ಕಾಂಗ್ರೆಸ್ನಲ್ಲಿ ಟಿಕೆಟ್ ಸಿಗಬೇಕು ಅಂದ್ರೆ ಹಿರಿಯ ನಾಯಕರ ಕುಟುಂಬದವರಾಗಿರಬೇಕು; ಇಲ್ಲಾಂದ್ರೆ ಆಗರ್ಭ ಶ್ರೀಮಂತ ಆಗಿರಬೇಕು -ಬ್ರಿಜೇಶ್ ಕಾಳಪ್ಪ
ಕಾಂಗ್ರೆಸ್ ನ ಹಿರಿಯ ಮುಖಂಡರಾಗಿದ್ದ ಬ್ರಿಜೇಶ್ ಕಾಳಪ್ಪ ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. 30 ವರ್ಷಗಳ ಕಾಂಗ್ರೆಸ್ ಒಡನಾಟಕ್ಕೆ ಗುಡ್ ಬೈ ಹೇಳಿ ಸಧ್ಯ ಈಗ ಎಎಪಿ ಸೇರಿದ್ದಾರೆ.
ಬೆಂಗಳೂರು: ನಗರದ ಖಾಸಗಿ ಹೋಟೆಲ್ನಲ್ಲಿ ಬ್ರಿಜೇಶ್ ಕಾಳಪ್ಪ(Brijesh Kalappa) ಕಾಂಗ್ರೆಸ್ ತೊರೆದು ಆಮ್ ಆದ್ಮಿ ಪಕ್ಷ ಸೇರಿದ್ದಾರೆ. ಆಪ್ ರಾಜ್ಯ ಉಸ್ತುವಾರಿ ದಿಲೀಪ್ ಪಾಂಡೆ ಸಮ್ಮುಖದಲ್ಲಿ ಪಕ್ಷದ ಟೋಪಿ ತೊಡಿಸಿ ಎಎಪಿ ನಾಯಕರು ಬ್ರಿಜೇಶ್ ಕಾಳಪ್ಪ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.
ಕಾಂಗ್ರೆಸ್ ನ ಹಿರಿಯ ಮುಖಂಡರಾಗಿದ್ದ ಬ್ರಿಜೇಶ್ ಕಾಳಪ್ಪ ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. 30 ವರ್ಷಗಳ ಕಾಂಗ್ರೆಸ್ ಒಡನಾಟಕ್ಕೆ ಗುಡ್ ಬೈ ಹೇಳಿ ಸಧ್ಯ ಈಗ ಎಎಪಿ ಸೇರಿದ್ದಾರೆ. ಎಎಪಿ ಮುಖಂಡರು ಬ್ರಿಜೇಶ್ ಕಾಳಪ್ಪ ಅವರನ್ನು ಎಎಪಿ ಟೋಪಿ ತೊಡಿಸಿ ಪಕ್ಷಕ್ಕೆ ಬರಮಾಡಿಕೊಂಡಿದ್ದು ಪಕ್ಷದ ಧ್ವಜ ಹಿಡಿಯುವ ಮೂಲಕ ಎಎಪಿ ಸೇರ್ಪಡೆಗೊಂಡಿದ್ದಾರೆ. ಆಪ್ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಕೆ.ಮಥಾಯಿ, ಮೋಹನ್ ದಾಸರಿ ಉಪಸ್ಥಿತರಿದ್ದರು.
ಇನ್ನು ಇದೇ ವೇಳೆ ಮಾತನಾಡಿದ ಬ್ರಿಜೇಶ್ ಕಾಳಪ್ಪ, ಕಾಂಗ್ರೆಸ್ನಲ್ಲಿ ಟಿಕೆಟ್ ಸಿಗಬೇಕು ಅಂದ್ರೆ ಹಲವು ಹೆದ್ದಾರಿಗಳಿವೆ. ಒಂದು ರಾಜ್ಯಮಟ್ಟದ ನಾಯಕರ ಕುಟುಂಬದವರಾಗಿರಬೇಕು. ಎರಡನೇಯದು ಆಗರ್ಭ ಶ್ರೀಮಂತ ಆಗಿರಬೇಕು. ಇದು ಬಿಟ್ಟು ಬೇರೆಬೇರೆ ದಾರಿಗಳಿವೆ, ಆ ಬಗ್ಗೆ ಮಾತನಾಡಲ್ಲ. ದುಡ್ಡು ಇದ್ದರೆ ಕೆಜಿಎಫ್ ಬಾಬು ರೀತಿ ಪರಿಷತ್ ಟಿಕೆಟ್ ಸಿಗುತ್ತೆ ಎಂದು ಆಪ್ ಸೇರ್ಪಡೆ ಬಳಿಕ ಕಾಂಗ್ರೆಸ್ ವಿರುದ್ಧ ಬ್ರಿಜೇಶ್ ವಾಗ್ದಾಳಿ ನಡೆಸಿದ್ದಾರೆ.
ಮೇ ಕೊನೆಯಲ್ಲಿ ಕಾಂಗ್ರೆಸ್ ಪಕ್ಷ ಬಿಟ್ಟಿದ್ದೆ. 2018ರಿಂದಲೂ ನಮಗೆ ನೀರಿನ ಕೊರತೆ ಇಲ್ಲ. ಮೊದಲೆಲ್ಲಾ ನೀರಿಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಬೇಕಿತ್ತು. ಈಗ ಅಂತಹ ಪರಿಸ್ಥಿತಿ ಇಲ್ಲ. ಕಾರಣ ಪ್ರತಿ 25 ವರ್ಷಗಳಿಗೊಮ್ಮೆ ವಾಟರ್ ಸೈಕಲ್ ಬದಲಾಗುತ್ತದೆ. ಮಳೆ ಸುರಿಯೋದು ಹೆಚ್ಚಾಗುತ್ತದೆ. ಅದೇ ರೀತಿ ಕಾಲ ಬದಲಾದಂತೆ ರಾಜಕೀಯ ಪ್ರಕ್ರಿಯೆಗಳು ಕೂಡ ಬದಲಾಗುತ್ತಿರುತ್ತವೆ. ದೆಹಲಿ ನಂತರ ಪಂಜಾಬ್ ನಲ್ಲಿ ಅಧಿಕಾರ ಸಿಕ್ಕಿದೆ. ಕಾಂಗ್ರೆಸ್ ಪಕ್ಷ ಒಬ್ಬ ಸಿನ್ಸಿಯರ್ ವ್ಯಕ್ತಿಯನ್ನ ಕೇವಲ ಕಾರ್ಯಕರ್ತ ನನ್ನಾಗಿಯೇ ಇಟ್ಟಿದೆ. ಒಬ್ಬ ಕಾರ್ಯಕರ್ತ ಈಗ ಬಂದು ಎಎಪಿ ಸೇರ್ಪಡೆಯಾಗುತ್ತಿದ್ದೇನೆ ಎಂದು ಅಸಮಾಧಾನ ಹೊರ ಹಾಕಿದ್ರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:32 pm, Mon, 5 September 22