ಕೆಲವೇ ಗಂಟೆ ಸುರಿದ ಮಳೆಗೆ ಬೆಂಗಳೂರು ತತ್ತರ; ಎಲ್ಲೆಲ್ಲಿ ಎಷ್ಟು ಪ್ರಮಾಣ ಮಳೆ ಸುರಿದಿದೆ? ಇಲ್ಲಿದೆ ವಿವರ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವರುಣ ಅಕ್ಷರಶಃ ಅಟ್ಟಹಾಸ ಮೆರೆದಿದ್ದಾನೆ. ಮಳೆ ಸುರಿದಿದ್ದು ಕೇವಲ ಅರ್ಧ, ಮುಕ್ಕಾಲು ಗಂಟೆಯಾದ್ರೂ, ತಿಂಗಳಿಗಾಗೋವಷ್ಟು ಹೊಡೆತ ಕೊಟ್ಟಿದ್ದಾನೆ.

ಬೆಂಗಳೂರು: ಕೇವಲ ಕೆಲವೇ ಕೆಲವು ಗಂಟೆಗಳ ಕಾಲ ಸುರಿದ ಮಳೆಗೆ ಇಡೀ ಬೆಂಗಳೂರು ತತ್ತರಿಸಿ ಹೋಗಿದೆ(Bengaluru Rains). ಒಂದು ಅಮಾಯಕ ಯುವತಿಯ ಜೀವ ಬಲಿಯಾಗಿದೆ. ಎಲ್ಲೆಂದರಲ್ಲಿ ಮರ, ವಿದ್ಯುತ್ ಕಂಬಗಳು ಧರೆಗುರುಳಿ ಬಿದ್ದಿದ್ದು, ಮಳೆಗೆ ಜನ ಜೀವನ ಅಸ್ತವ್ಯವಸ್ಥವಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವರುಣ ಅಕ್ಷರಶಃ ಅಟ್ಟಹಾಸ ಮೆರೆದಿದ್ದಾನೆ. ಮಳೆ ಸುರಿದಿದ್ದು ಕೇವಲ ಅರ್ಧ, ಮುಕ್ಕಾಲು ಗಂಟೆಯಾದ್ರೂ, ತಿಂಗಳಿಗಾಗೋವಷ್ಟು ಹೊಡೆತ ಕೊಟ್ಟಿದ್ದಾನೆ. ಅದ್ರಲ್ಲೂ ಬೆಂಗಳೂರಿನ ಕೆ.ಆರ್. ಸರ್ಕಲ್ ಬಳಿ ಅಂಡರ್ ಪಾಸ್ನಲ್ಲಿ ಕಾರು ಮುಳುಗಿ, ಅದ್ರಲ್ಲಿದ್ದ ಆರು ಜನರ ಪೈಕಿ ಬಾನುರೇಖಾ ಅನ್ನೋ ಯುವತಿ ಬಲಿಯಾಗಿದ್ದಾಳೆ. ಬೆಂಗಳೂರಿನಲ್ಲಿ ನಿನ್ನೆ(ಮೇ 21) ಆಲಿಕಲ್ಲು ಸಹಿತ ಧಾರಾಕಾರ ಮಳೆಯಾಗಿದ್ದು ಮಳೆ ಪ್ರಮಾಣದ ವಿವರ ಇಲ್ಲಿದೆ.
ಇದನ್ನೂ ಓದಿ: Karnataka Rain: ಭಾನುವಾರ ಕರ್ನಾಟಕದಲ್ಲಿ ಭಾರೀ ಮಳೆಗೆ ಇಬ್ಬರು ಬಲಿ, ಎಲ್ಲೆಲ್ಲಿ ಏನೇನಾಯ್ತು?
