ದರ್ಶನ್ ವಿರುದ್ಧ ರೌಡಿ ಶೀಟ್ ಓಪನ್? ನಟ ಎದುರಿಸಬೇಕಿರುವ ಸಮಸ್ಯೆಗಳೇನು?

ಕೊಲೆ ಆರೋಪಿ ದರ್ಶನ್ ವಿರುದ್ಧ ರೌಡಿ ಶೀಟ್ ತೆರೆಯಬೇಕು ಎನ್ನಲಾಗುತ್ತಿದೆ. ಯಾವುದೇ ವ್ಯಕ್ತಿಯ ವಿರುದ್ಧ ರೌಡಿ ಶೀಟ್ ಏಕೆ ತೆರೆಯಲಾಗುತ್ತದೆ? ರೌಡಿ ಶೀಟ್ ತೆರೆಯಲು ಅನುಸರಿಸುವ ಮಾನದಂಡಗಳೇನು? ಒಂದೊಮ್ಮೆ ರೌಡಿ ಶೀಟ್ ತೆರೆದರೆ ದರ್ಶನ್ ಎದುರಿಸಬೇಕಾಗಿರುವ ಸಮಸ್ಯೆಗಳೇನು? ಇಲ್ಲಿದೆ ಪೂರ್ಣ ಮಾಹಿತಿ.

ದರ್ಶನ್ ವಿರುದ್ಧ ರೌಡಿ ಶೀಟ್ ಓಪನ್? ನಟ ಎದುರಿಸಬೇಕಿರುವ ಸಮಸ್ಯೆಗಳೇನು?
ದರ್ಶನ್ ಮೇಲೆ ರೌಡಿಶೀಟ್?
Follow us
|

Updated on: Jun 13, 2024 | 11:12 AM

ಕೊಲೆ ಪ್ರಕರಣದ ಆರೋಪಿ ಆಗಿರುವ ನಟ ದರ್ಶನ್ (Darshan Thoogudeepa) ವಿರುದ್ಧ ರೌಡಿ ಶೀಟ್ ತೆರೆಯಬೇಕೆಂಬ ಚರ್ಚೆ ನಡೆಯುತ್ತಿದೆ. ದರ್ಶನ್ ವಿರುದ್ಧ ದಾಖಲಾಗಿರುವ ಈ ಹಿಂದಿನ ಪ್ರಕರಣಗಳು, ದರ್ಶನ್​ರ ಸಾಮಾಜಿಕ ವ್ಯಕ್ತಿತ್ವ ಇನ್ನಿತರೆಗಳನ್ನು ಪರಿಗಣಿಸಿ ರೌಡಿ ಶೀಟ್ ತೆರೆಯುವ ಬೇಕೆನ್ನುವ ಒತ್ತಾಯ ಕೇಳಿ ಬರುತ್ತಿದೆ. ಈ ಬಗ್ಗೆ ಹಿರಿಯ ಪೊಲೀಸರೊಟ್ಟಿಗೆ ಚರ್ಚಿಸಿ ನಿರ್ಣಯಿಸುವುದಾಗಿ ಸ್ವತಃ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಯಾವುದೇ ವ್ಯಕ್ತಿ ವಿರುದ್ಧ ರೌಡಿ ಶೀಟ್ ತೆರೆಯಲು ಪೊಲೀಸರು ಅನುಸರಿಸಬೇಕಾದ ಮಾನದಂಡಗಳೇನು? ರೌಡಿ ಶೀಟ್ ತೆರೆದರೆ ದರ್ಶನ್ ಎದುರಿಸಬೇಕಾದ ಸಮಸ್ಯೆಗಳೇನು? ಇಲ್ಲಿದೆ ಮಾಹಿತಿ.

