ಬೆಂಗಳೂರಿಗೆ ಜಲದಿಗ್ಬಂಧನ: ಅ.16ರಂದು ಐಟಿ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ನೀಡುವಂತೆ ಸೂಚನೆ

| Updated By: ರಮೇಶ್ ಬಿ. ಜವಳಗೇರಾ

Updated on: Oct 15, 2024 | 10:57 PM

ವಾರದ ಹಿಂದಷ್ಟೆ ರಣರಣ ಅಂತಿದ್ದ ಬೆಂಗಳೂರು ಏಕಾಏಕಿ ಮಳೆಯೂರಾಗಿ ಬದಲಾಗಿದೆ. ಬಂಗಾಳ ಕೊಲ್ಲಿಯ ವಾಯು ಭಾರ ಕುಸಿತದ ಹೊಡೆತಕ್ಕೆ ಸಿಲಿಕಾನ್​ ಸಿಟಿ ಸಂಪೂರ್ಣವಾಗಿ ಜಲಮಯವಾಗಿಟ್ಟಿದೆ. ರಸ್ತೆಗಳು ಕೆರೆಯಂತಾದ್ರೆ ಟ್ರಾಫಿಕ್ ಸಮಸ್ಯೆಗೆ ಜನ ಹೈರಾಣಾಗಿ ಹೋಗಿದ್ದಾರೆ. ಈ ವರುಣಾರ್ಭಟ ನಾಳೆಯೂ ಸಹ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಾಳೆ(ಅಕ್ಟೋಬರ್ 16) ಬೆಂಗಳೂರಿನ ಐಟಿ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ನೀಡುವಂತೆ ಸೂಚನೆ ನೀಡಲಾಗಿದೆ.

ಬೆಂಗಳೂರಿಗೆ ಜಲದಿಗ್ಬಂಧನ: ಅ.16ರಂದು ಐಟಿ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ನೀಡುವಂತೆ ಸೂಚನೆ
ಬೆಂಗಳೂರು ಮಳೆ
Follow us on

ಬೆಂಗಳೂರು, (ಅಕ್ಟೋಬರ್ 15): ಸಿಲಿಕಾನ್ ಸಿಟಿ ಬೆಂಗಳೂರು ಈಗ ಮಳೆಯೂರು ಆಗಿ ಬದಲಾಗಿದೆ. ಹೌದು ಸರಿಸುಮಾರು 24 ಗಂಟೆ ಸುರಿದ ಮಳೆಗೆ ಬೆಂಗಳೂರು ಅಕ್ಷರಶಃ ಮಳೆಯೂರಾಗಿದೆ. ವರುಣನ ಅಬ್ಬರಕ್ಕೆ ರಾಜಧಾನಿ ಸಮಸ್ಯೆಗಳ ಗುಂಡಿಗೆ ಬಿದ್ದಿದೆ. ನಗರದ ಪ್ರಮುಖ ರಸ್ತೆಗಳೇ ಮುಳುಗಿ ಹೋಗಿದ್ದು, ಟ್ರಾಫಿಕ್​ಗೆ ಸವಾರರು ಹೆಣಗಾಡಿಬಿಟ್ಟಿದ್ದಾರೆ. ರಸ್ತೆ ಯಾವುದು? ರಸ್ತೆ ನಡುವೆ ಇರೋ ಗುಂಡಿಗಳ್ಯಾವುದು ಎನ್ನುವುದೇ ತಿಳಿಯದಂತಾಗಿದೆ. ಇನ್ನೂ ನಾಳೆಯೂ (ಅಕ್ಟೋಬರ್ 16)  ಸಹ ಬೆಂಗಳೂರಿಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ ಬೆಂಗಳೂರಿನ ಐಟಿ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ನೀಡುವಂತೆ ಐಟಿ ಕಂಪನಿಗಳಿಗೆ ಸೂಚಿಸಲಾಗಿದೆ.

