ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​​ ಪ್ರಕರಣ: ಬೆಂಗಳೂರಿನ ಇಬ್ಬರು ಎನ್ಐಎ ವಶಕ್ಕೆ

ಮಾರ್ಚ್​ 01 ರಂದು ಬೆಂಗಳೂರಿನ ವೈಟ್​ಫಿಲ್ಡ್​ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಸಂಭವಿಸಿತ್ತು. ಈ ಪ್ರಕರಣವನ್ನು ಪ್ರಾರಂಭದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದರು. ಬಳಿಕ ಪ್ರಕರಣ ತನಿಖೆಯನ್ನು ಎನ್​ಐಎ ಕೈಗೆತ್ತಿಕೊಂಡಿದ್ದು, ಬೆಂಗಳೂರು ಮೂಲದ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದೆ.

ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​​ ಪ್ರಕರಣ: ಬೆಂಗಳೂರಿನ ಇಬ್ಬರು ಎನ್ಐಎ ವಶಕ್ಕೆ
ರಾಮೇಶ್ವರಂ ಕೆಫೆ, ಎನ್​ಐಎ
Edited By:

Updated on: Mar 26, 2024 | 7:42 AM

ಬೆಂಗಳೂರು, ಮಾರ್ಚ್​​ 26: ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಸಂಭವಿಸಿದ್ದ ಬಾಂಬ್​ ಸ್ಫೋಟ (Bomb Blast) ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ಬೆಂಗಳೂರು ಮೂಲದ ಇಬ್ಬರನ್ನು ಶನಿವಾರ (ಮಾ.23) ಸಂಜೆ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಇಬ್ಬರು ಬಾಂಬರ್​ ಜೊತೆ ನೇರ ಸಂಪರ್ಕದಲ್ಲಿದ್ದರು ಎಂಬುವುದು ತನಿಖೆಯಲ್ಲಿ ತಿಳಿದು ಬಂದಿದೆ. ಸದ್ಯ ಅಧಿಕಾರಿಗಳು ಇಬ್ಬರನ್ನು ವಿಚಾರಣೆ ನಡೆಸುತ್ತಿದ್ದಾರೆ.

ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​

ಮಾರ್ಚ್​ 01 ರಂದು ಬೆಂಗಳೂರಿನ ವೈಟ್​ಫಿಲ್ಡ್​ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಸಂಭವಿಸಿತ್ತು. ಈ ಪ್ರಕರಣವನ್ನು ಪ್ರಾರಂಭದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದರು. ಬಳಿಕ ಪ್ರಕರಣ ತನಿಖೆಯನ್ನು ಎನ್​ಐಎ ಕೈಗೆತ್ತಿಕೊಂಡಿತು. ಪ್ರಕರಣ ತನಿಖೆ ನಡೆಸುತ್ತಿರುವ ಎನ್​ಐಎ ಅಧಿಕಾರಿಗಳು, ಆರೋಪಿಯ ಜಾಡು ಹಿಡಿದು ಹೊರಟಿದ್ದಾರೆ. ಪ್ರಕರಣ ಸಂಬಂಧ ಮಾ.13 ರಂದು ಎನ್​ಐಎ ಅಧಿಕಾರಿಗಳು ಬಳ್ಳಾರಿಯಲ್ಲಿ ಶಬ್ಬೀರ್ ಎಂಬಾತನನ್ನು ಬಂಧಿಸಿದ್ದರು.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬರ್‌ ಬೇಟೆಗಾಗಿ ಪೊಲೀಸರ ತಲಾಶ್: ಶಂಕಿತನ ಮತ್ತೊಂದು ದೃಶ್ಯ ಲಭ್ಯ, ಇಲ್ಲಿದೆ ಪ್ರಕರಣದ ಸಮಗ್ರ ಮಾಹಿತಿ