ಸಿಕ್ಕ ಸಿಕ್ಕ ವ್ಯಕ್ತಿಗಳ ಮೇಲೆಲ್ಲ ಪೊಲೀಸರು ರೌಡಿ ಶೀಟ್ ತೆರೆಯಲು ಸಾಧ್ಯವಿಲ್ಲ. ಪೊಲೀಸರು ಕೆಲವು ಮಾನದಂಡಗಳನ್ನು ಪಾಲಿಸಿಯೇ ರೌಡಿ ಶೀಟ್ ತೆರೆಯಬೇಕಾಗಿರುತ್ತದೆ. ವ್ಯಕ್ತಿಯೊಬ್ಬ ಸರಣಿ ಅಪರಾಧ ಪ್ರಕ್ರಿಯೆಗಳಲ್ಲಿ ಭಾಗಿಯಾಗಿದ್ದರೆ, ಅಥವಾ ಆರೋಪಿತನಾಗಿ ಆತ ಮಾಡಿದ್ದಾನೆ ಎನ್ನಲಾಗುತ್ತಿರುವ ಕೃತ್ಯಗಳಿಗೆ ಪೊಟಿನ್ಶಿಯಲ್ ಎವಿಡೆನ್ಸ್​ಗಳಿದ್ದರೆ ಅಥವಾ ಗಲಭೆ, ಹಲ್ಲೆ ಇನ್ನಿತರೆ ಮಾದರಿಯ ದೂರುಗಳು ದಾಖಲಾಗಿ ಎನ್​ಸಿಆರ್​ಗಳು ದಾಖಲಾಗಿದ್ದರೆ ಅಂಥಹಾ ವ್ಯಕ್ತಿ ಸಮಾಜಕ್ಕೆ ಮಾರಕ ಎಂದು ಗುರುತಿಸಿ ಆತನ ವಿರುದ್ಧ ರೌಡಿ ಶೀಟ್ ತೆರೆಯಬಹುದು.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಒಬ್ಬ ವ್ಯಕ್ತಿ ಈ ಹಿಂದೆ ಮಾಡಿದ ಅಪರಾಧಗಳು ನ್ಯಾಯಾಲಯದಲ್ಲಿ ಸಾಭೀತಾಗದೇ ಇದ್ದಾಗಲೂ ಸಹ ಆತನ ಮೇಲಿರುವ ಆರೋಪಗಳು, ದೂರುಗಳನ್ನು ಆಧರಿಸಿ ಸಹ ಪೊಲೀಸರು ರೌಡಿ ಶೀಟ್ ತೆರೆಯಬಹುದು. ಸಾಮಾನ್ಯವಾಗಿ, ದರೋಡೆ, ಕೊಲೆ, ಕೊಲೆ ಯತ್ನ, ಹಲ್ಲೆ, ಅಪಹರಣ, ಅತ್ಯಾಚಾರ, ಅತ್ಯಾಚಾರ ಯತ್ನ ಇಂಥಹಾ ಪ್ರಕರಣಗಳಲ್ಲಿ ಪದೇ ಪದೇ ಹೆಸರು ಕೇಳಿ ಬರುವ ವ್ಯಕ್ತಿಗಳ ವಿರುದ್ಧ ಪೊಲೀಸರು ರೌಡಿ ಶೀಟ್ ತೆರೆಯುತ್ತಾರೆ. ಕೇವಲ ಎನ್​ಸಿಆರ್ ಅನ್ನು ಆಧರಿಸಿಯೂ ಸಹ ರೌಡಿ ಶೀಟ್ ತೆರೆದ ಹಲವು ಉದಾಹರಣೆಗಳು ರಾಜ್ಯದಲ್ಲಿವೆ. ರೌಡಿ ಶೀಟ್ ತೆರೆಯುವಲ್ಲಿ ಪೊಲೀಸರ ವಿವೇಚನೆಯೂ ಪ್ರಮುಖ ಪಾತ್ರವಹಿಸುತ್ತದೆ.