ಬೆಂಗಳೂರಿನಲ್ಲಿ ನಿನ್ನೆ ಮಧ್ಯಾಹ್ನದ ಬಳಿಕ ನಗರದಲ್ಲಿ ಸುರಿದ ಮಳೆ ಪ್ರಮಾಣದ ವಿವರ
-
- ರಾಜಮಹಲ್ ಗುಟ್ಟಹಳ್ಳಿ 65.50 ಮಿ.ಮೀ
- ಕೊಟ್ಟಿಗೆಪಾಳ್ಯ 54 ಮಿ.ಮೀ
- ನಾಗವಾರ 49 ಮಿಲಿ ಮೀಟರ್
- ನಂದಿನಿ ಲೇಔಟ್ 48 ಮಿ.ಮೀ
- ಪುಲಿಕೇಶಿ ನಗರ 44 ಮಿ.ಮೀ
- ರಾಜಾಜಿನಗರ 37 ಮಿ.ಮೀ
- ಕೆ.ಆರ್.ಪುರಂ 36 ಮಿ.ಮೀ
- ಕುಶಾಲ್ ನಗರ 35 ಮಿ.ಮೀ
- ಅಗ್ರಹಾರ ದಾಸರಹಳ್ಳಿ 27.50 ಮಿ.ಮೀ
- ಮಾರಪ್ಪನಪಾಳ್ಯ 26 ಮಿ.ಮೀ
- ವಿದ್ಯಾಪೀಠ 25.50 ಮಿ.ಮೀ
- ಬಸವನಪುರ 23.50 ಮಿ.ಮೀ
- ಕೊನೇನ ಅಗ್ರಹಾರ 23.50 ಮಿ.ಮೀ
- ಹೆಮ್ಮಿಗೆಪುರ 22.50 ಮಿ.ಮೀ
- ಗಾಳಿ ಆಂಜನೇಯ ದೇಗುಲ 22.50 ಮಿ.ಮೀ
- ನಾಯಂಡಹಳ್ಳಿ 22 ಮಿ.ಮೀ
- ಹೆಚ್‌ಎಎಲ್ ಏರ್‌ಪೋರ್ಟ್ 21.50 ಮಿ.ಮೀ
- ಆರ್.ಆರ್.ನಗರ 18 ಮಿ.ಮೀ
- ಬಾಗಲಗುಂಟೆ 17 ಮಿಲಿ ಮೀಟರ್
- ಮನೋರಾಯನಪಾಳ್ಯ 17 ಮಿ.ಮೀ
- ವಿಜಯನಗರ 17 ಮಿಲಿ ಮೀಟರ್
- ಕಾಟನ್‌ಪೇಟೆ 33.50 ಮಿ.ಮೀ
- ವಿದ್ಯಾರಣ್ಯಪುರ 32 ಮಿಲಿ ಮೀಟರ್
- ಸಂಪಗಿರಾಮನಗರದಲ್ಲಿ 31 ಮಿಲಿ ಮೀಟರ್ ಮಳೆ ಆಗಿರುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮುಳುಗಿದ ಮಹಾಲಕ್ಷ್ಮೀ ಲೇಔಟ್
ಮಹಾಲಕ್ಷ್ಮೀ ಲೇಔಟ್ನ ಗಣೇಶ ಬ್ಲಾಕ್ಗೆ ಜಲದಿಗ್ಬಂಧನ ಬಿದ್ದಿದ್ದು, ನೂರಾರು ಮನೆಗಳು ಮುಳುಗಿವೆ. ಮನೆಯಲ್ಲಿದ್ದ ಸಾಮಾಗ್ರಿಗಳೂ ನೀರುಪಾಲಾಗಿದ್ದು, ಕಾರು, ಬೈಕ್ಗಳೆಲ್ಲ ನೀರಲ್ಲೇ ನಿಂತಿವೆ. ಮನೆಯವರು ಹೊರ ಬರಲಾಗದೇ ಪರದಾಡ್ತಿದ್ದಾರೆ. ಈ ರೀತಿ ನೀರು ತುಂಬಿದ್ರೆ ಎಲ್ಲಿಗೆ ಹೋಗೋದು ಎಂದು ಸ್ಥಳೀಯರು ನಗರದ ವ್ಯವಸ್ಥೆ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:08 am, Mon, 22 May 23




