
ಬೆಂಗಳೂರು, ಜೂನ್ 08: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದಿದ್ದ ಕಾಲ್ತುಳಿತ ಪ್ರಕರಣವನ್ನು ಸದ್ಯ ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಆರ್ಸಿಬಿ (RCB) ವಿಜಯೋತ್ಸವಕ್ಕೆ ಬಂದ್ದಿದ್ದ ಫ್ಯಾನ್ಸ್, ಅಭಿಮಾನದ ಹೆಸರಿನಲ್ಲಿ ಅತಿರೇಕ, ಹುಚ್ಚಾಟ ಮೆರೆದಿದ್ದರು. ಅವರ ರಂಪ, ರಾಮಾಯಣದಿಂದ ಸಾವು-ನೋವುಗಳೊಂದಿಗೆ ಪರಿಸರಕ್ಕೂ ಹಾನಿ ಆಗಿತ್ತು. ಜನರ ಕಾಲ್ತುಳಿತದಿಂದ ನೆಲಮಟ್ಟದ ಗಿಡಗಳು ನೆಲಸಮವಾಗಿವೆ. ಕಬ್ಬನ್ ಪಾರ್ಕ್‌ನ ಗಿಡ, ಮರಗಳಿಗೂ ಹಾನಿ ಉಂಟಾಗಿದೆ. ಹೀಗಾಗಿ ಕಬ್ಬನ್ಪಾರ್ಕ್ ನಡಿಗೆದಾರರ ಸಂಘದ (Park Walkers Association) ಅಧ್ಯಕ್ಷ ಉಮೇಶ್ರಿಂದ ಕಬ್ಬನ್ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಆರ್ಸಿಬಿ ಐಪಿಎಲ್ನಲ್ಲಿ ಕಪ್ ಗೆಲ್ಲುವ ಮೂಲಕ ಕನ್ನಡಿಗರ 18 ವರ್ಷದ ಕನಸು ನನಸಾಗಿತ್ತು. ಇದೇ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದಿದ್ದ ಕಾಲ್ತುಳಿತದಿಂದ 11 ಜನ ಅಮಾಯಕರು ಪ್ರಾಣ ತೆತ್ತರು. ಆದರೆ ವಿಧಾನಸೌಧ ಹಾಗೂ ಹೈಕೋರ್ಟ್ ಮುಂಭಾಗದಲ್ಲಿ ಸೇರಿದ ಭಾರಿ ಜನರ ದಟ್ಟಣೆಯಿಂದಾಗಿ ಬ್ಯಾರಿಕೇಡ್ಗಳು, ನೆಲಮಟ್ಟದ ಗಿಡಗಳನ್ನು ಅಥವಾ ಆರ್ನಮೆಂಟಲ್ ಪ್ಲಾಂಟ್ಸ್ಗಳನ್ನು ಜನ ತುಳಿದು ಹಾಕಿದ್ದಾರೆ. ಇದರಿಂದಾಗಿ ಗಿಡಗಳೆಲ್ಲಾ ಮುರಿದು ಒಣಗಿ ಹೋಗಿ ಸರ್ವನಾಶವಾಗಿವೆ.
ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತಕ್ಕೆ DPRA ನಿರ್ಲಕ್ಷ್ಯ ಬಯಲು, ಅಪಾಯದ ಎಚ್ಚರಿಕೆ ನೀಡಿದ್ದ ಡಿಸಿಪಿ..!
ಕೇವಲ ವಿಧಾನಸೌಧ ಮುಂಭಾಗದ ಗಿಡಗಳಿಗೆ ಮಾತ್ರ ಹಾನಿಯಾಗಿಲ್ಲ. ಎದುರುಗಡೆ ಇರುವ ಕಬ್ಬನ್ ಪಾರ್ಕ್‌ನ ಗೇಟ್ನ್ನು ಹಾರಿ ಜನ ಬಂದಿದ್ದರು. ಜೊತೆಗೆ ಪ್ರಾಣವನ್ನು ಲೆಕ್ಕಿಸದೇ ಮರವೇರಿ ಕುಳಿತ್ತಿದ್ದರು. ಇದರಿಂದ ಸಾಕಷ್ಟು ಮರಗಳಿಗೂ ಡ್ಯಾಮೇಜ್ ಉಂಟಾಗಿದೆ. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ, ಆರ್ಸಿಬಿ, ಕೆಎಸ್ ಸಿಎ, ಡಿಎನ್ಎ ವಿರುದ್ದ ಸಿಡಿ ಸಾಕ್ಷಿ ಸಮೇತ ಕಬ್ಬನ್ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಆರ್ಸಿಬಿ ಸಮಾರಂಭ ವೀಕ್ಷಣೆಗೆ ವಿಧಾನಸೌಧದ ಬಳಿ ಸಾಗರೋಪಾದಿಯಲ್ಲಿ ಫ್ಯಾನ್ಸ್ ಸೇರಿದ್ದರು. ಸಿಕ್ಕ ಸಿಕ್ಕ ಜಾಗಕ್ಕೆ ನುಗ್ಗಿದ್ದರು. ಆದರೆ ಹೀಗೆ ಬಂದೋರು ಹಾಗೇ ಸುಮ್ಮನೆ ಹೋಗ್ಲಿಲ್ಲ. ಬದಲಾಗಿ ವಿಧಾನಸೌಧದ ಗಾರ್ಡನ್ ಏರಿಯಾ, ಕೆಂಪೇಗೌಡ ಪ್ರತಿಮೆ ಬಳಿ ಫೆನ್ಸಿಂಗ್ನ ಪೀಸ್ ಪೀಸ್ ಮಾಡಿದ್ದರು. ಆಕರ್ಷಕ ವಿದ್ಯುತ್ ದೀಪಗಳನ್ನೂ ಧ್ವಂಸ ಮಾಡಿದ್ದರು.
ಇದನ್ನೂ ಓದಿ: Bengaluru stampede: ಬೆಂಗಳೂರು ಕಾಲ್ತುಳಿತ ಪ್ರಕರಣ: ಮಹತ್ವದ ತೀರ್ಮಾನ ಕೈಗೊಂಡ ಬಿಸಿಸಿಐ
ಚಿನ್ನಸ್ವಾಮಿ ಸ್ಟೇಡಿಯಂಗೆ ನುಗ್ಗಲು ಯತ್ನಿಸಿದ ಅಭಿಮಾನಿಗಳು ಗೇಟ್ಗಳನ್ನೇ ಮುರಿದು ಹಾಕಿದ್ದರು. ಗೇಟ್ ನಂ.3ನ್ನು ಮುರಿದು ಹಾಕಿದ್ದ ಅಭಿಮಾನಿಗಳು, ಸ್ಟೇಡಿಯಂ ಒಳಗೂ ದಾಂದಲೆ ಸೃಷ್ಟಿಸಿದ್ದರು. ಹೂ ಕುಂಡಗಳನ್ನೂ ಹೊಡೆದು, ಧ್ವಂಸ ಗೊಳಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:42 pm, Sun, 8 June 25