ಟಿವಿ9ನ ಕಿರಣ್​ ಸೇರಿದಂತೆ 29 ಮಂದಿಗೆ ಬೆಂಗಳೂರು ಪ್ರೆಸ್‌ಕ್ಲಬ್ ವಾರ್ಷಿಕ ಪ್ರಶಸ್ತಿ, ಡಿಕೆಶಿ ʼವರ್ಷದ ವ್ಯಕ್ತಿʼ

| Updated By: ರಮೇಶ್ ಬಿ. ಜವಳಗೇರಾ

Updated on: Dec 26, 2023 | 6:43 PM

Bengaluru press club annual award: ಬೆಂಗಳೂರು ಪ್ರೆಸ್‌ ಕ್ಲಬ್ 023ನೇ ಸಾಲಿನ ಪ್ರತಿಷ್ಠಿತ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಟಿವಿ9ನ ಕ್ರೈಂ ವಿಭಾಗದ ಮುಖ್ಯ ವರದಿಗಾರ ಹೆಚ್​​.ವಿ.ಕಿರಣ್​ ಅವರನ್ನು ಸೇರಿದಂತೆ 29 ಪರ್ತಕರ್ತರು ಪ್ರೆಸ್‌ಕ್ಲಬ್ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇನ್ನು ರಾಜಕಾರಣಿಗಳಲ್ಲಿ ಡಿಕೆ ಶಿವಕುಮಾರ್, ಶಾಮನೂರು ಶಿವಶಂಕ್ರಪ್ಪ ಹಾಗೂ ಸಂತೋಷ್ ಲಾಡ್​ ಸಹ ವಿವಿಧ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಟಿವಿ9ನ ಕಿರಣ್​ ಸೇರಿದಂತೆ 29 ಮಂದಿಗೆ ಬೆಂಗಳೂರು ಪ್ರೆಸ್‌ಕ್ಲಬ್ ವಾರ್ಷಿಕ ಪ್ರಶಸ್ತಿ, ಡಿಕೆಶಿ ʼವರ್ಷದ ವ್ಯಕ್ತಿʼ
ಹೆಚ್​​.ವಿ.ಕಿರಣ್, ಡಿಕೆ ಶಿವಕುಮಾರ್
Follow us on

ಬೆಂಗಳೂರು, (ಡಿಸೆಂಬರ್ 26): ಪ್ರೆಸ್‌ ಕ್ಲಬ್ ಆಫ್ ಬೆಂಗಳೂರು  2023ನೇ ಸಾಲಿನ ಪ್ರತಿಷ್ಠಿತ ವಾರ್ಷಿಕ ಪ್ರಶಸ್ತಿಗಳನ್ನು (Bengaluru Press Club Award) ಪ್ರಕಟಿಸಿದ್ದು, ಮಾಧ್ಯಮ ಕ್ಷೇತ್ರದಲ್ಲಿ ಅಪ್ರತಿಮ ಸೇವೆ ಸಲ್ಲಿಸಿರುವ 29 ಪರ್ತಕರ್ತರಿಗೆ ಪ್ರೆಸ್‌ಕ್ಲಬ್ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಟಿವಿ9ನ ಕ್ರೈಂ ವಿಭಾಗದ ಮುಖ್ಯ ವರದಿಗಾರ ಹೆಚ್​​.ವಿ.ಕಿರಣ್​ ಅವರು ಬೆಂಗಳೂರು ಪ್ರೆಸ್​ಕ್ಲಬ್ ಕೊಡಮಾಡುವ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇನ್ನು ಪ್ರೆಸ್‌ಕ್ಲಬ್ ʼವರ್ಷದ ವ್ಯಕ್ತಿ ಪ್ರಶಸ್ತಿʼಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಪ್ರೆಸ್‌ಕ್ಲಬ್ ವಿಶೇಷ ಪ್ರಶಸ್ತಿಗೆ (Press Club Awards) ಹಿರಿಯ ಕಾಂಗ್ರೆಸ್‌ ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸಾರಥ್ಯವಹಿಸಿ ಪಕ್ಷ ಅಧಿಕಾರ ಸೂತ್ರ ಹಿಡಿಯಲು ಕಾರಣವಾದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ವರ್ಷದ ವ್ಯಕ್ತಿ ಪ್ರಶಸ್ತಿಗೆ ಪ್ರೆಸ್‌ಕ್ಲಬ್ ಆಯ್ಕೆ ಮಾಡಿದೆ. ಅದೇ ರೀತಿ ರಾಜಕೀಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗೆ ಹಿರಿಯ ರಾಜಕಾರಣಿ, ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನು ಪ್ರೆಸ್‌ಕ್ಲಬ್ ವಿಶೇಷ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ,