ಬಾಂಬರ್​​ಗೆ ತಮಿಳುನಾಡು ನಂಟು

ಬಾಂಬರ್​ ತಮಿಳುನಾಡಿನಿಂದ ಬಂದು ಬಾಂಬ್ ಇಟ್ಟು ಪರಾರಿಯಾಗಿದ್ದಾನೆ. ಸ್ಫೋಟಕ್ಕೂ ಮುನ್ನ ಆರೋಪಿ ಎರಡು ತಿಂಗಳು ತಮಿಳುನಾಡಿನಲ್ಲಿದ್ದನು. ಬಾಂಬ್​ ಸ್ಫೋಟಗೊಂಡ ದಿನ ಶಂಕಿತ ಉಗ್ರ ಧರಿಸಿದ್ದ 10 ನಂಬರ್  ಅಂತ ಬರೆದಿದ್ದ ಬ್ರ್ಯಾಂಡೆಡ್ ಕ್ಯಾಪ್​ನ​ ಜಾಡು ಹಿಡಿದು ಎನ್​ಐಎ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಆಗ ಕೆಫೆಯಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಧಾರ್ಮಿಕ ಸ್ಥಳದ ಬಳಿ ಶಂಕಿತ ಉಗ್ರ ಟೋಪಿಯನ್ನು ಬಿಟ್ಟು ಶರ್ಟ್​ ಅನ್ನು ತೆಗೆದು, ರೌಂಡ್-ನೆಕ್ ಟೀ ಶರ್ಟ್‌ ಹಾಕಿಕೊಂಡು ಅಲ್ಲಿಂದ ತೆರಳಿರುವುದು ತಿಳಿದಿದೆ. ಕೂಡಲೆ ಅವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಟೋಪಿಯಲ್ಲಿ ಸಿಕ್ಕ ಕೂದಲು ಮಾದರಿಯನ್ನು ಸಂಗ್ರಹ ಮಾಡಲಾಗಿದ್ದು, ಡಿಎನ್​ಎ ಪರೀಕ್ಷೆಗೆ ಕಳುಹಿಸಲಾಗಿದೆ. ಇದು ಶಂಕಿತನ ಕುಟುಂಬ ಸದಸ್ಯರನ್ನು ಪತ್ತೆ ಹಚ್ಚಲು ಸಹಕಾರಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಐಎಸ್​​ಐಎಸ್ ಕೈವಾಡದ ಸಾಧ್ಯತೆ ಬಗ್ಗೆಯೂ ತನಿಖೆ

ಕೆಫೆ ಬಾಂಬ್ ಬ್ಲಾಸ್ಟ್‌ನ ಮತ್ತಷ್ಟು ರಹಸ್ಯಗಳು ಬಯಲಾಗಿವೆ. ಸ್ಥಳೀಯವಾಗಿ ಸಿಗುವ ಪೊಟ್ಯಾಷಿಯಂ ನೈಟ್ರೆಟ್ ಮತ್ತು ಹೈಡ್ರೋಜನ್ ಪೆರಾಕ್ಸೈಡ್ ಬಳಕೆ ಮಾಡಿ ಬಾಂಬ್ ತಯಾರಿಸಿರೋ ಶಂಕೆ ಇದೆ. ಚರ್ಚ್‌ಸ್ಟ್ರೀಟ್ ಬ್ಲಾಸ್ಟ್‌ ಕೇಸ್‌, ಮಂಗಳೂರು ಕುಕ್ಕರ್ ಕೇಸ್‌ನಲ್ಲೂ ಒಬ್ಬನೇ ಬಾಂಬ್ ಇಟ್ಟಿದ್ದಾನೆ. ಇದೇ ಮಾದರಿಯಲ್ಲೇ ರಾಮಶ್ವರಂ ಕೆಫೆಯಲ್ಲೂ ಒಬ್ಬನೇ ಬಾಂಬ್ ಇಟ್ಟಿರೋದ್ರಿಂದ ಸ್ಫೋಟದ ಹಿಂದೆ ಐಎಸ್​​ಐಎಸ್​​ ನೆರಳು ಏನಾದರೂ ಇದೆಯಾ ಅನ್ನೋ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದರ ಜೊತೆಗೆ ಕಳೆದ ಎರಡು ವರ್ಷದಲ್ಲಿ 20ಕ್ಕೂ ಹೆಚ್ಚು ಬಾರಿ ಬೆದರಿಕೆ ಇ-ಮೇಲ್‌ಗಳು ಬಂದಿದೆ. ಈ ಬೆದರಿಕೆ ಇ-ಮೇಲ್‌ಗಳಿಗೂ ಬಾಂಬ್​ ಇಟ್ಟವನಿಗೂ ಲಿಂಕ್ ಇದ್ಯಾ ಅನ್ನೋ ಬಗ್ಗೆಯೂ ತನಿಖೆ ನಡೆಸಲಾಗ್ತಿದೆ. ಒಂದ್ವೇಳೆ ಆರೋಪಿ ಪತ್ತೆಯಾಗದಿದ್ರೆ ರೇಖಾಚಿತ್ರ ಬಿಡುಗಡೆಗೂ ಪ್ಲ್ಯಾನ್ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:22 am, Tue, 26 March 24