ಬೆಂಗಳೂರು ಪವರ್​ ಕಟ್: ಇಂದಿನಿಂದ 3 ದಿನ ಹಲವೆಡೆ ವಿದ್ಯುತ್ ವ್ಯತ್ಯಯ, ಇಲ್ಲಿದೆ ವಿವರ

| Updated By: Ganapathi Sharma

Updated on: Dec 19, 2023 | 11:22 AM

Bengaluru Power Cut: ಬೆಂಗಳೂರು ನಗರದ ಹಲವೆಡೆ ಇಂದಿನಿಂದ ಮೂರು ದಿನ ವಿದ್ಯುತ್ ವ್ಯತ್ಯಯವಾಗಲಿದೆ. ಬೆಸ್ಕಾಂ ದುರಸ್ತಿ ಕಾರ್ಯಾಚರಣೆ ಕಾರಣ ಪವರ್ ಕಟ್ ಇರಲಿದ್ದು, ಯಾವ ಪ್ರದೇಶದಲ್ಲಿ ಯಾವಗ ಪವರ್ ಕಟ್ ಎಂಬ ವಿವರ ಇಲ್ಲಿದೆ.

ಬೆಂಗಳೂರು ಪವರ್​ ಕಟ್: ಇಂದಿನಿಂದ 3 ದಿನ ಹಲವೆಡೆ ವಿದ್ಯುತ್ ವ್ಯತ್ಯಯ, ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಡಿಸೆಂಬರ್ 19: ಬೆಂಗಳೂರು ನಗರದ (Bengaluru) ಹಲವೆಡೆ ಇಂದಿನಿಂದ (ಡಿಸೆಂಬರ್ 19) ಮೂರು ದಿನ ಪವರ್ ಕಟ್ (Power Cut) ಇರಲಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ (KPTCL) ನಿರ್ವಹಣಾ ಕಾರ್ಯದಿಂದಾಗಿ ಮಂಗಳವಾರದಿಂದ ಗುರುವಾರದವರೆಗೆ ಹಲವೆಡೆ ವಿದ್ಯುತ್ ಕಡಿತವಾಗಲಿದೆ.

ಲೈನ್ ನಿರ್ವಹಣೆ, ಡಿಟಿಸಿ ರಚನೆ ನಿರ್ವಹಣೆ, ಜಂಗಲ್ ಕ್ಲಿಯರೆನ್ಸ್, ನವೀಕರಣ, ಆಧುನೀಕರಣ, ರಿಂಗ್ ಮುಖ್ಯ ಘಟಕ (ಆರ್‌ಎಂಯು) ನಿರ್ವಹಣೆ, ಮರಗಳ ರೆಂಭೆ ಕೊಂಬೆ ಕತ್ತರಿಸುವ ಕಾರ್ಯ, ಜಲಸಿರಿ 24×7 ನೀರು ಸರಬರಾಜು ಕೆಲಸ, ಓವರ್‌ಹೆಡ್‌ನಿಂದ ಅಂಡರ್​ಗ್ರೌಂಡ್ ಕೇಬಲ್‌ಗಳನ್ನು ಬದಲಾಯಿಸುವುದು ಮತ್ತು ಕೇಬಲ್ ಹಾನಿ ಸರಿಪಡಿಸುವಿಕೆ ಇತ್ಯಾದಿಗಳನ್ನು ಒಳಗೊಂಡಿದೆ.

ವಿದ್ಯುತ್ ಕಡಿತ ಬೆಳಿಗ್ಗೆ 10 ರಿಂದ ಸಂಜೆ 5 ರ ನಡುವೆ ಇರಲಿದೆ.

ಡಿಸೆಂಬರ್ 19ರ (ಮಂಗಳವಾರ) ಪವರ್ ಕಟ್ ವಿವರ

ಸಂಗಾಪುರ, ಕೋಳಿಹಳ್ಳಿ, ನಂದಿಹಳ್ಳಿ, ಪೆಮ್ಮನಹಳ್ಳಿ, ಬಂಡಿಹಳ್ಳಿ, ಕೊಂಡದಹಳ್ಳಿ, ಚಿಕ್ಕೋಡ, ಹಿರೇಹಳ್ಳಿ ಕೈಗಾರಿಕಾ ಪ್ರದೇಶ, ಹಿರೇಹಳ್ಳಿ, ಬಿಎಂ ಪಾಳ್ಯ, ಕರೆಕಲ್ಲು ಪಾಳ್ಯ, ಬಸವೇಶ್ವರ ಬವನ ಪಾಳ್ಯ, ಬಸವಪಟ್ಟಣ, ಎಸ್.ಎಸ್.ಮಠ, ಚಿಕ್ಕಹಳ್ಳಿ, ಸಣ್ಣಪ್ಪನ ಪಾಳ್ಯ, ಕೋಳಿಹಳ್ಳಿ, ಕೆಂಪ್ ರಸ್ತೆ, ಬೆನ್ಸನ್ ಟೌನ್, ಸ್ಪೆನ್ಸರ್ ರಸ್ತೆ, ಎಸ್.ಜಿ.ರಸ್ತೆ, ಆರ್.ಎಂ.ಝಡ್. ಮಿಲೇನಿಯಾ, ಬಿ & ಎಲ್‌ಸಿ ಆಸ್ಪತ್ರೆ, ಚಿಕ್ಕಬಜಾರ್ ರಸ್ತೆ, ಜಿನೀವಾ ಹೌಸ್, ವಿಧಾನಸೌಧ, ಗಣೇಶ ದೇವಸ್ಥಾನ ಆರ್‌ಎಂಯು, ಮಿಲ್ಲರ್ ರಸ್ತೆ, ಜಯಮಹಲ್, ಎಂಕೆ ಸ್ಟ್ರೀಟ್, ಕನ್ನಿಂಗ್‌ಹ್ಯಾಮ್ ರಸ್ತೆ, ಮಂಗೇನಹಳ್ಳಿ, ಭೀಮನಾರೆ, ತಣಿಗೆರೆ, ಉಪ್ಪನಾಯಕನಹಳ್ಳಿ, ಮರಡಿ, ಕಾಕನೂರು, ಸಂತೆಬೆನ್ನೂರು, ಕುಡ್ದೇರಳಿಕಟ್ಟೆ, ಶಿವಕುಳೇನೂರು, ತಿಮ್ಮಯ್ಯ ರಸ್ತೆ, ಟಾಸ್ಕರ್ ಟೌನ್, ಪಿಜಿ ಹಳ್ಳಿ, ಹೈನ್ಸ್ ರಸ್ತೆ, ಚಂದ್ರಯ್ಯ, ಮುನೇಶ್ವರ ನಗರ, ಶಿವಾಜಿ ನಗರ, ಹಿರೇಕೋಗಲೂರು, ಸೋಮನಹಳ್ಳಿ, ಬೆಳ್ಳಿಗನೂಡು, ಗೊಲ್ಲರಹಳ್ಳಿ, ದೊಡ್ಡಮಲ್ಲಾಪುರ, ಚಿಕ್ಕಕೋಗಲ್ಲು ಮತ್ತು ಗೆದ್ದಲಹಟ್ಟಿ ವ್ಯಾಪ್ತಿಯಲ್ಲಿ ಇಂದು (ಮಂಗಳವಾರ) ಪವರ್ ಕಟ್ ಇರಲಿದೆ.

