ದರ್ಶನ್ ಕೇಸ್; ಕಾಲು ಮುರಿದರೂ ಪಿಎಸ್ಐ ಗೆ ಡ್ಯೂಟಿಗೆ ಬರಲು ಹಿರಿಯ ಅಧಿಕಾರಿಗಳಿಂದ ಸೂಚನೆ
ನಟ ದರ್ಶನ್ ಟೀಂನಿಂದ ಕೊಲೆ ಕೇಸ್ ಹಿನ್ನಲೆ ಕಾಲು ಮುರಿದರೂ ಪಿಎಸ್ಐ(PSI)ಗೆ ಕೆಲಸಕ್ಕೆ ಬರುವುದಕ್ಕೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ನಡೆದಿದೆ. ಸಧ್ಯ ವಾಕಿಂಗ್ ಸ್ಟಿಕ್ ಹಿಡಿದುಕೊಂಡೇ ಪಿಎಸ್ಐ ಕುಬೇರ ಎಂಬುವವರು ಡ್ಯೂಟಿಗೆ ಬಂದಿದ್ದಾರೆ.
ಬೆಂಗಳೂರು, ಜೂ.13: ಕಾಲು ಮುರಿದರೂ ಪಿಎಸ್ಐ(PSI)ಗೆ ಕೆಲಸಕ್ಕೆ ಬರುವುದಕ್ಕೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿರುವ ಘಟನೆ ನಡೆದಿದೆ. ಅನ್ನಪೂರ್ಣೇಶ್ವರಿ ನಗರ ಠಾಣೆ(Annapoorneshwari Nagar Police Station) ಪಿಎಸ್ಐ ಆಗಿರುವ ಕುಬೇರ ಅವರು ಕರ್ತವ್ಯದ ವೇಳೆ ಬೈಕ್ ಅಪಘಾತದಲ್ಲಿ ಕಾಲು ಮುರಿದುಕೊಂಡಿದ್ದರು. ಕಳೆದ ಆರು ತಿಂಗಳಿಂದ ಬೆಡ್ ರೆಸ್ಟ್ನಲ್ಲಿದ್ದರೂ ಇಲಾಖೆ ಸಂಬಳ ಹಾಕದೆ, ಕೆಲಸಕ್ಕೆ ಬಂದರೆ ಮಾತ್ರ ಸಂಬಳ ಕೊಡೋದಾಗಿ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.
ದರ್ಶನ್ ಟೀಂನಿಂದ ಕೊಲೆ ಕೇಸ್ ಹಿನ್ನಲೆ ಡ್ಯೂಟಿಗೆ ಕರೆಸಿರೋ ಹಿರಿಯ ಅಧಿಕಾರಿಗಳು
ಆರು ತಿಂಗಳಿಂದ ಸಂಬಳ ಇಲ್ಲದೆ ಇದ್ದರೂ ತನ್ನ ಕುಟುಂಬ ಮತ್ತು ಚಿಕಿತ್ಸೆ ವೆಚ್ಚವನ್ನು ತಾವೇ ನೋಡಿಕೊಂಡಿದ್ದಾರೆ. ಈ ಮಧ್ಯೆ ನಟ ದರ್ಶನ್ ಟೀಂನಿಂದ ಕೊಲೆ ಕೇಸ್ ಹಿನ್ನಲೆ ಕೆಲಸಕ್ಕೆ ಹಾಜರಾಗಲು ಹಿರಿಯ ಅಧಿಕಾರಿಗಳು ಕರೆಸಿದ್ದಾರೆ. ಸಧ್ಯ ವಾಕಿಂಗ್ ಸ್ಟಿಕ್ ಹಿಡಿದುಕೊಂಡೇ ಪಿಎಸ್ಐ ಕುಬೇರ ಡ್ಯೂಟಿಗೆ ಬಂದಿದ್ದಾರೆ. ಈ ಮೂಲಕ ಹಿರಿಯ ಪೊಲೀಸ್ ಅಧಿಕಾರಿಗಳು ಮಾನವೀಯತೆ ಮರೆತರಾ? ಎಂಬ ಪ್ರಶ್ನೆ ಮೂಡಿದೆ.
ಇದನ್ನೂ ಓದಿ:ದರ್ಶನ್ ನೋಡಲು ಕಿಕ್ಕಿರಿದ ಫ್ಯಾನ್ಸ್; ಜೀಪ್ ಹಿಂದೆ ಪೊಲೀಸರ ಓಟ
ನಟ ದರ್ಶನ್ ಮತ್ತು ಗ್ಯಾಂಗ್ನಿಂದ ಅಭಿಮಾನಿ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ತೀವ್ರ ಸ್ವರೂಪ ಪಡೆದಿದೆ. ಈ ಹಿನ್ನಲೆ ಆರೋಪಿ ದರ್ಶನ್ ಹಾಗೂ ಪವಿತ್ರಾ ಸೇರಿ ಎಲ್ಲಾ ಆರೋಪಿಗಳನ್ನು ಕರೆದುಕೊಂಡು ಹೋಗಿ ಕೊಲೆ ನಡೆದ ಪಟ್ಟಣಗೆರೆ ಶೆಡ್‌ನಲ್ಲಿ ನಿನ್ನೆ ಸ್ಥಳ ಮಹಜರು ನಡೆಸಿದ್ದರು. ಬಳಿಕ ಅನ್ನಪೂರ್ಣೇಶ್ವರಿನಗರ ಠಾಣೆಗೆ ವಾಪಸ್ ಕರೆತಂದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:14 pm, Thu, 13 June 24