ಪತ್ರಿಕಾ ವಿತರಕರಿಗೆ ಅಪಘಾತವಿಮೆ ಯೋಜನೆ ಪ್ರಕಟಿಸಿದ ಕಾರ್ಮಿಕ ಸಚಿವ ಸಂತೊಷ್ ಲಾಡ್ ಹಾಗೂ ಏಷ್ಯಾ ಬ್ಯಾಸ್ಕೇಟ್ ಬಾಲ್ ಫೆಡರೇಷನ್ ಅಧ್ಯಕ್ಷರಾಗಿ ಆಯ್ಕೆಗೊಂಡ ಮೊದಲ ಕನ್ನಡಿಗ ಡಾ. ಕೆ. ಗೋವಿಂದರಾಜು ಅವರನ್ನು ಪ್ರೆಸ್‌ಕ್ಲಬ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರೆಸ್‌ಕ್ಲಬ್ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಯಾದವರು

ಕಿರಣ್ ಎಚ್.ವಿ (ಟಿವಿ9), ಸದಾಶಿವ ಶೆಣೈ. ಕೆ, ಆರ್. ಶಂಕರ್,  ಡಾ. ಕೂಡ್ಲಿ ಗುರುರಾಜ್, ಕೆ.ಕೆ ಮೂರ್ತಿ (ಕಂ.ಕ ಮೂರ್ತಿ), ನಾಗರಾಜ. ಎಂ, ರೂಪಾ ಆರ್. ರಾವ್, ಸತೀಶ್‌ಕುಮಾರ್ ಬಿ.ಎಸ್,  ರಾಕೇಶ್ ಪ್ರಕಾಶ್ ,
ರಮೇಶ್ ಬಿ.ಎನ್ (ಅಭಿಮನ್ಯು),  ಚನ್ನಕೃಷ್ಣ ಪಿ.ಕೆ, ವಿಜಯ್‌ಕುಮಾರ್ ಮಲಗಿಹಾಳ್,  ಮನೋಜ್‌ಕುಮಾರ್, ಮುತ್ತು. ಪಿ,  ಶ್ರೀಕಂಠ ಶರ್ಮ. ಆರ್,  ಸಿದ್ದೇಶ್‌ಕುಮಾರ್ ಹೆಚ್.ಪಿ, ಅಫ್ಶಾನ್ ಯಾಸ್ಮಿನ್,  ಚಂದ್ರಶೇಖರ್. ಎಂ,  ಭಾಸ್ಕರ್ ಕೆ.ಎಸ್,  ಸುಭಾಷ್ ಹೂಗಾರ್,  ಪ್ರಸನ್ನಕುಮಾರ್ ಲೂಯಿಸ್,
ಶಂಕರೇಗೌಡ ಹೆಚ್.ಡಿ, ಜನಾರ್ಧನಾಚಾರಿ ಕೆ.ಎಸ್,  ಲಿಂಗರಾಜು ಡಿ. ನೊಣವಿನಕೆರೆ,  ಮೋಹನ್‌ರಾವ್ ಸಾವಂತ್. ಜಿ,  ಅನಂತರಾಮು ಸಂಕ್ಲಾಪುರ್. ಎಲ್, ಕೌಶಿಕ್. ಆರ್, ಲಕ್ಷ್ಮಿ ಸಾಗರ ಸ್ವಾಮಿಗೌಡ, ಚಿದಾನಂದ ಪಟೇಲ್.

ಡಿಸೆಂಬರ್ 31 ರಂದು ಪ್ರಶಸ್ತಿ ಪ್ರದಾನ

ಡಿಸೆಂಬರ್ 31 ರಂದು ಬೆಳಗ್ಗೆ 11:30ಕ್ಕೆ ಪ್ರೆಸ್‌ಕ್ಲಬ್ ಆವರಣದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದು, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವಸತಿ ಸಚಿವ ಜಮೀರ್ ಅಹಮದ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

Published On - 6:36 pm, Tue, 26 December 23