ಬೆಂಗಳೂರು, ಜೂ.13: ಮಟ ಮಟ ಮಧ್ಯಾಹ್ನವೇ ಸಿಲಿಕಾನ್ ಸಿಟಿ ಬೆಂಗಳೂರಿನ ಹಲವೆಡೆ ವರುಣನ(Bengaluru Rain) ಆಗಮನವಾಗಿದೆ. ಶಾಂತಿನಗರ, ಇನ್ ಪೆಂಟ್ರಿ ರಸ್ತೆ, ಮಲ್ಲೇಶ್ವರಂ, ಯಶವಂತಪುರ, ಜಾಲಹಳ್ಳಿ, ರಾಜಾಜಿನಗರ, ಸುಂಕದಕಟ್ಟೆ ತಾವರೆಕೆರೆ ಕೊಟ್ಟಿಗೆ ಪಾಳ್ಯ ಕಾಮಾಕ್ಷಿ ಪಾಳ್ಯ, ವಿಲ್ಸನ್ ಗಾರ್ಡ್‌ನ್ , ಬಸವನಗುಡಿ, ಲಾಲ್ ಬಾಗ್, ವಿಜಯನಗರ ಸೇರಿದಂತೆ ತುಂತುರು ಮಳೆ ಶುರುವಾಗಿದೆ. ಇಷ್ಟು ದಿನ ಸಂಜೆಯಾಗುತ್ತಿದ್ದಂತೆ ಶುರುವಾಗುತ್ತಿದ್ದ ಮಳೆ, ಇಂದು ಬೇಗನೇ ಆರಂಭವಾಗಿದ್ದು, ದಿಢೀರ್ ಮಳೆಯಿಂದ ವಾಹನ ಸವಾರರು ಪರದಾಡುವಂತಾಗಿದೆ.
ಹವಾಮಾನ ಇಲಾಖೆ ತಜ್ಞ ಸಿ.ಎಸ್ ಪಾಟೀಲ್, ‘ಇಂದು ಕರಾವಳಿ ಜಿಲ್ಲೆ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಯಲ್ಲಿ ಬಹುತೇಕ ಕಡೆ ಮಳೆಯಾಗಿದೆ. ಯಾದಗಿರಿಯ ನಾರಾಯಣಪುರದಲ್ಲಿ 3 ಸೆ.ಮೀ, ಕೊಪ್ಪಳದ ಕುಷ್ಟಗಿ, ಮುನಿರಾಬಾದ್ 7 ಸೆ.ಮೀ, ಬಳ್ಳಾರಿಯ ಕುದುತಿನಿಯಲ್ಲಿ 3 ಸೆ.ಮೀ ಮಳೆಯಾಗಿದೆ. 17° ಉತ್ತರ ಅಕ್ಷಾಂಶದಲ್ಲಿ 3.1 ರಿಂದ 5.8 ಮೀ ಎತ್ತರದಲ್ಲಿ ಇದ್ದ ಸುಳಿಗಾಳಿ ಕಡಿಮೆ ಆಗಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಇವತ್ತಿನಿಂದ 17ರ ವರೆಗೆ ಹಗುರದಿಂದ, ಸಾಧಾರಣವಾಗಿ ವ್ಯಾಪಕ ಮಳೆಯಾಗಲಿದೆ.
ಇದನ್ನೂ ಓದಿ:Karnataka Rains: ಇಂದು ದಕ್ಷಿಣ ಕನ್ನಡ, ಉಡುಪಿಯಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ, ಆರೆಂಜ್ ಅಲರ್ಟ್
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಬೆಳಗಾವಿ, ಧಾರವಾಡ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ ಹಿನ್ನಲೆ ಇವತ್ತು ಯಲ್ಲೋ ಅಲರ್ಟ್ ನೀಡಲಾಗಿದೆ. ಇವತ್ತಿನಿಂದ ರಾಜ್ಯದಲ್ಲಿ ಮಳೆ ವಿಂಗಡಣೆಯಾಗಲಿದ್ದು, ಮಳೆ ವ್ಯಾಪಕತೆ ಕಡಿಮೆಯಾಗಲಿದೆ. ಬೆಂಗಳೂರಿನಲ್ಲಿ ಇವತ್ತಿನಿಂದ 17ರ ವರೆಗೆ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಜ್ಞ ಸಿ.ಎಸ್.ಪಾಟೀಲ್ ಹೇಳಿದರು.
ಮಂಡ್ಯ ಜಿಲ್ಲೆಯ ಹಲವೆಡೆ ಕಳೆದ ಅರ್ಧ ಗಂಟೆಯಿಂದ ಮಳೆ ಸುರಿಯುತ್ತಿದೆ. ಕೆಲ ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆರಾಯ, ಇಂದು ಆಗಮಿಸಿದ್ದು, ಮಳೆಯಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಇನ್ನು ಗಡೀ ಜಿಲ್ಲೆ ಬಳ್ಳಾರಿಯಲ್ಲಿ ಭಾರೀ ಮಳೆ ಹಿನ್ನಲೆ ಅವಾಂತರವೇ ಸೃಷ್ಟಿಯಾಗಿದೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ ರಸ್ತೆಯ BLPS ಬಳಿ ರಸ್ತೆ ಗುಂಡಿಯಲ್ಲಿ KSRTC ಬಸ್ ಸಿಲುಕಿ ವಿದ್ಯಾರ್ಥಿಗಳ ಪರದಾಟ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:55 pm, Thu, 13 June 24