ಇದನ್ನೂ ಓದಿ:‘ದರ್ಶನ್ ಓರ್ವ ರೌಡಿ, 10 ವರ್ಷದ ಹಿಂದೆಯೇ ಆ ಮುಖ ನೋಡಿದ್ದೇವೆ’; ಹೊರಬಿತ್ತು ಶಾಕಿಂಗ್ ಹೇಳಿಕೆ

ದರ್ಶನ್ ಚಾರಿತ್ರ್ಯ ರೌಡಿ ಶೀಟ್ ತೆರೆಯಲು ಸೂಕ್ತವಾಗಿದೆಯೇ? ಎಂಬ ಪ್ರಶ್ನೆಗೆ ಹೆಸರು ಹೇಳಲಿಚ್ಚಿಸದ ಪೊಲೀಸ್ ಅಧಿಕಾರಿಯೊಬ್ಬರು, ಖಂಡಿತ ಹೌದು ಎನ್ನುತ್ತಾರೆ. ದರ್ಶನ್ ಮೇಲೆ ಈಗಾಗಲೇ ಹಲ್ಲೆ ಪ್ರಕರಣ ದಾಖಲಾಗಿದೆ. ಕಾನೂನು ಮೀರಿ ವರ್ತಿಸಿದ ಘಟನೆಗಳು ಹಲವು ಬಾರಿ ವರದಿಯಾಗಿವೆ. ಅವರ ಆಸು-ಪಾಸಿರುವ ಕೆಲವರ ಮೇಲೂ ಸಹ ಕೆಲವು ಕ್ರಿಮಿನಲ್ ಮೊಕದ್ದಮೆಗಳಿವೆ. ಅವರು ಮಾಧ್ಯಮಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ನೀಡಿರುವ ‘ರೌಡಿತನದ’ ಹೇಳಿಕೆಗಳು, ಹಿಂಸೆಗೆ ಪ್ರೇರೇಪಿಸುವ, ತಾನು ಹಿಂಸೆಗೆ ಇಳಿಯಬಲ್ಲೆ ಎಂಬರ್ಥ ನೀಡುವ ರೀತಿ ಆಡಿರುವ ಮಾತುಗಳನ್ನು ಸಹ ಪರಿಗಣಿಸಬಹುದು. ಅಲ್ಲದೆ ದರ್ಶನ್ ಮೇಲೆ ಕಾಲ-ಕಾಲಕ್ಕೆ ಇಂಥಹಾ ಆರೋಪಗಳು ಪದೇ ಪದೇ ಕೇಳಿ ಬರುತ್ತಿರುವ ಕಾರಣ ಅವರನ್ನು ಸೀರಿಯಲ್ ಅಫೆಂಡರ್ ಎಂದು ಪರಿಗಣಿಸಿ ರೌಡಿ ಶೀಟ್ ತೆರೆಯಬಹುದು ಎನ್ನುತ್ತಾರೆ ಅವರು.