ಈ ಬಗ್ಗೆ ಇನೋವೇಷನ್ & ಟೆಕ್ನಾಲಜಿ ಸೊಸೈಟಿ ಸುತ್ತೋಲೆ ಹೊರಡಿಸಿದ್ದು, ಮಳೆಯಿಂದ ರಸ್ತೆಗಳಲ್ಲಿ ನೀರು ತಂಬಿದ್ದು, ಟ್ರಾಫಿಕ್ ಜಾಮ್​ ಹಿನ್ನೆಲೆಯಲ್ಲಿ ಕಚೇರಿಗೆ  ತೆರಳಲು ಉದ್ಯೋಗಿಗಳಿಗೆ ಕಷ್ಟವಾಗುತ್ತಿದೆ. ಹೀಗಾಗಿ ವರ್ಕ್ ಫ್ರಂ ಹೋಂಗೆ ಅನುಮತಿ ನೀಡುವಂತೆ ಐಟಿ ಕಂಪನಿಗಳಿಗೆ ಸೂಚಿಸಿದೆ.

ಇದನ್ನೂ ಓದಿ: ಅ.19 ರವರೆಗೆ ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಮಳೆ: ಬೆಂಗಳೂರಿನಲ್ಲಿ ಆರೆಂಜ್ ಅಲರ್ಟ್

ಬೆಂಗಳೂರಿನಲ್ಲಿ ಬಿಟ್ಟು ಬಿಡದೆ ಮಳೆ ಸುರಿಯುತ್ತಿರುವ ಹಿನ್ನೆಲೆ ಎಲ್ಲೆಡೆ ನೀರು ತುಂಬಿದ್ದುಮ ರಸ್ತೆಗಳೆಲ್ಲಾ ನದಿಯಂತಾಗಿವೆ. ಇದರಿಂದ ಎಲ್ಲೆಡೆ ಟ್ರಾಫಿಕ್ ಜಾಮ್​ ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ನಾಳೆಯೂ ಸಹ ಮಳೆ ಮುನ್ಸೂಚನೆ ನೀಡಿರುವುದಿರಂದ ಮುಂಜಾಗ್ರತಾ ಕ್ರಮವಾಗಿ ನಾಳೆ ಬೆಂಗಳೂರಿನಲ್ಲಿ ಐಟಿ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ನೀಡಲು ಅನುಮತಿ ನೀಡುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಳೆ ಆರ್ಭಟ; ಜಲಾವೃತವಾದ ಮಾನ್ಯತಾ ಟೆಕ್​ಪಾರ್ಕ್​ ವಿಡಿಯೋ ವೈರಲ್!

ಇಂದಿನ ಮಳೆಗೆ ಬೆಂಗಳೂರಿನ ಹಲವು ರಸ್ತೆಗಳು ಅಕ್ಷರಶಃ ನರಕ ದರ್ಶನವಾಗಿದೆ. ದೊಡ್ಡ ದೊಡ್ಡ ಗುಂಡಿಗಳ ನಡುವೆ ಮುಳುಗಿ ಹೋದ ರಸ್ತೆಗಳಲ್ಲಿ ಪರತಪಿಸುವಂತಾಯ್ತು. ಬೆಳ್ಳಂದೂರು, ಮಾರತಹಳ್ಳಿ, ಮಾನ್ಯತ ಟೆಕ್​ಪಾರ್ಕ್ ಕೂಡ ಜಲಮಯವಾಗಿಬಿಟ್ಟಿದೆ. ರಸ್ತೆ ಥೇಟ್ ಹೊಳೆಯಂತೆ ಕಾಣ್ತಿದೆ. ORR ಮುಖ್ಯ ರಸ್ತೆಯಲ್ಲಿ ನಿಂತ ನೀರಿನಲ್ಲೇ ವಾಹನಗಳು ದೋಣಿಗಳಂತೆ ಹೋದ್ರೆ, ಕೆಟ್ಟುನಿಂತ ವಾಹನ ತಳ್ಳುತ್ತಲೇ ಸವಾರರು ಹೆಣಗಾಡಿದ್ರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