20 ಪ್ರಾಥಮಿಕ, 11 ಪ್ರೌಢಶಾಲಾ ಶಿಕ್ಷಕರಿಗೆ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿದ ಸಿಎಂ ಬೊಮ್ಮಾಯಿ

ಇಂದು ಶಿಕ್ಷಕರ ದಿನಾಚರಣೆ ಹಿನ್ನೆಲೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ 20 ಪ್ರಾಥಮಿಕ ಶಿಕ್ಷಕರು, 11 ಪ್ರೌಢಶಾಲಾ ಶಿಕ್ಷಕರಿಗೆ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಮಾಡಲಾಯಿತು.

20 ಪ್ರಾಥಮಿಕ, 11 ಪ್ರೌಢಶಾಲಾ ಶಿಕ್ಷಕರಿಗೆ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿದ ಸಿಎಂ ಬೊಮ್ಮಾಯಿ
ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿದ ಸಿಎಂ ಬೊಮ್ಮಾಯಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Sep 05, 2022 | 1:59 PM

ಬೆಂಗಳೂರು: ಇಂದು ಶಿಕ್ಷಕರ ದಿನಾಚರಣೆ ಹಿನ್ನೆಲೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ 20 ಪ್ರಾಥಮಿಕ ಶಿಕ್ಷಕರು, 11 ಪ್ರೌಢಶಾಲಾ ಶಿಕ್ಷಕರಿಗೆ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಮಾಡಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಿದರು. ಸಮಾರಂಭದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ನಾಗೇಶ್​, ಪರಿಷತ್​ ಸದಸ್ಯರಾದ ಪ್ರತಾಪಸಿಂಹ ನಾಯಕ್​, ಡಿ.ಎಸ್​.ಅರುಣ್, ಶಾಂತಾರಾಂ ಸಿದ್ಧಿ, ಪುಟ್ಟಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಎಲ್ಲರಿಗಿಂತ ದೊಡ್ಡವರು ಅಂದ್ರೆ ಅದು ಗುರು: ಸಿಎಂ ಬಸವರಾಜ ಬೊಮ್ಮಾಯಿ

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಮನುಷ್ಯ ತನ್ನ ಸೃಷ್ಟಿಯಿಂದ ಬುದ್ದಿ ಹೊಂದಿರುತ್ತಾನೆ. ಇತರೆ ಪ್ರಾಣಿಗಳಿಗೂ ಬುದ್ದಿ ಇದೆ. ಆದ್ರೆ ಬುದ್ದಿಯನ್ನು ಬಳಸುವ ಸಾಮರ್ಥ್ಯ ಮನುಷ್ಯನಿಗೆ ಇದೆ. ಬುದ್ದಿಗಿಂತ ಮೊದಲು ಜ್ಞಾನ, ಅಕ್ಷರ, ಭಾಷೆ ಇದೆ. ಈ ಬೆಳವಣಿಗೆಗೆ ಒಂದು ಶಿಸ್ತು, ವ್ಯವಸ್ಥೆ, ರೂಪ ಇದೆ. ಇದೆಲ್ಲವೂ ಬಂದಿದ್ದು ನಮ್ಮ ಶಿಕ್ಷಣದಿಂದ. ಶಿಕ್ಷಕರಿಲ್ಲದ ಶಿಕ್ಷಣ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಜ್ಞಾನದ ಗುರುಗಳು, ಗುರುಕುಲದ ಗುರುಗಳಿದ್ದಾರೆ. ಎಲ್ಲರಿಗಿಂತ ದೊಡ್ಡವರು ಅಂದ್ರೆ ಅದು ಗುರು. ಬದುಕಿನಲ್ಲೂ ಪಠ್ಯದಂತೆ ಮೊದಲು ಪಾಠ, ನಂತರ ಪರೀಕ್ಷೆ, ನಂತರ ಫಲಿತಾಂಶ. ಸರಿ, ತಪ್ಪು ಅನ್ನೋ ಪಾಪ ಪುಣ್ಯ ಅರಿಯೋದು ಶಿಕ್ಷಣದಿಂದಲೇ. ಶಿಕ್ಷಣ ಇಲ್ಲದಿದ್ರೆ ನಮ್ಮ ಮನಸ್ಸನ್ನೇ ನಾವು ಹತೋಟಿಗೆ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದರು.

