ಬೆಂಗಳೂರು, ಮೇ.09: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆಯ(Bengaluru Rain) ದರ್ಶನಕ್ಕಾಗಿ ಕಾದು ಕಾದು ಸುಸ್ತಾಗಿದ್ದರು. ವರುಣ ದೇವನಿಗಾಗಿ ಹಲವರು ಪ್ರಾರ್ಥನೆ ಕೂಡ ಮಾಡಿದ್ದರು. ಅದರಂತೆ ವರುಣ ಕೃಫೆ ತೋರಿದ್ದು, ಕಳೆದ ನಾಲ್ಕೈದು ದಿನಗಳಿಂದ ಸಿಲಿಕಾನ್ ಸಿಟಿಯಲ್ಲಿ ಭರ್ಜರಿ ಮಳೆಯಾಗಿದೆ. ಬಿಸಿಲಿನ ಬೇಗೆಗೆ ಕಂಗಾಲಾಗಿದ್ದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಇದೇ ಮಳೆ ನಗರದ ಕೆಲವೆಡೆ ಅನಾಹುತವನ್ನೇ ಸೃಷ್ಟಿ ಮಾಡಿದ್ದು, ನಿನ್ನೆ ಸುರಿದ ಮಳೆಗೆ ಬೆಂಗಳೂರಿನ ಹಲವೆಡೆ ಮರಗಳು ಧರೆಗುರುಳಿದಿವೆ.
ಬಿರುಗಾಳಿ ಸಹಿತ ಮಳೆಯ ಆರ್ಭಟಕ್ಕೆ ಮರಗಳು, ರೆಂಬೆ, ಕೊಂಬೆ ಉರುಳಿದ ಬಗ್ಗೆ ಪಾಲಿಕೆ ಹೆಲ್ಪ್ ಲೈನ್ಗೆ ನೂರಾರು ದೂರುಗಳು ದಾಖಲಾಗಿವೆ. ಜೊತೆಗೆ ವಿವಿಧ ವಲಯಗಳಿಂದ ಮರ ಬಿದ್ದ ಬಗ್ಗೆ ದೂರು ಬರುತ್ತಿದ್ದಂತೆ ಸಿಬ್ಬಂದಿಗಳು ತೆರಳಿ ಸಮಸ್ಯೆ ಬಗೆಹರಿಸಿದ್ದಾರೆ.
ದೂರು ದಾಖಲು | ತೆರವು |
ಆರ್.ಆರ್. ನಗರ – 70 | 04 |
ದಕ್ಷಿಣ ವಲಯ -16 | 08 |
ಬೊಮ್ಮನಹಳ್ಳಿ -2 | 02 |
ಪಶ್ಚಿಮ ವಲಯ -30 | 10 |
ಯಲಹಂಕ ವಲಯ -7 | 03 |
ಪೂರ್ವವಲಯ -24 | 12 |
ದಾಸರಹಳ್ಳಿ ವಲಯ -3 | 01 |
ಇನ್ನು ಆರ್.ಆರ್. ನಗರ ವಲಯದಿಂದ ಅತೀ ಹೆಚ್ಚು ಅಂದರೆ ಬರೊಬ್ಬರಿ 70 ಮರ ಬಿದ್ದ ದೂರು ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮಳೆ ಅವಾಂತರ, ಬೋರ್ ಬ್ಯಾಂಕ್ ರಸ್ತೆ ಕುಸಿತ
ಮಳೆಗಾಲ ಶುರುವಾದ ಹಿನ್ನಲೆ ಈ ಬಾರಿ ಮಳೆ ಅವಾಂತರಗಳನ್ನು ಬೇಗ ಬಗೆಹರಿಸಲು ಬಿಬಿಎಂಪಿ ಹೊಸ ಪ್ಲಾನ್ ಮಾಡಿದ್ದು, ವಲಯವಾರು ವಿಪತ್ತು ನಿರ್ವಹಣೆಯ ಕಂಟ್ರೋಲ್ ರೂಂ ಸ್ಥಾಪನೆ ಮಾಡಿದೆ. ಸಹಾಯವಾಣಿ ಸಂಖ್ಯೆ 1533 ಜೊತೆಗೆ ವಿವಿಧ ಎಂಟು ವಲಯಗಳಲ್ಲಿ ಪ್ರತ್ಯೇಕವಾಗಿ ಕಂಟ್ರೋಲ್ ರೂಮ್ ಓಪನ್ ಆಗಿದೆ.
ಬೊಮ್ಮನಹಳ್ಳಿ ವಲಯ:
080-25732447,25735642,9480685707
ದಾಸರಹಳ್ಳಿ ವಲಯ:
080-28394909,9480685709
ಪೂರ್ವ ವಲಯ:
080-22975803,9480685702
ಮಹದೇವಪುರ ವಲಯ:
080-28512300,9480685706
ರಾಜರಾಜೇಶ್ವರಿ ನಗರ ವಲಯ:
080-28601851,9480685708
ದಕ್ಷಿಣ ವಲಯ:
9480685704,8026566362,8022975703
ಪಶ್ಚಿಮ ವಲಯ:
080-23463366,23561692,9480685703
ಯಲಹಂಕ ವಲಯ:
080-23636671,22975936,9480685705
ತುರ್ತು ಸಂದರ್ಭಗಳಲ್ಲಿ ತಮ್ಮ ವ್ಯಾಪ್ತಿಯ ಕಂಟ್ರೋಲ್ ರೂಂಗೆ ಕರೆ ಮಾಡಿ ದೂರು ಸಲ್ಲಿಸಬಹುದು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:15 pm, Thu, 9 May 24