ಯುಗಾದಿ ಹಬ್ಬಕ್ಕೆ ಊರಿಗೆ ಹೋಗೋರಿಗೆ ಶಾಕ್; ಖಾಸಗಿ ಬಸ್​ಗಳಲ್ಲಿ ದುಪ್ಪಟ್ಟು ಟಿಕೆಟ್ ರೇಟ್, ದುಪ್ಪಟ್ಟು ಹಣ ಪೀಕಿದ್ರೆ ದಂಡ ಫಿಕ್ಸ್

ಪ್ರತಿ ಖಾಸಗಿ ಬಸ್ ನಿಲ್ದಾಣದಲ್ಲೂ ಸಾರಿಗೆ ಇಲಾಖೆಯಿಂದ ಸ್ಕ್ವಾಡ್​ಗಳ ನೇಮಕ ಮಾಡಲಾಗ್ತಿದೆ.‌ ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ‌ರೇಸ್ ಕೋರ್ಸ್, ಕಲಾಸಿಪಾಳ್ಯ, ದೇವನಹಳ್ಳಿ, ‌ಸಿಲ್ಕ್ ಬೋರ್ಡ್, ಹೊಸೂರ್ ರೋಡ್, ಹೊಸಕೋಟೆ, ಗೊರಗುಂಟೆಪಾಳ್ಯ ಸೇರಿ ಪ್ರಮುಖ ನಿಲ್ದಾಣಗಳಲ್ಲಿ ಅಧಿಕಾರಿಗಳು ಇರಲಿದ್ದಾರೆ.

ಯುಗಾದಿ ಹಬ್ಬಕ್ಕೆ ಊರಿಗೆ ಹೋಗೋರಿಗೆ ಶಾಕ್; ಖಾಸಗಿ ಬಸ್​ಗಳಲ್ಲಿ ದುಪ್ಪಟ್ಟು ಟಿಕೆಟ್ ರೇಟ್, ದುಪ್ಪಟ್ಟು ಹಣ ಪೀಕಿದ್ರೆ ದಂಡ ಫಿಕ್ಸ್
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Mar 30, 2022 | 10:37 PM

ಬೆಂಗಳೂರು: ಈ ಹಬ್ಬಗಳು ಬಂದ್ರೆ ಸಾಕು ಖಾಸಗಿ ಬಸ್ಸುಗಳು ಮನಬಂದಂತೆ ಬಸ್ ಚಾರ್ಚ್ ವಿಧಿಸುವುದಲ್ಲದೇ, ಸೀಟ್ ಕೆಪಾಸಿಟಿ ಮೀರಿಯು ಜನರು ಕೂರಿಸುಸ್ತಾರೆ.‌ ಹೀಗಾಗಿ ಇವರನ್ನ ಕಂಟ್ರೋಲ್ ಮಾಡುವ ಸಲುವಾಗಿಯೇ ಸಾರಿಗೆ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಬೇರೆ ಬೇರೆ ಜಿಲ್ಲೆಗಳಿಂದ ಬೆಂಗಳೂರಿಗೆ ಬಂದು ಬದುಕುಕಟ್ಟಿಕೊಂಡ ಎಷ್ಟೋ ಜನ ಹಬ್ಬ ಹರಿದಿನ ಬಂತಂದ್ರೆ ಸಾಕು ಊರ ಕಡೆ ಮುಖ ಮಾಡ್ತಾರೆ. ಆದ್ರೆ ಇದನ್ನೇ ಬಂಡವಾಳ ಮಾಡಿಕೊಂಡಿರೋ ಖಾಸಗಿ ಬಸ್ ಮಾಲೀಕರು ಮನಬಂದಂತೆ ಟಿಕೆಟ್ ದರ ನಿಗದಿ ಮಾಡ್ತಿದ್ದಾರೆ. ಹೀಗಾಗಿ ಗ್ರಾಹಕರಿಗೆ ತೊಂದರೆ ಆಗಬಾರ್ದು ಅಂತ ಸಾರಿಗೆ ಇಲಾಖೆ ಹೊಸ ಪ್ಲ್ಯಾನ್ ಮಾಡಿದೆ.