ಶಿಕ್ಷಕರ ಕರ್ತವ್ಯ ಪ್ರಜ್ಞೆ ಹೇಗಿದೆ ಅಂದ್ರೆ ಮಕ್ಕಳನ್ನು ತಮ್ಮತ್ತ ಸೆಳೆದು ಶಿಕ್ಷಣ ನೀಡುವ ಜವಾಬ್ದಾರಿ ನಿಮಗಿದೆ. ಸಮಾಜಕ್ಕೆ ಗೌರವ ಬರುವಂತೆ ಮಾಡುವ ಜವಾಬ್ದಾರಿ ನಿಮಗಿದೆ. ಆ ಕೆಲಸ ಗೊತ್ತಿದ್ದೋ, ಗೊತ್ತಿಲ್ಲದೇ ನೀವು‌ ಮಾಡ್ತಿದ್ದೀರಿ. ಚಾರಿತ್ರ್ಯ ಕಟ್ಟುವ ಕೆಲಸ ಗುರುಗಳು ಮಾಡ್ತಿದ್ದಾರೆ. ಅರಿವಿನಿಂದ ಮಾಡುವ ಕೆಲಸ ಬಹಳ ಪರಿಣಾಮಕಾರಿ ಆಗಿರಲಿದೆ. ಪರೀಕ್ಷೆ ಕಾಲದಲ್ಲಿ ಚಾರಿತ್ರೆ ಗಟ್ಟಿಯಾಗಿರಬೇಕು ಎಂದು ಹೇಳಿದರು. ಬುದ್ದ, ಬಸವ, ಜೀಸಸ್, ಮೊಹಮ್ಮದ್ ಪೈಗಂಬರ್ ಇವರೆಲ್ಲರೂ ವ್ಯಕ್ತಿಗಳು. ಇವರೆಲ್ಲರೂ ಬದಲಾವಣೆ ತಂದವರು, ಆದರ್ಶ ಆಗಿದ್ದಾರೆ. ಒಬ್ಬ ವ್ಯಕ್ತಿ, ಒಂದೇ ವಿಚಾರ, ಒಂದೇ ಆಚರಣೆ ಆಗಿರಲಿದೆ. ಶಿಕ್ಷಣದಲ್ಲಿ ಬದಲಾವಣೆ ತರಲು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಶಿಕ್ಷಣ, ವಿದ್ಯಾರ್ಥಿ, ಗುರುಗಳು ಎಲ್ಲದರಲ್ಲೂ ಬದಲಾವಣೆ ಬರಬೇಕಿದೆ ಯಾಕಾಗಿ ಶಿಕ್ಷಣ ಅನ್ನೋದು ಮುಖ್ಯ.

