ಬೆಂಗಳೂರು, ಜೂ.07: ರಾಜ್ಯ ರಾಜಧಾನಿ ಬೆಂಗಳೂರು(Bengaluru) ನಗರದ ಹಲವೆಡೆ ಸಂಜೆಯಾಗುತ್ತಿದ್ದಂತೇ ಮಳೆಯ ಅಬ್ಬರ ಜೋರಾಗಿದೆ. ಕತ್ರಿಗುಪ್ಪೆ, ನಾಗರಬಾವಿ, ರಿಂಗ್‌ರೋಡ್ ಸುತ್ತಮುತ್ತ ಸೇರಿ ಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದರೆ, ಇತ್ತ ಶ್ರೀರಾಮಪುರಂ, ಮೆಜೆಸ್ಟಿಕ್, ಮಲ್ಲೇಶ್ವರಂ, ಮಾಗಡಿ ರೋಡ್, ರಾಜಾಜಿನಗರದ ಕೆಲವಡೆ ತುಂತುರು ಮಳೆ ಆರಂಭವಾಗಿದೆ. ಸಂಜೆ ಶಾಲಾ ಮಕ್ಕಳು, ಕಚೇರಿಗಳಲ್ಲಿ ಕೆಲಸ ಮಾಡುವವರು ಮನೆಗೆ ಹೋಗುವ ಸಮಯವಾಗಿದ್ದು, ಈ ವೇಳೆ ವರುಣನ ಆಗಮನಕ್ಕೆ ಟ್ರಾಫಿಕ್‌ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಗುತ್ತದೆ.
ಇವತ್ತಿನಿಂದ 10 ನೇ ತಾರೀಖಿನವರೆಗೂ ಹವಾಮಾನ ಇಲಾಖೆ ಯಲ್ಲೋ ಅಲರ್ಟ್ ನೀಡಿದೆ. ರಾಜ್ಯದಲ್ಲಿ ಒಂದು ವಾರ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್ 6 ರಿಂದ 8 ರವರೆಗೆ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಹಾಗೂ ಜೂನ್ 8 ರಿಂದ 12 ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಜೊತೆಗೆ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಂತಹ ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಚ್ಚರವಾಗಿರಲು ಹವಾಮಾನ ಇಲಾಖೆ ಸೂಚಿಸಿದೆ.
ಇದನ್ನೂ ಓದಿ:ಬೆಂಗಳೂರು ಸೇರಿ ರಾಜ್ಯಾದ್ಯಂತ ಮುಂದುವರಿದ ಮಳೆ: ಸಿಡಿಲಿಗೆ ಮತ್ತಿಬ್ಬರು ಬಲಿ
ಸಿಲಿಕಾನ್ ಸಿಟಿಯಲ್ಲಿ ನಿನ್ನೆ(ಜೂ.06)ಯೂ ಮಳೆಯ ಅಬ್ಬರ ಜೋರಾಗಿತ್ತು. ಅದು ಮುಂದುವರೆದು ಇಂದು(ಶುಕ್ರವಾರ) ಮುಂಜಾನೆಯೇ ಮಳೆಯ ಆಗಮನವಾಗಿತ್ತು. ನಗರದ ಅನೇಕ ಕಡೆಗಳಲ್ಲಿ ತುಂತುರು ಮಳೆಯಾಗಿತ್ತು. ಇದೀಗ ಸಂಜೆ ಆಗುತ್ತಲ್ಲೇ ಅದರ ಅಬ್ಬರ ಜೋರಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:47 pm, Fri, 7 June 24