ಪ್ರತಿ ಖಾಸಗಿ ಬಸ್ ನಿಲ್ದಾಣದಲ್ಲೂ ಸಾರಿಗೆ ಇಲಾಖೆಯಿಂದ ಸ್ಕ್ವಾಡ್​ಗಳ ನೇಮಕ ಮಾಡಲಾಗ್ತಿದೆ.‌ ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ‌ರೇಸ್ ಕೋರ್ಸ್, ಕಲಾಸಿಪಾಳ್ಯ, ದೇವನಹಳ್ಳಿ, ‌ಸಿಲ್ಕ್ ಬೋರ್ಡ್, ಹೊಸೂರ್ ರೋಡ್, ಹೊಸಕೋಟೆ, ಗೊರಗುಂಟೆಪಾಳ್ಯ ಸೇರಿ ಪ್ರಮುಖ ನಿಲ್ದಾಣಗಳಲ್ಲಿ ಅಧಿಕಾರಿಗಳು ಇರಲಿದ್ದಾರೆ. ಸೀಟ್ ಲಿಮಿಟ್​ನಷ್ಟೇ ಪ್ರಯಾಣಿಕರು ಇಲ್ಲದೇ ಇದ್ರೆ, ಲಗೇಜ್ ಸ್ಟ್ಯಾಂಡ್​ಗಳಲ್ಲಿ ಪ್ರಯಾಣಿಕರನ್ನ ಕೂರಿಸಿದ್ರೆ 1000 ದಿಂದ 5000 ರೂಪಾಯಿಗಳವರೆಗೆ ತನಕ ದಂಡ ವಿಧಿಸಲು ಸಾರಿಗೆ ಇಲಾಖೆ ಸಜ್ಜಾಗಿದೆ.

ಇನ್ನು, ಈಗಾಗಲೇ ಹಬ್ಬಗಳಿಗೆ ಊರಿಗೆ ಹೋಗಲು ಪ್ರಯಾಣಿಕರು ಟಿಕೆಟ್​ಗಳನ್ನ ಬುಕ್ ಮಾಡಿಕೊಂಡಿದ್ದು, ಅದ್ರಲ್ಲಿ ಟಿಕೆಟ್ ದರ 150 ರಿಂದ 250 ರೂಪಾಯಿವರೆಗೆ ಏರಿಕೆಯಾಗಿದೆಯಂತೆ. ಈ‌ ಕುರಿತು ಟ್ರಾವೆಲ್ಸ್ ಮಾಲೀಕರನ್ನ ಕೇಳಿದ್ರೆ ಕೊರೊನಾದಿಂದಾಗಿ ಖಾಸಗಿ ವಾಹನಗಳು ಸಂಕಷ್ಟದಲ್ಲಿವೆ. ಈ ನಷ್ಟವನ್ನ ಸರಿದೂಗಿಸಲು ಹಬ್ಬಗಳ ಸಂದರ್ಭದಲ್ಲಿ ದರ ಜಾಸ್ತಿ ಮಾಡ್ತೀವಿ ಅಂತ ಸಮರ್ಥಿಸಿಕೊಳ್ತಿದ್ದಾರೆ. ಒಟ್ಟಾರೆ, ಖಾಸಗಿ ಬಸ್​ಗಳ ದುಪ್ಪಟ್ಟು ರೇಟ್​ಗೆ ಪ್ರಯಾಣಿಕರು ಕಂಗಾಲಾಗಿರೋದಂತೂ ಸುಳ್ಳಲ್ಲ.

ವರದಿ: ಪೂರ್ಣಿಮಾ, ಟಿವಿ9, ಬೆಂಗಳೂರು

ಇದನ್ನೂ ಓದಿ: ಮುಂಬೈ ದಾಳಿಯ ಉಗ್ರ ಅಜ್ಮಲ್ ಕಸಬ್ ಎಲ್ಲಿದ್ದಾನೆ ಎಂದು ಭಾರತಕ್ಕೆ ತಿಳಿಸಿದ್ದು ನವಾಜ್ ಷರೀಫ್: ಪಾಕ್ ಸಚಿವ

‘ಕೆಜಿಎಫ್ 2’ ಟ್ರೇಲರ್ ಕಂಡು ವಾವ್ ಎಂದ ಸೆಲೆಬ್ರಿಟಿಗಳು

ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು