅಡಿಯನ್ನ ಒಬ್ಬ ವ್ಯಕ್ತಿಗೆ ಮೀಸಲಿಡಬೇಕು ಎನ್ನುವುದು ಅವೈಜ್ಞಾನಿಕ ಎಂದಿದ್ದಾರೆ.

ಇನ್ನು ಪಿಜಿಗಳಲ್ಲಿ ಭದ್ರತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಪಾಲಿಕೆ ಈಗಾಗಲೇ ಕೆಲ ಗೈಡ್ ಲೈನ್ ಹೊರಡಿಸಿದೆ.

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದಲ್ಲಿ ಶೇ 40ಕ್ಕೂ ಹೆಚ್ಚು ಕಮಿಷನ್: ‘ಕೈ’ ನಾಯಕನಿಂದಲೇ ಗಂಭೀರ ಆರೋಪ

ಪಾಲಿಕೆ ಹೊರಡಿಸಿರೋ ಗೈಡ್ ಲೈನ್​ಗಳೇನು?

  • ಪೇಯಿಂಗ್ ಗೆಸ್ಟ್‌ಗಳಲ್ಲಿನ ಎಲ್ಲಾ ಗೇಟ್ ಗಳಲ್ಲಿ ಸಿಸಿಟಿವಿ ಕಡ್ಡಾಯ
  • ಪ್ರತಿ CCtv ಕ್ಯಾಮೆರಾದ ವಿಡಿಯೋ ಫೋಟೇಜ್‌ಗಳನ್ನ 90 ದಿನಗಳವರೆಗೆ ಸೇವ್ ಮಾಡಬೇಕು
  • ಪ್ರತಿಯೊಬ್ಬ ನಿವಾಸಿಗೆ ವಾಸಕ್ಕೆ ತಲಾ 70 ಚದರ ಅಡಿ ನೀಡಬೇಕು
  • ಸ್ವಚ್ಛ ಹಾಗೂ ನೈರ್ಮಲ್ಯತೆ ಹೊಂದಿರುವ ಸ್ನಾನಗೃಹಗಳು ಮತ್ತು ಶೌಚಾಲಯ
  • ಪಿಜಿಗಳಲ್ಲಿ ಕಡ್ಡಾಯವಾಗಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ಇರಬೇಕು
  • ಪ್ರತಿಯೊಬ್ಬ నిವಾಸಿಗೆ 135 LPCD ನೀರಿನ ಲಭ್ಯತೆ ಖಚಿತ ಪಡಿಸಿಕೊಳ್ಳಬೇಕು
  • ಪಿಜಿಗಳ ಅಡುಗೆಮನೆಗಳಿಗೆ ಕಡ್ಡಾಯವಾಗಿ FSSAI ಪರವಾನಿಗೆ ಪಡೆದಿರಬೇಕು
  • ಕನಿಷ್ಟ ಓರ್ವ ಭದ್ರತಾ ಸಿಬ್ಬಂದಿಯನ್ನು ದಿನದ 24 ಗಂಟೆಯೂ ಸೆಕ್ಯೂರಿಟಿಗೆ ನಿಯೋಜಿಸಬೇಕು
  • ಅಗ್ನಿ ದುರಂತ ನಡೆಯದಂತೆ ಪಿಜಿ ಮಾಲೀಕರು ಮುನ್ನಚರಿಕೆ ಕ್ರಮ ವಹಿಸಬೇಕು

ಒಟ್ಟಿನಲ್ಲಿ ನಿಯಂತ್ರಣ ಮೀರಿ ನಗರದಲ್ಲಿ ತಲೆ ಎತ್ತಿರುವ ಪಿಜಿಗಳ ಆಟೋಟಪಕ್ಕೆ ಬ್ರೇಕ್ ಹಾಕಲು ಮುಂದಾಗ್ತಿದೆ. ಆದ್ರೆ ಪಾಲಿಕೆಯ ನಿರ್ಧಾರ ಪಿಜಿ ಮಾಲೀಕರ ನಿದ್ದೆಗೆಡಿಸಿದೆ. ಈ ಬಾರಿಯಾದರೂ ಪಾಲಿಕೆ ನುಡಿದಂತೆ ನಡೆಯುತ್ತಾ ಅನಧಿಕೃತ ಪಿಜಿಗಳಿಗೆ ಬೀಗ ಜಡಿಯುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