ಇನ್ನು ರೌಡಿಶೀಟ್ ತೆರೆದ ವ್ಯಕ್ತಿ ಎದುರಿಸಬೇಕಾದ ಸಮಸ್ಯೆಗಳೇನು ಎಂದರೆ, ಆತನನ್ನು ಸಮಾಜಕ್ಕೆ ಮಾರಕ ಎಂದು ಪೊಲೀಸ್ ವ್ಯವಸ್ಥೆ ಗುರುತಿಸುತ್ತದೆ. ಆತನ ಎಲ್ಲ ರೀತಿಯ ಚಲನ ವಲನಗಳ ಮೇಲೆ ನಿಗಾ ಇಟ್ಟಿರುತ್ತದೆ. ಆತನ ಸಹಚರರ ಮೇಲೂ ನಿಗಾ ಇಟ್ಟಿರಲಾಗುತ್ತದೆ. ಆತನ ಬ್ಯಾಂಕ್ ಖಾತೆಗಳ ಮೇಲೂ ಸಹ ನಿಗಾ ಇಡಲಾಗಿರುತ್ತದೆ. ಅಲ್ಲದೆ ಆತ ವಾಸಿಸುವ ಪ್ರದೇಶದಲ್ಲಿ ಯಾವುದೇ ಜಾತ್ರೆ, ಚುನಾವಣೆ ಇತರೆ ಪ್ರಮುಖ ಕಾರ್ಯಕ್ರಮಗಳು ನಡೆಯುವುದಿದ್ದರೆ ಆತನನ್ನು ವಶಕ್ಕೆ ಪಡೆದು ಗಡಿಪಾರು ಮಾಡಲಾಗುತ್ತದೆ. ಆತನ ಪಾಸ್ ಪೋರ್ಟ್ ಜಪ್ತಿಯಾಗುತ್ತದೆ. ವಿದೇಶಕ್ಕೆ ಹೋಗಬೇಕಂದರೆ ಕಾರಣವನ್ನು ನೀಡಿಯೇ ವಿದೇಶಕ್ಕೆ ತೆರಳಬೇಕಾಗುತ್ತದೆ. ಪೊಲೀಸರು ನಡೆಸುವ ರೌಡಿ ಪೆರೆಡ್​ಗೆ ಹಾಜರಾಗಬೇಕಾಗುತ್ತದೆ. ಕೋಮು ಗಲಭೆ ಅಥವಾ ರಾಜಕೀಯ ಗಲಭೆಗಳಾದಾಗ ಪೊಲೀಸರು ಮೊದಲಿಗೆ ರೌಡಿ ಶೀಟರ್​ಗಳನ್ನು ವಶಕ್ಕೆ ಪಡೆದು ವಿಚಾರಿಸುತ್ತಾರೆ. ಕೆಲವು ಸಾಮಾಜಿಕ ನಿರ್ಬಂಧಗಳನ್ನು ರೌಡಿ ಶೀಟರ್ ಎದುರಿಸಬೇಕಾಗುತ್ತದೆ.

ಒಮ್ಮೆ ಒಬ್ಬ ವ್ಯಕ್ತಿಯ ಮೇಲೆ ರೌಡಿ ಶೀಟ್ ತೆರೆದರೆ ಕನಿಷ್ಟ ನಾಲ್ಕು ವರ್ಷಗಳ ಕಾಲವಾದರು ಅದು ಹಾಗೆಯೇ ಇರುತ್ತದೆ. ರೌಡಿ ಶೀಟರ್​ನ ಚಲನ ವಲನ ಗಮನಿಸಿ ಆತನ ವ್ಯಕ್ತಿತ್ವದಲ್ಲಿ ಸುಧಾರಾಣೆ ಆಗಿದೆ ಎಂದು ಪೊಲೀಸರಿಗೆ ಅನಿಸಿದರೆ ಅವರು ಎಸ್​ಪಿಗೆ (ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ)ಗೆ ವರದಿ ನೀಡುತ್ತಾರೆ. ಯಾವುದೇ ವ್ಯಕ್ತಿಯನ್ನು ರೌಡಿ ಶೀಟ್​ನಿಂದ ತೆಗೆಯುವ ಅಧಿಕಾರ ಎಸ್​ಪಿಗೆ ಮಾತ್ರವೇ ಇದೆ. ಸ್ಥಳೀಯ ಪೊಲೀಸರು ನೀಡುವ ವರದಿಯನ್ನು ಆಧರಿಸಿ ಎಸ್​ಪಿ ರೌಡಿ ಶೀಟ್ ಅನ್ನು ತೆಗೆಯುತ್ತಾರೆ. ಇಲ್ಲವಾದರೆ ಇಲ್ಲ. ಕೆಲವರು ತಮ್ಮ ಮೇಲೆ ರೌಡಿ ಶೀಟ್ ತೆರೆದಿರುವುದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗಿರುವ ಪ್ರಕರಣಗಳಿವೆ. ಅಲ್ಲಿ ಕೆಲವರಿಗೆ ಜಯವಾಗಿದೆ. ಕೆಲವರಿಗೆ ಜಯವಾಗಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?