‘ದರ್ಶನ್ ಓರ್ವ ರೌಡಿ, 10 ವರ್ಷದ ಹಿಂದೆಯೇ ಆ ಮುಖ ನೋಡಿದ್ದೇವೆ’; ಹೊರಬಿತ್ತು ಶಾಕಿಂಗ್ ಹೇಳಿಕೆ
ಹತ್ತು ವರ್ಷಗಳ ಹಿಂದಿನ ಕರಾಳ ಘಟನೆಯನ್ನು ಟಿವಿ9 ಕನ್ನಡದ ಎದುರು ಸಂತ್ರಸ್ತ ಕುಟುಂಬದವರು ರಿವೀಲ್ ಮಾಡಿದ್ದಾರೆ. ಪರಿಹಾರ ಕೇಳಲು ಹೋದವರಿಗೆ ನಾಯಿ ಛೂ ಬಿಟ್ಟು ವಿಕೃತಿ ಮೆರೆಯಲಾಗಿದೆ. ನಟ ದರ್ಶನ್ ಹೀರೋ ಅಲ್ಲ ವಿಲನ್ ಎಂದು ಸಂತ್ರಸ್ತರು ಆಕ್ರೋಶ ಹೊರಹಾಕಿದ್ದಾರೆ.
ನಟ ದರ್ಶನ್ (Darshan) ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗಿದ್ದಾರೆ. ಸದ್ಯ ಈ ಪ್ರಕರಣದ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಈ ಬೆನ್ನಲ್ಲೇ ಅವರ ಮತ್ತೊಂದು ಪ್ರಕರಣ ಹೊರಬಿದ್ದಿದೆ. ಟಿ. ನರಸೀಪುರ ಸಮೀಪದ ತೂಗುದೀಪ ಫಾರ್ಮ್ಹೌಸ್ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನ ಕಥೆ ಇದು. ಮಹೇಶ್ ಎಂಬುವವರ ಮೇಲೆ ದರ್ಶನ್ಫಾರ್ಮ್ಹೌಸ್ನ ಎತ್ತು ದಾಳಿ ಮಾಡಿತ್ತು. ಆ ಬಳಿಕ ಮಹೇಶ್ ಹಾಸಿಗೆ ಹಿಡಿದರು. ದರ್ಶನ್ ಕಡೆಯಿಂದ ಪರಿಹಾರವೂ ಸಿಕ್ಕಿಲ್ಲ. ಈ ಬಗ್ಗೆ ಫಾರ್ಮ್ಹೌಸ್ನ ಮಾಜಿ ನೌಕರ, ಮಹೇಶ್ ಸಂಬಂಧಿ ಮಾತನಾಡಿದ್ದಾರೆ. ‘ಮಹೇಶ್ಗೆ ಜೀವ ಒಂದಿದೆ ಅಷ್ಟೇ. ಮಲಗಿದ್ದ ಜಾಗದಲ್ಲೇ ಇದ್ದಾನೆ. ತಿಂಗಳಿಗೆ 2-3 ಸಾವಿರ ರೂಪಾಯಿ ಖರ್ಚಾಗುತ್ತಿದೆ. ದರ್ಶನ್ ಯಾವುದೇ ಸಹಾಯ ಮಾಡಿಲ್ಲ. ಕೇಳಿದ್ದಕ್ಕೆ ಬೆದರಿಕೆ ಹಾಕಿದ್ದಾರೆ. ಅವರು ಓರ್ವ ರೌಡಿ, 10 ವರ್ಷಗಳ ಹಿಂದೆಯೇ ಅವರ ಮುಖ ನೋಡಿದ್ದೇವೆ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಮಧ್ಯ ರಾತ್ರಿ 2 ಗಂಟೆ ಮೇಲೆ ರಕ್ಷಿತಾ ಪ್ರೇಮ್ ಕರೆ ಮಾಡಿದ್ರು: ಧ್ರುವ ಸರ್ಜಾ
ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
