Bengaluru Rape: ಬೆಂಗಳೂರಿನ ಚರ್ಚ್​​ನಲ್ಲಿ ಬಾಲಕಿ ಮೇಲೆ ಅತ್ಯಾಚಾರ; 12 ವರ್ಷಗಳ ಬಳಿಕ ವಿಷಯ ಬಯಲು

| Updated By: ಸುಷ್ಮಾ ಚಕ್ರೆ

Updated on: Jul 27, 2022 | 4:06 PM

Bangalore News: ಬೆಂಗಳೂರಿನ ವಿದ್ಯಾರಣ್ಯಪುರ ಬಡಾವಣೆಯ ದೊಡ್ಡಬೆಟ್ಟಹಳ್ಳಿ ಬಳಿಯ ಕಾವೇರಿ ಲೇಔಟ್‌ನ ಚರ್ಚ್‌ನಲ್ಲಿ 2010ರಲ್ಲಿ ಈ ಘಟನೆ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Bengaluru Rape: ಬೆಂಗಳೂರಿನ ಚರ್ಚ್​​ನಲ್ಲಿ ಬಾಲಕಿ ಮೇಲೆ ಅತ್ಯಾಚಾರ; 12 ವರ್ಷಗಳ ಬಳಿಕ ವಿಷಯ ಬಯಲು
ಪ್ರಾತಿನಿಧಿಕ ಚಿತ್ರ
Image Credit source: India.com
Follow us on

ಬೆಂಗಳೂರು: ಬೆಂಗಳೂರಿನಲ್ಲಿ 12 ವರ್ಷಗಳ ಹಿಂದೆ ಚರ್ಚ್​​ವೊಂದರಲ್ಲಿ ನಡೆದಿರುವ ಅತ್ಯಾಚಾರ (Rape Case) ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. ಅತ್ಯಾಚಾರ ಸಂತ್ರಸ್ತೆ 12 ವರ್ಷಗಳ ಹಿಂದೆ ಬೆಂಗಳೂರಿನ (Bangalore News) ಚರ್ಚ್​​​ನಲ್ಲಿ ತನ್ನ ಮೇಲೆ ಅತ್ಯಾಚಾರ ನಡೆದಿತ್ತು ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆ ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು 8 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಬೆಂಗಳೂರಿನ ಪೊಲೀಸರ ಪ್ರಕಾರ, 8 ಆರೋಪಿಗಳ ಪೈಕಿ 6 ಮಂದಿ ವಿರುದ್ಧ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ ಪ್ರಕರಣಗಳನ್ನು ದಾಖಲಿಸಲಾಗಿದೆ. ಬೆಂಗಳೂರಿನ ವಿದ್ಯಾರಣ್ಯಪುರ ಬಡಾವಣೆಯ ದೊಡ್ಡಬೆಟ್ಟಹಳ್ಳಿ ಬಳಿಯ ಕಾವೇರಿ ಲೇಔಟ್‌ನ ಚರ್ಚ್‌ನಲ್ಲಿ 2010ರಲ್ಲಿ ಈ ಘಟನೆ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಆ ಮಹಿಳೆಗೆ 6 ವರ್ಷವಾಗಿದ್ದಾಗ ಆಕೆಯ ಪೋಷಕರು ಕೆಲಸಕ್ಕೆ ಹೋಗುವ ಮೊದಲು ಆಕೆಯನ್ನು ಚರ್ಚ್‌ನಲ್ಲಿ ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದರು. ಪ್ರತಿದಿನ ಇದೇ ರೂಢಯಾಗಿತ್ತು. ಅವರು ಕೆಲಸದಿಂದ ಹಿಂದಿರುಗಿದ ನಂತರ ತಮ್ಮ ಮಗಳನ್ನು ಕರೆದುಕೊಂಡು ಹೋಗುತ್ತಿದ್ದರು. ಆರೋಪಿ ಸೈಮನ್ ಪೀಟರ್ ಚರ್ಚ್‌ನಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ತನಗೆ ಅಶ್ಲೀಲ ಚಿತ್ರಗಳನ್ನು ತೋರಿಸಿ ಆತ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆರೋಪಿ ಸೈಮನ್ ಪೀಟರ್ ತನಗೆ 14 ವರ್ಷವಾಗುವವರೆಗೂ ತನ್ನ ಮೇಲೆ ಹಲ್ಲೆ ನಡೆಸುತ್ತಿದ್ದ ಎಂದು ಆಕೆ ಪೊಲೀಸರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: Gang Rape: ಚಲಿಸುವ ಕಾರಿನಲ್ಲೇ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಕಾಮುಕರ ಕೃತ್ಯಕ್ಕೆ ಬೆಚ್ಚಿದ ದೆಹಲಿ

ತನ್ನ ಮೇಲಾಗುತ್ತಿದ್ದ ಲೈಂಗಿಕ ದೌರ್ಜನ್ಯವನ್ನು ಸಹಿಸದ ಸಂತ್ರಸ್ತೆ ಚರ್ಚ್‌ನಲ್ಲಿಯೇ ಉಳಿದುಕೊಂಡಿದ್ದ ಸ್ಯಾಮ್ಯುಯೆಲ್ ಡಿಸೋಜಾ ಎಂಬುವವರ ಬಳಿ ಈ ವಿಷಯವನ್ನು ಹೇಳಿದ್ದರು. ಆ ದಂಪತಿಗಳು ಆರೋಪಿಗೆ ಛೀಮಾರಿ ಹಾಕಿದ್ದರು ಮತ್ತು ಸಂತ್ರಸ್ತೆಗೆ ತೊಂದರೆ ನೀಡದಂತೆ ಎಚ್ಚರಿಕೆ ನೀಡಿದ್ದರು. ಇದರಿಂದ ಕೋಪಗೊಂಡ ಸ್ಯಾಮ್ಯುಯೆಲ್ ಡಿಸೋಜಾ ತನ್ನನ್ನು ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದ ಎಂದು ಆಕೆ ಪೊಲೀಸರಿಗೆ ತಿಳಿಸಿದ್ದಾರೆ.

ಸತತ ಲೈಂಗಿಕ ದೌರ್ಜನ್ಯದಿಂದ ಖಿನ್ನತೆಗೆ ಒಳಗಾಗಿದ್ದ ಆಕೆ ಕೌನ್ಸೆಲಿಂಗ್ ಮತ್ತು ಚಿಕಿತ್ಸೆ ಬಳಿಕ ಪೊಲೀಸರಿಗೆ ದೂರು ನೀಡಿದ್ದಳು. ಅತ್ಯಾಚಾರದ ಘಟನೆಯ ಬಗ್ಗೆ ತಿಳಿದ ನಂತರವೂ ಆರು ಆರೋಪಿಗಳು ವಿಷಯವನ್ನು ಮರೆಮಾಚಲು ಪ್ರಯತ್ನಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ, ಸಾಮೂಹಿಕ ಅತ್ಯಾಚಾರ ಮತ್ತು ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Published On - 4:05 pm, Wed, 27 July 22