ನಾಳೆ (ಡಿಸೆಂಬರ್ 20 ಬುಧವಾರ) ಎಲ್ಲೆಲ್ಲಿ ಪವರ್ ಕಟ್?

ಸಿದ್ದವೀರಪ್ಪ ಬಡವಣೆ, ಕುವೆಂಪು ನಗರ, ಮಾವಿನ ತೋಪು, ಲಕ್ಷ್ಮಿ ಫ್ಲೋರ್ ಮಿಲ್, ಎಸ್‌ಎಸ್ ಲೇಔಟ್ ಎ ಬ್ಲಾಕ್, ಬಸವನಗುಡಿ, ಅಂಗವಿಕಲ ಆಶಾಕಿರಣ ಟ್ರಸ್ಟ್, ಎಸ್‌ಎಸ್ ಮಾಲ್, ಗಾಜಿನ ಮನೆ ಪ್ರದೇಶ, ಶಾಮನೂರು ರಸ್ತೆ, ನಂದಿಹಳ್ಳಿ, ಬಹದ್ದೂರ್ಘಟ್ಟ, GH – ಪಾರ್ಕ್, ಗ್ಲೋಬಲ್ ಮಾಲ್, ಶೋಭಾ ಇಂದ್ರಪ್ರಸ್ಥ ಅಪಾರ್ಟ್‌ಮೆಂಟ್, ಓಕಳಿಪುರಂ, ಬೇವಿನಹಳ್ಳಿ, ಮತ್ತು ಕೋಗುಂಡೆ ಪ್ರದೇಶಗಳಲ್ಲಿ ಬುಧವಾರ ಪವರ್ ಕಟ್ ಇರಲಿದೆ.

ಇದನ್ನೂ ಓದಿ: ಹುಲಿ ಉಗುರು ಮರಳಿಸಲು ಜನರಿಗೆ ಮತ್ತೊಂದು ಅವಕಾಶ ನೀಡಲು ಸರ್ಕಾರ ಚಿಂತನೆ

ಡಿಸೆಂಬರ್ 21 ರಂದು (ಗುರುವಾರ) ಎಲ್ಲೆಲ್ಲಿ ಪವರ್ ಕಟ್?

ಯುನಿಕ್ಸ್ ಕಾಲೋನಿ, ಇಂದಿರಾ ನಗರ, ಜಯನಗರ, ಹೊಂಡಾಡ ಸರ್ಕಲ್, ಭೋವಿ ಕಾಲೋನಿ, ಮಹಾಗಣಪತಿ ನಗರ, ಪುಷ್ಪಾಂಜಲಿ ಅಪಾರ್ಟ್‌ಮೆಂಟ್, ಶಿವನಹಳ್ಳಿ ಪಾರ್ಕ್, ಟೊಯೋಟಾ ಶೋ ರೂಂ, ಎಸ್ಟೀಮ್ ಕ್ಲಾಸಿಕ್ ಅಪಾರ್ಟ್‌ಮೆಂಟ್, ಮೌನೇಶ್ವರ ಬಡಾವಣೆ, ಆದರ್ಶ ನಗರ, ಆದರ್ಶ ಲೇಔಟ್, ಮಂಜುನಾಥ ನಗರ, 3ನೇ ಹಂತ 1ನೇ ಬ್ಲಾಕ್, ಜಾಲಿ ನಗರ, ಶಿವಾಜಿ ನಗರ, ಮಂಜುನಾಥ ನಗರ, ತಿಮ್ಮಯ್ಯ ರಸ್ತೆ, ಲುಮೋಸ್ ಅಪಾರ್ಟ್‌ಮೆಂಟ್, ಐಗೂರು, ಲಿಂಗದಹಳ್ಳಿ, ಎಂ.ಬಿ.ಕೇರಿ, ಚಲುವಾದಿ ಕೇರಿ ಮತ್ತು ಒಡ್ಡನಹಳ್ಳಿಯಲ್ಲಿ ಗುರುವಾರ ಪವರ್​ಕಟ್ ಇರಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