Bengaluru Rain: ಭಾರೀ ಮಳೆಯಿಂದ ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್ ಜಾಮ್; ಈ ಮಾರ್ಗಗಳಲ್ಲಿ ಹೋಗದಿರುವುದೇ ಉತ್ತಮ

| Updated By: ಸುಷ್ಮಾ ಚಕ್ರೆ

Updated on: Sep 05, 2022 | 2:31 PM

ಐಟಿ ನಗರವಾದ ಬೆಂಗಳೂರಿನ ಹಲವೆಡೆ ರಸ್ತೆಗಳು ಜಲಾವೃತಗೊಂಡಿದ್ದರಿಂದ ನೂರಾರು ವಾಹನ ಸವಾರರು ಕಚೇರಿಗಳಿಗೆ ತೆರಳಲು ಪರದಾಡಿದರು.

Bengaluru Rain: ಭಾರೀ ಮಳೆಯಿಂದ ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್ ಜಾಮ್; ಈ ಮಾರ್ಗಗಳಲ್ಲಿ ಹೋಗದಿರುವುದೇ ಉತ್ತಮ
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್‌
Follow us on

ಬೆಂಗಳೂರು: ಬೆಂಗಳೂರಿನಲ್ಲಿ (Bengaluru Rains) ನಿನ್ನೆ ರಾತ್ರಿ ಸುರಿದ ಮಳೆಗೆ ಎಲ್ಲಿ ನೋಡಿದರೂ ನೀರು ನಿಂತು ಕೆರೆಯಂತೆ ಕಾಣುತ್ತಿದೆ. ಇದರಿಂದಾಗಿ ವೀಕೆಂಡ್ ರಜೆ ಮುಗಿಸಿ ಆಫೀಸ್​ಗಳಿಗೆ ತೆರಳಲು ಬೆಳಗ್ಗೆ ಮನೆಯಿಂದ ಹೊರಟ ಬೆಂಗಳೂರಿಗರು ರಸ್ತೆಯಲ್ಲೇ ಪರದಾಡುವಂತಾಯಿತು. ಮುಖ್ಯವಾಗಿ ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಜಂಕ್ಷನ್‌ಗಳಲ್ಲಿ ಒಂದಾದ ಮಾರತ್ತಹಳ್ಳಿ-ಸಿಲ್ಕ್ ಬೋರ್ಡ್ ರಸ್ತೆಯಲ್ಲಿ ಭಾರೀ ಟ್ರಾಫಿಕ್ ಜಾಮ್‌ನಿಂದಾಗಿ ಬೆಂಗಳೂರಿಗರು ಇಂದು ಬೆಳಗ್ಗೆ ಕಿರಿಕಿರಿ ಅನುಭವಿಸಿದರು.

ಐಟಿ ನಗರವಾದ ಬೆಂಗಳೂರಿನ ಹಲವೆಡೆ ರಸ್ತೆಗಳು ಜಲಾವೃತಗೊಂಡಿದ್ದರಿಂದ ನೂರಾರು ವಾಹನ ಸವಾರರು ಹಾಗೂ ಚಾಲಕರು ಕಚೇರಿಗಳಿಗೆ ತೆರಳಲು ಪರದಾಡಿದರು. ಜತೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಿರುವ ರಿಚ್‌ಮಂಡ್‌ ರಸ್ತೆಯಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು, ಜನರು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಅನಿವಾರ್ಯವಲ್ಲದಿದ್ದರೆ ಮನೆಯಿಂದ ಹೊರಗೆ ಬಾರದಂತೆ ಸಂಚಾರ ಪೊಲೀಸರು ಜನರಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಧಾರಕಾರ ಮಳೆ: ಜಲಾವೃತಗೊಂಡ ರಸ್ತೆಯಲ್ಲಿ ಸಿಲುಕಿದ ವ್ಯಕ್ತಿಯ ರಕ್ಷಣೆ, ಇಲ್ಲಿದೆ ವೈರಲ್ ವಿಡಿಯೋ

ಈ ಮಾರ್ಗಗಳಲ್ಲಿ ಇಂದು ಸಂಚರಿಸುವುದನ್ನು ಅವಾಯ್ಡ್ ಮಾಡಿ:
ಜಯಂತಿಗ್ರಾಮ ಸರ್ಕಲ್
ಕಲ್ಯಾಣನಗರ ಕೆಳ ಸೇತುವೆ
ಗೆದ್ದಲಹಳ್ಳಿ ರೈಲ್ವೆ ಸೇತುವೆ
ವಡ್ಡರಪಾಳ್ಯ ಜಂಕ್ಷನ್
ಇಕೋ ವರ್ಲ್ಡ್​
ಮಾರತ್ತಹಳ್ಳಿ- ಸಿಲ್ಕ್ ಬೋರ್ಡ್ ಜಂಕ್ಷನ್ ರಸ್ತೆ
ಸರ್ಜಾಪುರ ಮುಖ್ಯ ರಸ್ತೆ
ಹೊರ ವರ್ತುಲ ರಸ್ತೆ

14 ಜಿಲ್ಲೆಗಳಿಗೆ ಹಳದಿ ಅಲರ್ಟ್:
ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ರಾಮನಗರ, ಕೊಡಗು, ಚಾಮರಾಜನಗರ, ಮಂಡ್ಯ, ಮೈಸೂರು, ಶಿವಮೊಗ್ಗ ಮತ್ತು ತುಮಕೂರು ಈ 14 ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಹಳದಿ ಅಲರ್ಟ್ ಘೋಷಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:26 pm, Mon, 5 September 22