ಜಗತ್ತು ಬದಲಾದಂತೆ ಶಿಕ್ಷಣ ನೀಡಬೇಕು

ಇಂದು ವಿಜ್ಞಾನ, ತಂತ್ರಜ್ಞಾನ ಕೂಡ ಬದಲಾಗ್ತಿದೆ. ನಮ್ಮ ಮಕ್ಕಳಿಗೆ ಸಮಾಜದಲ್ಲಿ ಬದಲಾಗುವುದರ ಮೇಲೆ ಶಿಕ್ಷಣ ನೀಡಬೇಕಿದೆ. ಜಗತ್ತು ಬದಲಾಗ್ತಿದ್ದು, ಅದಕ್ಕೆ ತಕ್ಕಂತೆ ಶಿಕ್ಷಣ ನೀಡಬೇಕಿದೆ. ಆ ಜವಾಬ್ದಾರಿ ನಮ್ಮ‌ ಮೇಲಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುವ ಬಹಳ ದೊಡ್ಡ ಜವಾಬ್ದಾರಿ ನಿಮ್ಮ ಮೇಲಿದೆ. ಹೈಸ್ಕೂಲ್ ದಾಟಿದ ಬಳಿಕವೂ ನೆನಪಿನಲ್ಲಿಡುವಂತ ಶಿಕ್ಷಣ ನೀಡಿದ್ರೆ ನೀವು ನಿಜವಾದ ಶಿಕ್ಷಕರು. ಮುಗ್ದತೆ ಮತ್ತು ಆತ್ಮಸಾಕ್ಷಿಯ ಎರಡೂ ವಿಚಾರ ಮನದಟ್ಟು ಮಾಡಿದ್ರೆ ಅದೇ ಶ್ರೇಷ್ಠತೆ. 25 ಸಾವಿರ ಕೋಟಿ ಬಜೆಟ್ ಇದೆ, 19 ಸಾವಿರ ಕೋಟಿ ಸಂಬಳ ಕೊಡಲಾಗ್ತಿದೆ. 23 ಸಾವಿರ ಶಾಲೆಗಳ ನಿರ್ಮಾಣ ಮಾಡಲು ನಿರ್ಧಾರ ಮಾಡಲಾಗುತ್ತಿದೆ.

ಮುಂದಿನ ಆಗಸ್ಟ್ ವೇಳೆಗೆ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡುವ ಗುರಿ ಇದೆ. ಬರುವ ವರ್ಷದಿಂದ ಎಷ್ಟು ಜನ ನಿವೃತ್ತಿ ಆಗ್ತಾರೆ, ಅಷ್ಟೇ ಶಿಕ್ಷಕರಿಗೆ ತರಬೇತಿ ನೀಡಿ ನೇಮಕಾತಿ ಮಾಡುತ್ತೇವೆ. ಇದರಿಂದ ಮಾತ್ರ ಶಿಕ್ಷಣ ಉಳಿಯಲು ಸಾಧ್ಯ. ನಿಯಮ ಮಾಡದಿದ್ರೆ ಗುಣಮಟ್ಟ ಶಿಕ್ಷಣ ಸಿಗೋದಿಲ್ಲ. ನಿಯಮಗಳ ಸರಳೀಕರಣ ಜೊತೆ, ಗುಣಮಟ್ಟದ ಶಿಕ್ಷಣ ನೀಡುವ ಕೆಲಸ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಮಾಜಿ ಲವರ್​ನಿಂದ ಯುವತಿಗೆ ಕಿರುಕುಳ: ಬೈಕ್ ಕದ್ದು, ಜಖಂಗೊಳಿಸಿದ ಯುವಕ
ಮಾಜಿ ಲವರ್​ನಿಂದ ಯುವತಿಗೆ ಕಿರುಕುಳ: ಬೈಕ್ ಕದ್ದು, ಜಖಂಗೊಳಿಸಿದ ಯುವಕ
ಕರ್ನಾಟಕ ಬಿಜೆಪಿಯಲ್ಲಿ ಬದಲಾವಣೆ ಬಿರುಗಾಳಿ: ಯತ್ನಾಳ್ ಸ್ಫೋಟಕ ಹೇಳಿಕೆ
ಕರ್ನಾಟಕ ಬಿಜೆಪಿಯಲ್ಲಿ ಬದಲಾವಣೆ ಬಿರುಗಾಳಿ: ಯತ್ನಾಳ್ ಸ್ಫೋಟಕ ಹೇಳಿಕೆ
ತ್ರಿವಿಕ್ರಮ್ ಡೇಂಜರ್​ ಎಂದ ಭವ್ಯಾ ಗೌಡ; ರಾಧೆಗೆ ಈಗ ಬೇಡವಾದ ಕೃಷ್ಣ
ತ್ರಿವಿಕ್ರಮ್ ಡೇಂಜರ್​ ಎಂದ ಭವ್ಯಾ ಗೌಡ; ರಾಧೆಗೆ ಈಗ ಬೇಡವಾದ ಕೃಷ್ಣ